Breaking News
Home / ಜಿಲ್ಲೆ / ಬೆಳಗಾವಿ / ಬೈಲ್ ಹೊಂಗಲ್ / ಪೊಲೀಸರ ದಾಳಿ: ಜೂಜಾಟದಲ್ಲಿ ತೊಡಗಿದ್ದ 70 ಮಂದಿ ಬಂಧನ

ಪೊಲೀಸರ ದಾಳಿ: ಜೂಜಾಟದಲ್ಲಿ ತೊಡಗಿದ್ದ 70 ಮಂದಿ ಬಂಧನ

Spread the love

ಬೈಲಹೊಂಗಲ ಪಟ್ಟದ ಲಾಡ್ಜ್​ವೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ಹಲವರನ್ನು ಬಂಧಿಸುವಲ್ಲಿ ಬೆಳಗಾವಿಯ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಬೆಳಗಾವಿ: ಜಿಲ್ಲಾ ಸಿಇಎನ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ.

ರಾಜಾರೋಷವಾಗಿ ನಡೆಸುತ್ತಿದ್ದ ಅಂದರ್ ಬಾಹರ್ ಜೂಜು ಅಡ್ಡೆ ಮೇಲೆ ದಾಳಿ ಮಾಡಿ 70 ಮಂದಿಯನ್ನು ಬಂಧಿಸಲಾಗಿದೆ. ಬೈಲಹೊಂಗಲ ಪಟ್ಟಣದ ಸಂಸ್ಕೃತ ಬಾರ್ ಆಂಡ್ ಲಾಡ್ಜ್​ನಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ನಿನ್ನೆ (ಭಾನುವಾರ) ರಾತ್ರಿ ದಾಳಿ ಮಾಡಿದ ಸಿಇಎನ್ ಇನ್ಸ್​ಪೆಕ್ಟರ್​​ ಬಿ.ಆರ್.ಗಡ್ಡೇಕರ ನೇತೃತ್ವದ ತಂಡವು ಪ್ರಕರಣ ಭೇದಿಸಿದೆ.

ಆರೋಪಿಗಳಿಂದ 2 ಲಕ್ಷ ರೂಪಾಯಿ ನಗದು, 70 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಎರಡು ಬಸ್​ನಲ್ಲಿ ಜೂಜುಕೋರರನ್ನು ಬಂಧಿಸಿ ಬೆಳಗಾವಿಗೆ ಪೊಲೀಸರು ಕರೆ ತಂದಿದ್ದು, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ 10 ಮಂದಿ ಸಿಇಎನ್ ಸಿಬ್ಬಂದಿ ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು. 70 ಜನರನ್ನು ಬಂಧಿಸಿರುವ ಈ ತಂಡದ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

 

ಕಳೆದ ಆಗಸ್ಟ್​ ತಿಂಗಳಿನಲ್ಲಿ ಸಹ ಇಂತಹದೇ ಘಟನೆ ನಡೆದಿತ್ತು. ಬ್ಯಾಂಕಿನ ಆವರಣದಲ್ಲಿ ಕಾನೂನು ಬಾಹಿರ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಪೊಲೀಸರು, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು, ಸಾಮಾಜದ ಪ್ರಮುಖರನ್ನು ಬಂಧಿಸಿದ್ದರು. ಗಂಗಾವತಿ ತಾಲೂಕಿನ ಶ್ರೀರಾಮನಗರದ ಪ್ರಗತಿ ಗ್ರಾಮೀಣ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ ಆವರಣದ ಕಟ್ಟಡದ ಕೊಠಡಿಯೊಂದರಲ್ಲಿ ಜೂಜಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದರು.ದಾಳಿ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ಪ್ರಮುಖರು, ಹಣಕಾಸು ಲೇವಾದೇವಿದಾರರು, ಪ್ರಮುಖ ವರ್ತಕರು, ವ್ಯಾಪಾರಿಗಳು, ನಾನಾ ವಲಯದಲ್ಲಿ ಗುರುತಿಸಿಕೊಂಡಿರುವ ಪ್ರಮುಖರನ್ನು ಬಂಧಿಸಿದ್ದರು.ಆರೋಪಿಗಳಿಂದ ಸುಮಾರು 50 ಸಾವಿರ ಮೊತ್ತದ ನಗದು ಮತ್ತು ಇಸ್ಪೀಟ್ ಆಟಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.


Spread the love

About Laxminews 24x7

Check Also

28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ ಗ್ರಾಮದ ಯೋಧ ಈರಪ್ಪ ಬಾಳಿಗಟ್ಟಿ ಅವರಿಗೆ ಗ್ರಾಮದಲ್ಲಿ ಅದ್ದೂರಿ ಸ್ವಾಗತ

Spread the loveಬೈಲಹೊಂಗಲ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿ ತಮ್ಮ ಊರಿಗೆ ಆಗಮಿಸಿದ ತಾಲೂಕಿನ ಸುತಗಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ