Breaking News
Home / ಜಿಲ್ಲೆ / ಕೊಡಗು

ಕೊಡಗು

ತಂದೆ ಮನೆಯಲ್ಲೇ ಕಳವು ಮಾಡಿದ್ದ ಸುಪುತ್ರನೊಬ್ಬ ಜೈಲುಪಾಲಾಗಿರುವ ಘಟನೆ

ಕೊಡಗು: ತಂದೆ ಮನೆಯಲ್ಲೇ ಕಳವು ಮಾಡಿದ್ದ ಸುಪುತ್ರನೊಬ್ಬ ಜೈಲುಪಾಲಾಗಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಗಣಪತಿ ನಗರದಲ್ಲಿ ನಡೆದಿದೆ. ತನ್ನ ತಂದೆ ತಮಿಳರ ಆರ್ಮುಗಂ ಮನೆಯಲ್ಲಿ ಕಳ್ಳತನ ಮಾಡಿದ್ದ ಮಗ ಸತ್ಯ ಜೈಲು ಸೇರಿದ್ದಾನೆ. ಅಂದ ಹಾಗೆ, ಸತ್ಯ ತನ್ನ ತಂದೆಯ ಮನೆಯಿಂದ ಮಿಕ್ಸಿ, DVD ಪ್ಲೇಯರ್​ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಕದ್ದೊಯ್ದಿದ್ದನು. ಆರ್ಮುಗಂ ದೂರು ನೀಡಿದ ಹಿನ್ನೆಲೆಯಲ್ಲಿ ಮಗ ಸತ್ಯನನ್ನ ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಮಿಕ್ಸಿ ಹಾಗೂ …

Read More »

ರಕ್ಷಣೆಯಲ್ಲಿ ಕರ್ತವ್ಯ ವಹಿಸಿದ್ದ ಧೀರ Rambo ಹೃದಯಾಘಾತಕ್ಕೆ ಬಲಿ

ಕೊಡಗು: ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಱಂಬೋ ಎಂಬ ಶ್ವಾನ ಕೊನೆಯುಸಿರೆಳೆದಿದೆ. 7 ವರ್ಷದ ಱಂಬೋ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕರ್ತವ್ಯಕ್ಕೆ ಎಂದು ತೆರಳಿದ್ದ ಶ್ವಾನ ಅಲ್ಲಿನ ತಾಪ ತಾಳಲಾರದೆ ನಿನ್ನೆ ರಾತ್ರಿ ಹೃದಯಾಘಾತವಾಗಿ ಸಾವನ್ನಪ್ಪಿದೆ. ಏಳು ವರ್ಷಗಳಿಂದ ಬಾಂಬ್ ಪತ್ತೆ ದಳದಲ್ಲಿ ಸತತವಾಗಿ ಸೇವೆ ಸಲ್ಲಿಸಿದ್ದ ನೆಚ್ಚಿನ ಪೊಲೀಸ್​ ಶ್ವಾನಕ್ಕೆ ಜಿಲ್ಲಾ ಪೊಲೀಸರ ವತಿಯಿಂದ ಗೌರವಪೂರ್ಣ ಅಂತಿಮ ವಿದಾಯ …

Read More »

ಕೊಡಗಿನಲ್ಲಿ ಗಾಂಜಾ ಮಾರಾಟ ದಂಧೆ ಹೊಸದೇನು ಅಲ್ಲ.ಪೊಲೀಸ್ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಕಳ್ಳರಿದ್ದಾರೆ……………….?

ಮಡಿಕೇರಿ: ಕೊಡಗಿನಲ್ಲಿ ಗಾಂಜಾ ಮಾರಾಟ ದಂಧೆ ಹೊಸದೇನು ಅಲ್ಲ. ಹಿಂದಿನಿಂದಲೂ ಗಾಂಜಾ ಮಾರಾಟ ತುಂಬಾ ಇದೆ. ಆದರೆ ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಕಳ್ಳರಿದ್ದಾರೆ. ಅವರು ಗಾಂಜಾ ಮಾರಾಟಗಾರರಿಂದ ಮಾಮೂಲು ಪಡೆದು ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಪೊಲೀಸ್ ಇಲಾಖೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಗಾಂಜಾ ಮಾರಾಟ ಕೊಡಗಿನಲ್ಲಿ ಹೊಸದೇನು ಅಲ್ಲ. ಪೊಲೀಸರು ಮಾತ್ರ ಸುಮ್ಮನಾಗಿದ್ದು ಏಕೆ?, ಈಗ ಒಂದೇ ಬಾರಿ ಎಲ್ಲವನ್ನೂ …

Read More »

ಸ್ವಯಂಕೃತ ಅಪರಾಧದಿಂದ ‘ಕಾವೇರಿ’ ಕೋಪಕ್ಕೆ ತುತ್ತಾದರಾ ಕೊಡಗಿನ ಜನ?

ಮಡಿಕೇರಿ: ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಭಕ್ತರು ನಾಡಿನೆಲ್ಲೆಡೆ ಇದ್ದಾರೆ. ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಜೀವಕಳೆ ತುಂಬುವ ಜೀವನದಿ. ಆದರೆ ಕೊಡಗಿನ ಜನರಿಗೆ ಮಾತ್ರ ಕಣ್ಣೀರು ತರಿಸುತ್ತಿದ್ದಾಳೆ. ಕಾವೇರಿ ನದಿ ಹೀಗೆ ತನ್ನೊಡಲ ಜನರಿಗೆ ಸಂಕಷ್ಟ ತಂದಿಟ್ಟಿರುವುದಕ್ಕೆ ಜನರ ಸ್ವಯಂಕೃತ ಅಪರಾಧವೇ ಕಾರಣ ಎಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ಸಮಿತಿ ಆರೋಪ ಮಾಡಿದೆ. 2005 ರಲ್ಲಿ ತಲಕಾವೇರಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹಲವು ಕಾಮಗಾರಿಗಳನ್ನು ಮಾಡಲಾಯಿತು. ಇದರ ಪರಿಣಾಮ ಬ್ರಹ್ಮಗಿರಿ ಬೆಟ್ಟದಲ್ಲಿ …

Read More »

ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – 60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ. ಎರಡು …

Read More »

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ 9 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ಕೊಡಗಿನಲ್ಲಿ ಈ ವರ್ಷವೂ ಪ್ರವಾಹದ ಭೀತಿ ಎದುರಾಗಿದ್ದು, ನಾಲ್ಕೈದು ದಿನ ಸುರಿದ ಮಳೆಗೆ ಕೊಡಗಿನ ಜನರು ಕಂಗಾಲಾಗಿದ್ದಾರೆ. ಹೀಗಾಗಿ, ಇಂದು ಬೆಳಗ್ಗೆಯಿಂದ ಆ. 11ರ ಬೆಳಗ್ಗೆಯವರೆಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಕೊಡಗಿನಲ್ಲಿ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ನದಿಪಾತ್ರದ ಭಾಗದಲ್ಲಿ ಮತ್ತು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಗಮಂಡಲದ ಬ್ರಹ್ಮಗಿರಿಯಲ್ಲಿ ಗುಡ್ಡವೇ ಕುಸಿದು, ತಲಕಾವೇರಿ ಅರ್ಚಕರ ಮನೆ, ಕುಟುಂಬ, ಹಸುಗಳು ಜಲಸಮಾಧಿಯಾಗಿವೆ. ಎಸ್​ಡಿಆರ್​ಎಫ್​ ತಂಡಗಳು ಈಗಾಗಲೇ ಕೊಡಗಿನಲ್ಲಿ …

Read More »

ಕೊಡಗಿನಲ್ಲಿ ವರುಣನ ಆರ್ಭಟ: ಕುಶಾಲನಗರದ ಬಡವಾಣೆಗಳು ಜಲಾವೃತ

ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ, ಕುಶಾಲನಗರದ ಹೆಚ್ಚಿನ ಬಡಾವಣೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಕುವೆಂಪು ಬಡಾವಣೆ, ಸಾಯಿ ಬಡಾವಣೆ ಹಾಗೂ ಮುಳುಸೋಗೆ ಬಡಾವಣೆಗಳಲ್ಲಿ ಸುಮಾರು 10 ಅಡಿ ಎತ್ತರದಷ್ಟು ನೀರು ನಿಂತಿದೆ. ಮನೆಗಳ ಮೊದಲ ಮಹಡಿವೆರೆಗಿನ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಹಾರಂಗಿ ಜಲಾಶಯದ ಹೊರಹರಿವು ಹೆಚ್ಚಾಗಿದ್ದು, ಕಾವೇರಿ ನದಿಯ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

Read More »

ಮಡಿಕೇರಿ -ಮೈಸೂರು ರಸ್ತೆ ಸಂಪರ್ಕ ಬಂದ್

ಮಡಿಕೇರಿ/ಮೈಸೂರು: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಮಡಿಕೇರಿ – ಮೈಸೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಕುಶಾಲನಗರ ಬಳಿಯ ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಕಾರಣ ಹೆದ್ದಾರಿ ಜಲಾವೃತವಾಗಿದೆ. ಹೆದ್ದಾರಿ ಬಂದ್‌ ಆಗಿರುವ ಕಾರಣ ಎರಡು ಕಡೆ ವಾಹನಗಳು ಸಾಲಾಗಿ ನಿಂತಿವೆ.ಭಾರೀ ಮಳೆಯಿಂದ ಸೂತ್ತೂರು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೂತ್ತೂರು ಕ್ಷೇತ್ರದ ಸುತ್ತ ಮುತ್ತ ತೋಟ ಜಮೀನಿಗೆ ನೀರು ನುಗ್ಗಿದೆ.ಕಬಿನಿ ಡ್ಯಾಂನಿಂದ ನದಿಗೆ 50ಸಾವಿರ …

Read More »

ಕೊಡಗಿಗೆ ಈ ವರ್ಷವು ಮಹಾಮಳೆಯ ಆತಂಕ ಎದುರಾಗಿದೆ.

ಮಡಿಕೇರಿ: ಕೊಡಗಿಗೆ ಮತ್ತೆ ಜಲಗಂಡಾಂತರ ಎದುರಾಗಿದೆ. ಎರಡು ವರ್ಷದ ಹಿಂದೆ ಭಾರೀ ಮಳೆಯಿಂದಾಗಿ ನಡೆದಿದ್ದ ಭೂಕುಸಿತ ಮತ್ತೆ ಮರುಕಳಿಸುವಂತ ಲಕ್ಷಣ ದಟ್ಟವಾಗಿದೆ.ಕೊಡಗು ಜಿಲ್ಲೆಯಾದ್ಯಂತ ಎಡಬಿಡೆ ಸುರಿಯತ್ತಿರುವ ಮಳೆ ಇನ್ನೂ ಎರಡು ದಿನಗಳ ಕಾಲ ತನ್ನ ಅಬ್ಬರ ಮುಂದುವರಿಸುವ ಸಾಧ್ಯತೆ ಇದೆ. ಕೊಡಗಿನಲ್ಲಿ ಹಲವು ಗುಡ್ಡಗಳು ಕುಸಿಯುವುದು ಬಹುತೇಕ ಸ್ಪಷ್ಟವಾಗಿದ್ದು, ಎರಡು ದಿನಗಳ ಮಳೆಗೆ 40 ಪ್ರದೇಶದಲ್ಲಿ ಈಗಾಗಲೇ ಗುಡ್ಡ ಕುಸಿತವಾಗಿದೆ. ಹಲವು ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳ ಸಂಪರ್ಕ …

Read More »

ಸಂತೆ ವ್ಯಾಪಾರಿಗಳಿಗೆ ಪೊಲೀಸರಿಂದ ಲಾಠಿ ಏಟು……..

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಸಂತೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಸೋಮವಾರಪೇಟೆಯಲ್ಲಿ ಇಂದು ವ್ಯಾಪಾರಿಗಳು ಸಂತೆಯಲ್ಲಿ ಅಂಗಡಿ ಹಾಕಿದ್ದರು. ವಿಷಯ ತಿಳಿದ ಪೊಲೀಸರು ಅಂಗಡಿಗಳನ್ನು ತೆರವು ಮಾಡುವಂತೆ ಖಡಕ್ಕಾಗಿ ಹೇಳಿದರೂ, ಕ್ಯಾರೆ ಎನ್ನಲಿಲ್ಲ. ಆಗ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರೂ ಕೇಳದ ಹಿನ್ನೆಲೆ ಪೊಲೀಸರಿಗೆ ಬೇರೆ ದಾರಿಯಿಲ್ಲದೆ ಲಾಠಿ ರುಚಿ ತೋರಿಸಿದರು. …

Read More »