Breaking News
Home / ಜಿಲ್ಲೆ / ರಾಮನಗರ

ರಾಮನಗರ

ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ.

ಹಾಸನ: ಮೂರು ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ. ಚನ್ನರಾಯಪಟ್ಟಣದ ರೌಡಿಶೀಟರ್ ಹುಲಿವಾಲ ಚೇತು, ಹಾಸನದ ಸಾಲಗಾಮೆ ರಾಕೇಶ್ ಅಲಿಯಾಸ್​ ರಾಕಿ ಮತ್ತು ಮಂಡ್ಯ ಮೂಲದ ಶಿವು, ಶರಣಾದ ಆರೋಪಿಗಳು. ಜೂ.4ರ ಮಂಗಳವಾರ ಐದು ಮಂದಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾಸ್ತಿಗೌಡನನ್ನು ಬರ್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದರು. ಆರೋಪಿಗಳಲ್ಲಿ ಮೂವರು ತಾವಾಗಿಯೇ ಶರಣಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. …

Read More »

ಡಿಕೆಶಿ ಭದ್ರಕೋಟೆಯಲ್ಲಿ ತ್ರಿಕೋನ ಸ್ಪರ್ಧೆ!

ರಾಮನಗರದ ಕನಕಪುರದಲ್ಲಿ ಈ ಬಾರಿ ಘಟಾನುಘಟಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಅವರ ಕುರಿತಾದ ಸಂಪೂರ್ಣ ಸ್ಟೋರಿ ಇಲ್ಲಿದೆ ನೋಡಿ.. ದಶಕಗಳಿಂದ ವಿರೋಧಿಗಳಿಲ್ಲದೇ ಪಾರುಪತ್ಯ ಸಾಧಿಸಿದ್ದ ಡಿಕೆಶಿಗೆ ಟಕ್ಕರ್ ಕೊಡಲು ಬಿಜೆಪಿಯಿಂದ ಸಚಿವ ಆರ್.ಅಶೋಕ್ ಕಣದಲ್ಲಿದ್ದಾರೆ. ಹಾಗೆಯೇ ಸ್ಥಳೀಯ ಜೆಡಿಎಸ್​ ಅಭ್ಯರ್ಥಿಯಾದ ನಾಗರಾಜ್ ಸಂಪ್ರದಾಯಿಕ ಮತಗಳನ್ನು ಸೆಳೆದರೇ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೂ ಅಚ್ಚರಿ ಪಡಬೇಕಿಲ್ಲ. ಕನಕಪುರ ಬಂಡೆ ಸೋಲಿಸಲು ಬಿಜೆಪಿ ರಣತಂತ್ರ: ಈ ಬಾರಿ ಕನಕಪುರ ಕ್ಷೇತ್ರದಲ್ಲಿ ಡಿ.ಕೆ ಶಿವಕುಮಾರ್ ಅವರು …

Read More »

ರಾಮದುರ್ಗ: ಇಂದಿನಿಂದ ವೆಂಕಟೇಶ್ವರ ಜಾತ್ರೆ ವೈಭವ

ರಾಮದುರ್ಗ: ಪುಣೆಯ ಪೇಶ್ವೆಗಳ (ಮರಾಠಿಗರ) ಆಡಳಿತದಲ್ಲಿ ಪಟ್ಟಣದಲ್ಲಿ ನಿರ್ಮಿಸಿದ, ವೆಂಕಟೇಶ್ವರ ದೇವಸ್ಥಾನದ ಜಾತ್ರೆ ಮಾರ್ಚ್‌ 22ರಿಂದ ಏಪ್ರಿಲ್‌ 31ರವರೆಗೆ ನಡೆಯಲಿದೆ. ಗಡಿ ಭಾಗದಲ್ಲಿ ಕನ್ನಡ- ಮರಾಠಿ ಸಂಸ್ಕೃತಿಗಳ ಸಂಗಮವಾಗಿ ಈ ಉತ್ಸವ ಬೆಳೆದುಬಂದಿದೆ.   ರಾಮದುರ್ಗ ಸಂಸ್ಥಾನವು ಪುಣೆಯ ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿತ್ತು. ನರಗುಂದ ಮತ್ತು ರಾಮದುರ್ಗದ ಸಂಸ್ಥಾನಗಳ ಉಭಯ ಸಹೋದರರ ಆಡಳಿತ ವಿಭಜನೆಯಾದ ನಂತರ ರಾಮದುರ್ಗದ ಕೊನೆಯ ಅರಸು ರಾಮ್‌ರಾವ್‌ ಭಾವೆ ಇಲ್ಲಿನ ವೆಂಕಟೇಶ್ವರ ದೇವಸ್ಥಾನ ನಿರ್ಮಿಸಿ ಜಾತ್ರೆ ನಡೆಸಿಕೊಂಡು …

Read More »

ಮಳೆ: ಮೈಸೂರು ಬೆಂಗಳೂರು ಹೆದ್ದಾರಿಯ ಬಸವನಪುರ ಅಂಡರ್ ಪಾಸ್‌ನಲ್ಲಿ ನಿಂತ ನೀರು

ರಾಮನಗರ: ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಬಸವನಪುರ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತು ಪರದಾಡುವಂತೆ ಆಯಿತು. ಈ ಸಂದರ್ಭ ಲಾರಿಯೊಂದು ಡಿಕ್ಕಿ ಹೊಡೆದು ಕಾರ್ ಜಖಂ ಆಯಿತು.   ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿದೆ. ಕಟಾವು ಹಂತಕ್ಕೆ‌ ಬಂದಿರುವ ಮಾವಿನ‌ ಬೆಳೆಗೂ ಮಳೆ ನೀರೆರೆದಿದೆ.

Read More »

ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಡಿರುವ ಆರೋಪಗಳಲ್ಲಿ ಸತ್ಯವಿದೆ:ಅಶ್ವತ್ಥನಾರಾಯಣ

ರಾಮನಗರ: ಸಿ.ಡಿ. ಪ್ರಕರಣದ ಕುರಿತು ಡಿ.ಕೆ. ಶಿವಕುಮಾರ್ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಡಿರುವ ಆರೋಪಗಳಲ್ಲಿ ಸತ್ಯವಿದೆ. ಈ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು. ಬಿಡದಿಯಲ್ಲಿ ಗುರುವಾರ ಬಿಜೆಪಿ ಪ್ರಮುಖರ ಸಭೆ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು. ‘ ಕಾಂಗ್ರೆಸ್ ಅನ್ನು ಬ್ಲಾಕ್‌ಮೇಲರ್‌ಗಳ ಪಕ್ಷ, ಸಿ.ಡಿ. ‍ಪಕ್ಷ ಎನ್ನುತ್ತಾರೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಅದರಲ್ಲಿ ಪರಿಣತರು. ಎಲ್ಲರ ಸಿ.ಡಿ. …

Read More »

ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ: ಮರಣ ಪತ್ರ- ಲಿಂಬಾವಳಿ ಸೇರಿ 6 ಹೆಸರು

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಗ್ಗಲೀಪುರ ಸಮೀಪದ ನೆಟ್ಟಗೆರೆ ಬಳಿ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ (47) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರದೀಪ್ ಬರೆದಿದ್ದಾರೆ ಎನ್ನಲಾದ 8 ಪುಟಗಳ ಮರಣ ಪತ್ರ ಕಾರಿನಲ್ಲಿ ಸಿಕ್ಕಿದೆ. ಶಾಸಕ ಅರವಿಂದ ಲಿಂಬಾವಳಿ, ಉದ್ಯಮಿಗಳಾದ ಕೆ. ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಜಯ ರಾಮ್ ರೆಡ್ಡಿ ಹಾಗೂ ರಾಘವ ಭಟ್‌ ಎಂಬುವರ ಹೆಸರುಗಳನ್ನು ಮೊಬೈಲ್‌ ಸಂಖ್ಯೆ ಸಹಿತವಾಗಿ ಉಲ್ಲೇಖಿಸಲಾಗಿದೆ. ‘ಆರು ಜನರಿಂದ …

Read More »

ಅಕ್ರಮಕ್ಕೆ ಅಧಿಕಾರಿಗಳ ನೆರವು ಚಿಲುಮೆ ಆಯಪ್‌ ರೂಪಿಸಿದ್ದ ವ್ಯಕ್ತ ವಿಚಾರಣೆ

ಬೆಂಗಳೂರು: ಮತದಾರರ ದತ್ತಾಂಶ ಕಳವು ಆರೋಪ ಹೊತ್ತಿರುವ ‘ಚಿಲುಮೆ’ ಸಂಸ್ಥೆಯ ಅಕ್ರಮಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೆಲವು ವಲಯ ಅಧಿಕಾರಿಗಳೇ ಬೆಂಬಲವಾಗಿದ್ದರು ಎನ್ನುವ ಅಂಶ ಪೊಲೀಸ್‌ ತನಿಖೆಯಿಂದ ಹೊರಬಿದ್ದಿದೆ.   ‘ಚಿಲುಮೆ’ ಸಮೀಕ್ಷಾ ತಂಡವು ಬೆಂಗಳೂರಿನ ಬಹುತೇಕ ವಿಧಾನ ಸಭಾ ಕ್ಷೇತ್ರಗಳ ಸಮೀಕ್ಷೆ ನಡೆಸಿದ್ದು, ಅದಕ್ಕೆ ಬಿಬಿಎಂಪಿಯ ವಲಯದ ಕಂದಾಯ ಅಧಿಕಾರಿಗಳು (ಆರ್‌ಒ) ಹಾಗೂ ಸಿಬ್ಬಂದಿ ನೆರವು ನೀಡಿ ದ್ದರು. ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಈ ಸಂಸ್ಥೆಗೆ ಅಧಿಕಾರಿಗಳೇ …

Read More »

ಬಸವಲಿಂಗ ಶ್ರೀ ಆತ್ಮಹತ್ಯೆ: ಆರೋಪಿಗಳ‌ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮನಗರ: ಕಂಚುಗಲ್ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಇದೇ 29ರವರೆಗೆ ವಿಸ್ತರಿಸಿ ನ್ಯಾಯಾಲಯವು ಮಂಗಳವಾರ ಆದೇಶಿಸಿತು. ಪ್ರಕರಣದ ಆರೋಪಿಗಳಾದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಅವರನ್ನು ಪೊಲೀಸರು ಮಂಗಳವಾರ ಮಾಗಡಿ ಜೆಎಂಎಫ್ ಸಿ ನ್ಯಾಯಾಧೀಶೆ ಎಂ. ಧನಲಕ್ಷ್ಮಿ ಅವರ ಎದುರು ಹಾಜರುಪಡಿಸಿದರು.   ಪ್ರಕರಣದ ಆರೋಪಿಗಳಾದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ ಹಾಗೂ ವಕೀಲ ಮಹದೇವಯ್ಯ ಅವರನ್ನು ಪೊಲೀಸರು ಮಂಗಳವಾರ …

Read More »

ಬಸವಲಿಂಗ ಶ್ರೀ ವೀಡಿಯೋ ಕಾಲ್ ವೈರಲ್- ಮೂವರು ಮಹಿಳೆಯರ ಪ್ರತ್ಯೇಕ ವಿಚಾರಣೆ

ರಾಮನಗರ: ಮಾಗಡಿಯ (Magadi) ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯೊಬ್ಬರ ಜೊತೆ ಸ್ವಾಮೀಜಿ ವೀಡಿಯೋ ಕಾಲ್ (Video Call) ಮಾಡಿ ಮಾತನಾಡಿದ್ದಾರೆ ಎನ್ನಲಾದ ವೀಡಿಯೋ ಈಗಾಗಲೇ ವೈರಲ್ (Video Viral) ಆಗಿದ್ದು, ಈ ವೀಡಿಯೋ ಆಧರಿಸಿ ಅನುಮಾನಿತ ಮೂವರು ಮಹಿಳೆಯರನ್ನು (Woman) ಪೊಲೀಸರು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಂಡೆಮಠದ (Bande Mutt) ಬಸವಲಿಂಗ ಶ್ರೀಗಳ (Basavalinga Swamiji) ಆತ್ಮಹತ್ಯೆ ಪ್ರಕರಣ ಇದೀಗ …

Read More »

ಸುಮಲತಾರನ್ನ ಬಿಜೆಪಿ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ: ಸಿ.ಪಿ ಯೋಗೇಶ್ವರ್

ರಾಮನಗರ: ಮಂಡ್ಯ ಸಂಸದೆ ಸುಮಲತಾರನ್ನ ಪಕ್ಷಕ್ಕೆ ಆಹ್ವಾನ ಮಾಡಿದ್ದೇವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಪಕ್ಷ ಅವರಿಗೆ ಬೆಂಬಲ ನೀಡಿತ್ತು. ಈ ಹಿನ್ನೆಲೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ಮಾಡಿದ್ದೇವೆ. ಮದುವೆ ಸಮಾರಂಭದಲ್ಲಿ ಅವರನ್ನ ಭೇಟಿ ಮಾಡಿದ್ದೆವು, ಸಿಎಂ ಸಹ ಇದ್ದರು. ಅವರು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮುಂದೆ ನೋಡೋಣ ಎಂದರು. ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಶ್ ಬಿಜೆಪಿಯಿಂದ …

Read More »