Home / ಜಿಲ್ಲೆ / ಬೆಳಗಾವಿ / ನಿಪ್ಪಾಣಿ / ಶಿಸ್ತು, ಪರಿಶ್ರಮ, ತಾಳ್ಮೆಯಿಂದ ಸಾಧನೆ ಸಾಧ್ಯ

ಶಿಸ್ತು, ಪರಿಶ್ರಮ, ತಾಳ್ಮೆಯಿಂದ ಸಾಧನೆ ಸಾಧ್ಯ

Spread the love

ನಿಪ್ಪಾಣಿ: ‘ಶಿಸ್ತು, ಪರಿಶ್ರಮ, ಸೌಮ್ಯತೆ, ತಾಳ್ಮೆ ಇದ್ದಲ್ಲಿ ವಿದ್ಯಾರ್ಥಿಗಳು ಮುಂದೆ ಹೋಗಿ ಬಯಸಿದ್ದನ್ನೆಲ್ಲ ಸಾಧಿಸುತ್ತಾರೆ. ಅದಕ್ಕೆ ತಕ್ಕಂತೆ ಬೋಧನೆ ಶಾಲೆಯಲ್ಲಿ ಶಿಕ್ಷಕರಿಂದಾಗಬೇಕು, ಸಂಸ್ಕಾರ ಮನೆಯಲ್ಲಿ ಪಾಲಕರಿಂದಾಗಬೇಕು’ ಎಂದು ವಿದ್ಯಾ ಸಂವರ್ಧಕ ಮಂಡಳದ ಸಿಇಒ ಡಾ.

ಸಿದ್ಧಗೌಡ ಪಾಟೀಲ ಅಭಿಪ್ರಾಯಪಟ್ಟರು.

ಸ್ಥಳೀಯ ವಿಎಸ್‍ಎಂ ಜಿ.ಐ. ಬಾಗೇವಾಡಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿಎಸ್‍ಎಂ ಕನ್ನಡ ಮತ್ತು ಮರಾಠಿ ಕಾನ್ವೆಂಟ್ ಶಾಲೆಯಲ್ಲಿ ಶುಕ್ರವಾರ ಬೀಳ್ಕೊಡುವ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ನಿಂಗಪ್ಪ ಮಾದಣ್ಣವರ, ಸಿಬಿಎಸ್‍ಇ ಪ್ರಾಚಾರ್ಯೆ ಮನಿಷಾ ಮಹಾಜನ, ವಿಎಸ್‍ಎಂ ಜಿ.ಐ. ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯ(ಪ್ರೌಢಶಾಲಾ ವಿಭಾಗ)ದ ಮುಖ್ಯಶಿಕ್ಷಕ ರವಿಂದ್ರ ಮಲಕಾಪುರೆ, ವಿಎಸ್‍ಎಂ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಗಜಾನನ ಕಮತೆ ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ನಿರ್ಮಲಾ ಮೋಕಾಶಿ, ಜಯಶ್ರೀ ಜೋಶಿ, ಪೂಜಾ ಕೋತಮಿರೆ, ಸುರೇಖಾ ಸಂಕಪಾಳ, ರುಕ್ಮಿಣಿ ಪಾಟೀಲ, ಕಾಕಾಸಾಹೇಬ ಕಮತೆ, ದಿಲೀಪ ರಾನಮಳೆ, ವೀರಕುಮಾರ ಗಾವಡೆ, ರಾಜು ನಾಯಿಕ, ಕವಿತಾ ಕುರಳುಪಡೆ, ಅವಿನಾಶ ಕಿಲ್ಲೇದಾರ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಯಲ್ಲಪ್ಪ ಹಂಡಿ ಸ್ವಾಗತಿಸಿದರು. ಶಿಕ್ಷಕಿ ಮೇಘಾರಾಣಿ ಮಗದುಮ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕ ಜ್ಞಾನದೇವ ನಾಯಿಕ ವಂದಿಸಿದರು.


Spread the love

About Laxminews 24x7

Check Also

ಕಾಂಗ್ರೆಸ್‌ ಗೆದ್ದರೆ ನಿಮ್ಮ ಮಂಗಳಸೂತ್ರ ಕಿತ್ತು ಮುಸ್ಲಿಮರಿಗೆ ಕೊಡುತ್ತೆ:ಮೋದಿ

Spread the love ಜೈಪುರ (ಏ.22): ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತಿನ ಸಮಾನ ಹಂಚಿಕೆ ಮಾಡಲಿದೆ’ ಎಂಬ ಆ ಪಕ್ಷದ ಭರವಸೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ