Breaking News
Home / ನವದೆಹಲಿ (page 46)

ನವದೆಹಲಿ

ಇಂದು ಭೂಮಿ ದಿನ : ಕೊರೊನಾ ಹೋರಾಟಗಾರರಿಗೆ ಪ್ರಧಾನಿ ಕೃತಜ್ಞತೆ

ನವದೆಹಲಿ, ಏ.22- ಇಂದು ಭೂಮಿ ದಿನ. ಈ ಸಂದರ್ಭದಲ್ಲಿ ಭೂಮಿ ತಾಯಿಯ ರಕ್ಷಣೆಗಾಗಿ ನಾವೆಲ್ಲರೂ ಪಣ ತೊಟ್ಟು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಭೂಮಂಡಲವು ಹೆಚ್ಚು ಶುದ್ಧವಾಗಿ, ಆರೋಗ್ಯಕರವಾಗಿ ಮತ್ತು ಮತ್ತಷ್ಟು ಸಮೃದ್ಧವಾಗಿರಬೇಕು. ಇದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಇದಕ್ಕಾಗಿ ದೃಢಸಂಕಲ್ಪ ಮಾಡೋಣ ಎಂದು ಮೋದಿ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಇಂದು ಇಂಟರ್‍ನ್ಯಾಷನಲ್ ಅರ್ಥ್ …

Read More »

ಜ್ಯೂಮ್ ಪರ್ಯಾಯವಾಗಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದರೆ ಕೇಂದ್ರ ಸರ್ಕಾರದಿಂದ  ಒಂದು ಕೋಟಿ

ಹೊಸದಿಲ್ಲಿ: ಜ್ಯೂಮ್ ಪರ್ಯಾಯವಾಗಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದರೆ ಕೇಂದ್ರ ಸರ್ಕಾರದಿಂದ  ಒಂದು ಕೋಟಿ ಮೊತ್ತದ ಬಹುಮಾನ ನೀಡಲು ಘೋಷಿಸಿದೆ. ಲಾಕ್​​ಡೌನ್​​ ಅವಧಿಯಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿರೋ ಜನರು, ಹೆಚ್ಚಾಗಿ ಜ್ಯೂಮ್ ಆ್ಯಪ್ ಅನ್ನು ಹೆಚ್ಚಾಗಿ ಬಳಸೋಕೆ ಶುರು ಮಾಡಿದ್ದರು. ವರ್ಕ್ ಫ್ರಮ್ ಹೋಮ್ ಮಾಡುವ ಪ್ರತಿಷ್ಟಿತ ಕಂಪನಿಗಳ ಸಿಬ್ಬಂದಿ, ಉದ್ಯಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೂಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿಡಿಯೋ ಕಾನ್ಪರೆನ್ಸ್​  ಬಳಕೆ ಮಾಡ್ತಿದ್ರು. ಈ ಜ್ಯೂಮ್ …

Read More »

ಭಾರತದಲ್ಲಿ ಕೊರೋನಾಗೆ ಕಳೆದ 24 ಗಂಟೆಯಲ್ಲಿ 50 ಮಂದಿ ಸಾವು..! 20,000 ಸೋಂಕಿತರು

ನವದೆಹಲಿ/ಮುಂಬೈ,ಏ.22-ವೈದ್ಯರು ಮತ್ತು ಆರೋಗ್ಯರಕ್ಷಕರ ನಿರಂತರ ಹೋರಾಟದ ನಡುವೆಯೂ ದೇಶಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಮುಂದೇನು ಎಂಬ ಆತಂಕ 135 ಕೋಟಿ ಭಾರತೀಯರಲ್ಲಿ ಮನೆ ಮಾಡಿದೆ. ಭಾರತದಲ್ಲಿ ಮೃತರ ಸಂಖ್ಯೆ 650ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 20,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ಮಧ್ಯರಾತ್ರಿವರೆಗಿನ ಅಧಿಕೃತ ವರದಿ …

Read More »

BIG BREAKING : ಭಾರತದಲ್ಲೂ ಮೇ.3ಕ್ಕೆ ಮುಗಿಯಲ್ಲ ಲಾಕ್‍ಡೌನ್‍..!

ನವದೆಹಲಿ, ಏ.22- ವಿಶ್ವಾದ್ಯಂತ ಕಾಡಿರುವ ಕೊರೊನಾ ಸೋಂಕನ್ನು ಹಿಮ್ಮೆಟ್ಟಿರುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ರಾಷ್ಟ್ರಗಳಲ್ಲಿ ಲಾಕ್‍ಡೌನ್‍ಅನ್ನು ಜೂನ್‍ವರೆಗೂ ಮುಂದುವರಿಸಲಾಗಿದೆ. ಇದರ ನಡುವೆ ಭಾರತದಲ್ಲೂ ಮೇ 3ರ ನಂತರ ಮತ್ತೆ ಇದೇ ಪರಿಸ್ಥಿತಿ ಮುಂದುವರಿಯಲಿದೆಯೇ ಎಂಬ ಚರ್ಚೆ ಶುರುವಾಗಿದೆ. ಅಮೆರಿಕ, ಸ್ಪೇನ್, ಇಟಲಿ, ಫ್ರಾನ್ಸ್, ರಷ್ಯಾ ಸೇರಿದಂತೆ ಮುಂದುವರಿದ ರಾಷ್ಟ್ರಗಳು ಕೊರೊನಾ ಹತೋಟಿಗೆ ತರಲು ಲಾಕ್‍ಡೌನ್‍ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಮುಂಬರುವ ಮೇ ಅಂತ್ಯದವರೆಗೆ ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ …

Read More »

ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

ನವದೆಹಲಿ: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಸಂಬಂಧ ಸಾರ್ವಜನಿಕರಲ್ಲಿ ನೂರಾರು ಪ್ರಶ್ನೆಗಳಿವೆ. ಈ ಗೊಂದಲಗಳನ್ನು ಬಗೆಹರಿಸಲು ಈಗ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ವಿನೂತನ ಪ್ರಯೋಗವೊಂದನ್ನು ಆರಂಭಿಸಿದೆ. ಟ್ವಿಟರ್‌ನಲ್ಲಿ @CovidIndiaSeva ಗೆ ಸಾರ್ವಜನಿಕರು ನೇರವಾಗಿ ತಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬಹುದಾಗಿದೆ. ಜನರ ಪ್ರಶ್ನೆಗಳಿಗೆ ಇನ್ಮುಂದೆ ಕೇಂದ್ರ ಆರೋಗ್ಯ ಇಲಾಖೆ ಉತ್ತರಿಸಲಿದೆ. ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಇತ್ತೀಚಿನ ಹೊಸ ಮಾಹಿತಿಗಳು, ಸಾರ್ವಜನಿಕರ ಪ್ರಶ್ನೆಗಳು, ಆರೋಗ್ಯ ಸೇವೆಗಳು, …

Read More »

ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ

ಬೆಂಗಳೂರು: ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ನಡುವೆ ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಕೊರೊನಾ ಹರಡುವಿಕೆ ಎರಡನೇ ಅಲೆಯ ತಡೆಗಾಗಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಕೊರೊನಾ ಸೋಂಕು ಕಳೆದ 3.4 ದಿನಗಳಲ್ಲಿ ದ್ವಿಗುಣವಾಗ್ತಿದೆ. ದ್ವಿಗುಣದ ಪ್ರಮಾಣವನ್ನು 12 ದಿನಗಳಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಲಾಕ್‍ಡೌನ್ ಮೊದಲು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3.4 …

Read More »

ಭಾರತದಲ್ಲಿ 18,601ಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ, 590 ಜನ ಸಾವು..!

ನವದೆಹಲಿ/ಮುಂಬೈ,ಏ.21- ದೇಶಾದ್ಯಂತ ಕೋವಿಡ್-19 ವೈರಸ್ ಅಟ್ಟಹಾಸ ಮತ್ತಷ್ಟು ತೀವ್ರಗೊಂಡಿದೆ. ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕಂಗೆಡಿಸಿದೆ. ಭಾರತದಲ್ಲಿ ಮೃತರ ಸಂಖ್ಯೆ 590ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 18,600ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಇದೆ. ಕೇಂದ್ರ ಆರೋಗ್ಯ ಸಚಿವಾಲಯದ ನಿನ್ನೆ ರಾತ್ರಿವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 590 ಜನರನ್ನು ಬಲಿ …

Read More »

BIG BREAKING : ಕೊನೆಗೂ ಕೊರೋನಾ ಚಿಕಿತ್ಸೆಗೆ ಸಿಕ್ಕೇ ಬಿಡ್ತು ಬ್ರಹ್ಮಾಸ್ತ್ರ..!?

ನವದೆಹಲಿ, ಏ.21- ವಿಶ್ವಾದ್ಯಂತ 1.70 ಲಕ್ಷ ಜನರನ್ನು ತಿಂದು ತೇಗಿರುವ ಕಿಲ್ಲರ್ ಕೊರೊನಾ ವೈರಸ್ ನಿಗ್ರಹಕ್ಕೆ ಜಗತ್ತಿನೆಲ್ಲೆಡೆ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿರುವಾಗಲೇ ಪ್ಲಾಸ್ಮಾ ಚಿಕಿತ್ಸೆ ಭರವಸೆಯ ಆಶಾ ಕಿರಣ ಮೂಡಿಸಿದೆ. ದೆಹಲಿಯಲ್ಲಿ ನಿನ್ನೆ 45 ವರ್ಷದ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾದ ಬಳಿಕ ಈ ವಿಧಾನವನ್ನು ಭಾರತದಲ್ಲಿ ಅತ್ಯಂತ ಜಾಗ್ರತೆಯಿಂದ ಬಳಸುವುದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಡ್ರಗ್ ಕಂಟ್ರೋಲರ್ ಹಸಿರು ನಿಶಾನೆ ತೋರಿಸಿದೆ. ಇದರಿಂದಾಗಿ …

Read More »