Breaking News

ಹಾರೂಗೇರಿ ಪೊಲೀಸರ ಕಾರ್ಯಾಚರಣೆ ಯಿಂದ ಅಪಹರಣ ಪ್ರಕರಣ ಭೇದಿಸಲು ಯಶಸ್ವಿ ಯಾದ ತಂಡ

Spread the love

ರಾಯಬಾಗ :ತಾಲೂಕಿನ ಖನದಾಳ ಗ್ರಾಮದ ಅಪಹರಣ ಪ್ರಕರಣ ಭೇದಿಸಲಾಗಿದ್ದು ಈ ಸಂಬಂಧ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ನಾಲ್ಕು ಲಕ್ಷ ಹತ್ತು ಸಾವಿರ ನಗದು ಕೃತಕ್ಕೆ ಬಳಸಿದ್ದ ಎರಡು ಕಾರು ಒಂದು ತಲವಾರ ಚಾಕು ಅಪಹರಣ ಮಾಡಿದವನಿಗೆ ಹಾಕುವ ಕರಿ ಬಣ್ಣದ ಕನ್ನಡಕಾ ಆರೋಪಿತದ ಎಳು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾರೂಗೇರಿ ಪೋಲಿಸ ತಂಡ ಯಶಸ್ವಿ ಆಗಿದೆ.

ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬೆಳಗಾವಿ ಪೋಲಿಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಕಳೆದ ತಿಂಗಳ ಜನವರಿ 30 ರಂದು ಮುಂಜಾನೆ ಎಂಟು ಗಂಟೆಗೆ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಭೂಪಾಲ ಬಸಪ್ಪ ಆಜೂರೆ ಎಂಬ ವ್ಯಕ್ತಿಯನ್ನು ಅಪಹರಣ ಮಾಡಲಾಗಿತ್ತು ಈ ಬಗ್ಗೆ ಭೂಪಾಲ ಬಸಪ್ಪ ಆಜೂರೆ ಅವರ ಹೆಂಡತಿ ಶಾಂತವ್ವ ಆಜೂರೆ ಅವರು ಹಾರೂಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹಾರೂಗೇರಿ ಸಿಪಿಐ ರವಿಚಂದ್ರ ಡಿ.ಬಿ ಅವರು ತನಿಖೆ ಕೈಕೊಂಡು ಪ್ರಕರಣದಲ್ಲಿ ಇದ್ದ ನಾಲ್ಕು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿತರ ತಾಬಾದಲ್ಲಿದ್ದ ಅಪಹರಣವಾದವನಿಗೆ ಇದೆ ತಿಂಗಳು 19 ದಿನಾಂಕದಂದು ಹಿಡಿದುಕೊಂಡು ಕುಲಂಕುಶವಾಗಿ ವಿಚಾರಣೆ ಮಾಡಿ ದಸ್ತಗಿರಿ ಮಾಡಿ ಆರೋಪಿತರು ಸೇರಿಕೊಂಡು ಈ ಹಿಂದೆ ಹಣದ ವ್ಯವಹಾರದ ಸಲುವಾಗಿ ದಿನಾಂಕ 18-08-2022 ರಂದು ಕೊಲೆಯಾದವನಿಗೆ ಮುಗಳಖೋಡ ಕ್ರಾಸದ ಆದರ್ಶ ಬಾರ ಹತ್ತಿರದಿಂದ ಒತ್ತಾಯ ಪೂರ್ವಕವಾಗಿ ಅಪರಿಸಿಕೊಂಡು ಸ್ಕಾರ್ಪಿಯೋ ಗಾಡಿಯಲ್ಲಿ ಹಾಕಿಕೊಂಡು ಹೊಡೆದು ಕೊಲೆ ಮಾಡಿ ಹೆಣವನ್ನು ಸ್ಕಾರ್ಪಿಯೋದಲ್ಲಿ ಹಾಕಿಕೊಂಡು ತಗ್ಗಿನಲ್ಲಿ ಹೆಣ ಒಗೆದು ಪೂರಾವೆ ನಾಶ ಮಾಡಿರುತ್ತಾರೆ.

ದಿ:08-09-2022 ರಂದು ಆರೋಪಿತರು ಸ್ಕಾರ್ಪಿಯೊ ವಾಹನದಲ್ಲಿದ್ದ ಖಣದಾಳ ಗ್ರಾಮಕ್ಕೆ ಹೋಗಿ ಫಿರ್ಯಾದಿಗೆ ಜಂಬೆ ತೋರಿಸಿ ಬೆದರಿಕೆ ಹಾಕಿ ಅವರ ಮನೆಯಲ್ಲಿದ್ದ 30,000 ಸಾವಿರ ರೂಪಾಯಿ ಎರಡು ಮೊಬೈಲ್ ಒಂದು ಜೆಸಿಬಿ ಒಂದು ಮೋಟಾರ್ ಸೈಕಲ್ ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿ ಜೆಸಿಬಿಯನ್ನು ಬಾಗೇವಾಡಿ ಸಕ್ಕರೆ ಕಾರ್ಖಾನೆ ಹತ್ತಿರ ಬಿಟ್ಟು ಹೋಗಿರುತ್ತಾರೆ ಈ ಬಗ್ಗೆಯೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

ದಿ:23-09-2022ರಂದು ರಾತ್ರಿ ವೇಳೆಯಲ್ಲಿ ಆರೋಪಿತರು ಕುಡಿಕೊಂಡು ಭೂಪಾಲ ಆಜುರೆ ಈತನಿಗೆ ಸ್ಕಾರ್ಪಿಯೊ ವಾಹನದಲ್ಲಿ ಒತ್ತಾಯದಿಂದ ಅಪಹರಿಸಿಕೊಂಡು ಹೋಗಿ ಆತನ ಬಿಡುಗಡೆಗೆ ಸಲುವಾಗಿ ಹಣದ ಬೇಡಿಕೆ ಇಟ್ಟು ಮೊದಲು 5 ಲಕ್ಷ ಹಣ ತೆಗೆದುಕೊಂಡು ಅಪಹರಣ ಮಾಡಿಕೊಂಡು ಹೊದವನಿಗೆ ಬಿಟ್ಟು ಕಳುಹಿಸಿ ನಂತರ ಆತನಿಗೆ ಧಮ್ಕಿಹಾಕಿ ಆತನಿಂದ ಪುನಃ 17 ಲಕ್ಷ 50 ಸಾವಿರ ರೂಪಾಯಿ ತೆಗೆದುಕೊಂಡಿರುತ್ತಾನೆ ಈ ಬಗ್ಗೆಯೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಆರೋಪಿತನ ಮೇಲೆ ಸುಮಾರು 20 ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡು ತಿಳಿದು ಬಂದಿದ್ದು ಸದ್ಯ ಆರೋಪಿತನು ಗೋಕಾಕ ಉಪ ಕಾರಾಗ್ರಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾರೆ.

ಬೆಳಗಾವಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಶ್ರೀ ಪಾದ ಜಲ್ದೆ, ಅಥಣಿ ಸಿಪಿಐ ರವಿಂದ್ರ ನಾಯ್ಕೋಡಿ, ಹಾರೂಗೇರಿ ಸಿಪಿಐ ರವಿಚಂದ್ರ ಡಿ.ಬಿ, ಹಾರೂಗೇರಿ ಪಿಎಸ್ಐ ರೇಣುಕಾ ಜಕನೂರ,ಪಿ ಬಿ ಪೂಜಾರಿ, ಎಸ್ ಎಲ್ ಬಾಡಕರ,ಕೆ ಆರ್ ಸಾಳವಂಕಿ,ಪಿ ಬಿ ನಾಯಿಕ,ಎಮ್ ಎಸ್ ಪಾಟೀಲ,ಎ ಎ ಶಾಂಡಗೆ,ಜಮೀರ ಡಾಂಗೆ, ಆರ್ ಎಸ್ ಲೋಹಾರ ಸೇರಿದಂತೆ ಇನ್ನಿತರ ಪೋಲಿಸ ಅಧಿಕಾರಿಳು ತನಿಖೆ ಕೈಗೊಂಡು ಪ್ರಕರಣವನ್ನು ಭೇದಿಸಿದ್ದಾರೆ.

ಇನ್ನು ಈ ಪ್ರಕರಣಗಳಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಶ್ಲಾಘನೀಯ ಕರ್ತವ್ಯ ನಿರ್ವಹಿಸಿದ್ದರಿಂದ ಮಾನ್ಯ ಪೋಲಿಸ ಅಧೀಕ್ಷಕರು ನಗದು ಬಹುಮಾನ ಘೋಷಿಸಿದ್ದಾರೆ.


Spread the love

About Laxminews 24x7

Check Also

ಹರಗಾಪುರ: ಗುಡ್ಡ ಕುಸಿತ, ಪ್ರಾಣಾಪಾಯ ಇಲ್ಲ

Spread the love ಹುಕ್ಕೇರಿ: ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಗಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ