Breaking News
Home / ಜಿಲ್ಲೆ / ಹಾಸನ / ಇನ್ಮುಂದೆ ನಾವೆಲ್ಲರು ಜೆಡಿಎಸ್​ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು

ಇನ್ಮುಂದೆ ನಾವೆಲ್ಲರು ಜೆಡಿಎಸ್​ ಪರ ಕೆಲಸ ಮಾಡ್ಬೇಕು: ಕಾರ್ಯಕರ್ತರಿಂದ ಪ್ರತಿಜ್ಞೆ ಮಾಡಿಸಿದ ಎ. ಮಂಜು

Spread the love

ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು ದಿಢೀರ್ ಕಾರ್ಯಕರ್ತರ ಸಭೆ ಕರೆದಿದ್ದು, ಇನ್ನು ಮುಂದೆ ಎಲ್ಲರು ಜೆಡಿಎಸ್​ ಪರ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

 

ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಸಭೆ ಕರೆದು ಪ್ರತಿಜ್ಞೆ ಮಾಡಿಸಿದ್ದಾರೆ. ಇನ್ನು ಮುಂದೆ ನಾವೆಲ್ಲರು ಜೆಡಿಎಸ್​ನವರು, ಜೆಡಿಎಸ್ ಪಕ್ಷದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದು ಪ್ರತಿಜ್ಞೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಎ.ಮಂಜು ಅಭಿಮಾನಿಗಳು ಕೈ ಎತ್ತಿ ಘೋಷಣೆ ಕೂಗುವ ಮೂಲಕ ಪ್ರತಿಜ್ಞೆ ಮಾಡಿದರು.

 

ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧೆ ಮಾಡುವುದು ಫಿಕ್ಸ್ ಆಗಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಎ. ಮಂಜು ಭೇಟಿ ಮಾಡಿ ಬಂದಿದ್ದಾರೆ. ಎಚ್​.ಡಿ. ರೇವಣ್ಣ, ಎಚ್​ಡಿಕೆ ಹಾಗೂ ಎಚ್​ಡಿಡಿ ಜೊತೆ ಮಂಜು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅರಕಲಗೂಡು ಶಾಸಕ ರಾಮಸ್ವಾಮಿ ಈಗಾಗಲೇ ಜೆಡಿಎಸ್​ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎ. ಮಂಜು ಅವರನ್ನು ಜೆಡಿಎಸ್​ ಕಣಕ್ಕಿಳಿಸುತ್ತಿದೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಮತ್ತು ಮಿತ್ರರಲ್ಲ ಎಂಬ ಮಾತಿಗೆ ಎ. ಮಂಜು ಅವರ ಜೆಡಿಎಸ್​ ಸೇರ್ಪಡೆ ಪೂರಕವಾಗಿದೆ. ಎಣ್ಣೆ ಸೀಗೆಕಾಯಿಯಂತಿದ್ದ ಜೆಡಿಎಸ್​ ಮತ್ತು ಎ. ಮಂಜು ಇದೀಗ ಒಟ್ಟಿಗೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಮಂಜು ಅವರು ಸದಾ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.


Spread the love

About Laxminews 24x7

Check Also

ಖಾವಿ ಬಟ್ಟೆತೊಟ್ಟು ಗುತ್ತಿಗೆದಾರನಿಂದ ಲಕ್ಷ-ಲಕ್ಷ ಕಿತ್ತ ಸ್ವಾಮೀಜಿಗಳು: ಪ್ರಕರಣ ದಾಖಲು

Spread the loveನಾವು ಕಲ್ಲೂರು ಮಠದ ಸ್ವಾಮೀಜಿ, ಮಠಕ್ಕೆ ರಾಜಕಾರಣಿಗಳಿಂದ 350 ಕೋಟಿ ಹಣ ಬಂದಿದೆ ಎಂದು ಗುತ್ತಿಗೆದಾರನನ್ನ ನಂಬಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ