Breaking News
Home / ಜಿಲ್ಲೆ / ಚಿತ್ರದುರ್ಗ / ಮುರುಘಾ ಶ್ರೀ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಸ್ಪೋಟಕ ಸಂಗತಿಗಳು ಬಹಿರಂಗ

ಮುರುಘಾ ಶ್ರೀ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಸ್ಪೋಟಕ ಸಂಗತಿಗಳು ಬಹಿರಂಗ

Spread the love

ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಅನಿಲ್‌ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 347 ಪುಟಗಳ 2ಸೆಟ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

A1ಮುರುಘಾ ಸ್ವಾಮಿ, A2 ಲೇಡಿ ವಾರ್ಡನ್ (ರಶ್ಮಿ), A 4 ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, A 3 ಮಠದ ಉತ್ತರಾಧಿಕಾರಿ, A 5 ವಕೀಲ ಗಂಗಾಧರಯ್ಯ ಭಾಗಿಯಾಗಿರುವ ಕುರಿತು ಇನ್ನೂ ತನಿಖೆ ನಡೆಯುತ್ತಿದೆ.

ಇದೀಗ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಇವರ ಒಂದೊಂದೇ ಕರ್ಮಕಾಂಡಗಳು ಬಯಲಾಗ್ತಾ ಇದೆ. ಲೇಡಿ ವಾರ್ಡನ್ ಮೂಲಕ ಕರೆಸಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಮುರುಘಾ ಶ್ರೀ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆಯಂತೆ. ಮತ್ತು ಬರುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳ ಬಳಕೆ ಮಾಡಿಕೊಂಡಿದ್ದನಂತೆ.

ಇನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ ಪ್ರಕಾರ, ಕಚೇರಿ, ಬೆಡ್ ರೂಂ, ಬಾತ್ ರೂಂ ಗೆ ಕರೆದೊಯ್ದು ಬಲಾತ್ಕಾರ ಮಾಡ್ತಾ ಇದ್ದರು ಎನ್ನಲಾಗಿದೆ. ನೆಲಮಾಳಿಗೆಯಲ್ಲಿದ್ದ ರಹಸ್ಯ ಬೆಡ್​ರೂಮ್​ಗೆ ಅಪ್ರಾಪ್ತ ಬಾಲಕಿಯರನ್ನು ಕರೆಸಿಕೊಂಡು ಹಿಂಸೆ ಕೊಟ್ಟು ಅತ್ಯಾಚಾರ ಎಸಗುತ್ತಿದ್ದನಂತೆ. ಮದ್ಯ ಸೇವಿಸಿ ಗಹಗಹಿಸಿ ನಗುತ್ತಿದ್ದ ಎಂದು ಬಾಲಕಿಯರು ಹೇಳಿಕೆ ನೀಡುವಾಗ ವಿವರಿಸಿದ್ದಾರೆ. ಸ್ವಾಮೀಜಿ ಹೇಳಿದಂತೆ ಕೇಳದೇ ಹೋದರೆ ಅಥವಾ ವಿರೋಧಿಸಿದರೆ ಜೀವ ಬೆದರಿಕೆ, ಲೇಡಿ ವಾರ್ಡನ್ ರಿಂದ ಶಿಕ್ಷೆ ನೀಡಲಾಗುತ್ತಿತ್ತಂತೆ. ಚಾರ್ಜ್ ಶೀಟ್‌ ನ್ಯಾಯಾಲಯದ ಪರಿಶೀಲನೆಗೆ ಒಳಪಡಬೇಕಾಗಿದೆ ಎಂದು ಹೇಳಲಾಗಿದೆ


Spread the love

About Laxminews 24x7

Check Also

ಭಗತ್ ಸಿಂಗ್ ಪಾತ್ರದ ಅಭ್ಯಾಸ ಮಾಡಲು ಹೋಗಿ ಜೀವ ಕಳೆದುಕೊಂಡ 7ನೇ ತರಗತಿ ಬಾಲಕ

Spread the love ಚಿತ್ರದುರ್ಗ : ಕರ್ನಾಟಕ ರಾಜ್ಯೋತ್ಸವದ ದಿನದಂದು ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ