Breaking News

ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್

ನವದೆಹಲಿ, ಏಪ್ರಿಲ್ 3: ದೇಶಾದ್ಯಂತ ಸೋಮವಾರ ಈದ್ (Eid 2025) ಆಚರಿಸಲಾಗಿತ್ತು. ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಯ ಮುಂದೆ 71 ವರ್ಷದ ಮಹಿಳೆಯೊಬ್ಬರು ‘ನಮಾಜ್’ (Namaz) ಸಲ್ಲಿಸಿದರು. ಈಗಾಗಲೇ ಉತ್ತರ ಪ್ರದೇಶ ಸರ್ಕಾರ ರಸ್ತೆಗಳು, ಫುಟ್​ಪಾತ್​ನಲ್ಲಿ ನಮಾಜ್ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಮುನ್ನಿ ಎಂದು ಗುರುತಿಸಲಾದ ವೃದ್ಧೆ ಹಮೀರ್‌ಪುರದ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ನಮಾಜ್ ಮಾಡಿದರು. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಮತ್ತು ಆ ವೇಳೆ ಕರ್ತವ್ಯದಲ್ಲಿದ್ದ ಸೆಕ್ಯುರಿಟಿಯನ್ನು …

Read More »

ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಬೆಳಗಾವಿಯ 7 ವಿದ್ಯಾರ್ಥಿಗಳು ಆಯ್ಕೆ

ಬೆಳಗಾವಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI) ಆಯೋಜಿಸಿರುವ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್​ಗೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ 7 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಮಣಿಪುರದ ಇಂಫಾಲ್​ನಲ್ಲಿ‌ ಏಪ್ರಿಲ್ 6ರಿಂದ ಸ್ಪರ್ಧೆ ನಡೆಯಲಿದೆ. ಕರ್ನಾಟಕದಿಂದ 20 ಕ್ರೀಡಾಪಟುಗಳು ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್​ಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಏಳು ಮಂದಿ ಬೆಳಗಾವಿ ಜಿಲ್ಲೆಯವರಾಗಿದ್ದರೆ. ಅದರಲ್ಲೂ‌ಹಳ್ಳಿ ಪ್ರತಿಭೆಗಳೇ ಎನ್ನುವುದು ಮತ್ತೊಂದು ವಿಶೇಷ. ಈ ಏಳು ಕ್ರೀಡಾಪಟುಗಳಲ್ಲಿ ಐವರು ಕಡೋಲಿ ಗ್ರಾಮದವರು. ಕಡೋಲಿ …

Read More »

ಬಿಎಸ್​ವೈ ಕುಟುಂಬ ರಾಜ್ಯಾಧ್ಯಕ್ಷರ ಸ್ಥಾನದಲ್ಲಿ ಇರುವವರೆಗೂ ಬಿಜೆಪಿಗೆ ಬರಲ್ಲ : ಯತ್ನಾಳ್

ಬೆಂಗಳೂರು : ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತವಾಗುವ ತನಕ ನಾನು ಬಿಜೆಪಿಗೆ ವಾಪಸ್ ಬರುವುದಿಲ್ಲ ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರರನ್ನ ಇಟ್ಟುಕೊಂಡು ಯತ್ನಾಳ್ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದರು. ಮಗನ ರಕ್ಷಣೆಗೋಸ್ಕರ ಪ್ರತಿಭಟನೆ : ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಯಡಿಯೂರಪ್ಪ ತನ್ನ ಮಗನ ರಕ್ಷಣೆಗೋಸ್ಕರ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಅಷ್ಟೇ. …

Read More »

ಕುಡಿಯುವ ನೀರಿಗೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ಕುಡಿಯುವ ನೀರಿಗೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು : “ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರತಿನಿಧಿಗಳ ನಿಯೋಗವು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದರು. …

Read More »

ಕೇಂದ್ರ ಏರಿಕೆ ಮಾಡಿದ್ರೇ ರಾಜ್ಯ ಬೆಲೆ ಏರಿಕೆ ಮಾಡುವುದು ಅನಿವಾರ್ಯ…: ಗೃಹ ಸಚಿವ ಪರಮೇಶ್ವರ

ಕೇಂದ್ರ ಏರಿಕೆ ಮಾಡಿದ್ರೇ ರಾಜ್ಯ ಬೆಲೆ ಏರಿಕೆ ಮಾಡುವುದು ಅನಿವಾರ್ಯ… ಪ್ರತಿಭಟನೆ ಕೈಗೊಂಡ ಬಿಜೆಪಿಗರಿಗೆ ಚಾಟಿ ಬೀಸಿದ ಗೃಹ ಸಚಿವ ಪರಮೇಶ್ವರ ಕೇಂದ್ರ ಸರ್ಕಾರ ರಾಜ್ಯ ಕೊಡಬೇಕಾದ ಪಾಲು ನೀಡುತ್ತಿಲ್ಲ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದ್ರೇ, ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎನ್ನುವ ಮೂಲಕ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುತ್ತಿರುವ ಬಿಜೆಪಿಗರಿಗೆ ಗೃಹ ಸಚಿವ ಜಿ. ಪರಮೇಶ್ವರ ಚಾಟಿ ಬೀಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಅವರು …

Read More »

ಅರ್ಬನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದ ಕಟೌಟ್ನಲ್ಲಿ ಸಿಎಂ ಫೋಟೋ ಮಾಯ..

ಅರ್ಬನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದ ಕಟೌಟ್ನಲ್ಲಿ ಸಿಎಂ ಫೋಟೋ ಮಾಯ.. ಜಮಖಂಡಿಯಲ್ಲಿಯೂ ಶುರುವಾಯಿತಾ ಸಿದ್ದು- ಡಿಕೆಶಿ ಕಟೌಟ್ ಪೊಲಿಟಿಕ್ಸ್ ಜಮಖಂಡಿಯಲ್ಲೂ ಶುರುವಾಯಿತಾ ಡಿಕೆಶಿ ಮತ್ತು ಸಿದ್ದು ಬಣದ ನಡುವೆ ಕಟೌಟ್ ಪಾಲಿಟಿಕ್ಸ್ ಎಂಬುದು ನಿನ್ನೆ ನಡೆದ ಜಮಖಂಡಿ ಅರ್ಬನ್ ಬ್ಯಾಂಕ್ ಉದ್ಘಾಟನಾ ಕಾರ್ಯಕ್ರಮದ ಕಟೌಟ್ನಲ್ಲಿ ಸಿಎಂ ಫೋಟೋ ಮಾಯವಾಗಿದ್ದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಕ್ಕಾಗಿ ನಗರದಲ್ಲಿ ಹಾಕಲಾಗಿದ್ದ ಕಟೌಟ್ಗಳಲ್ಲಿ ಸಿಎಂ ಫೋಟೋ ಮಾಯವಾಗಿತ್ತು ಅರ್ಬನ್ ಬ್ಯಾಂಕ್ …

Read More »

ವಡಗಾಂವನಲ್ಲಿ ನೇಕಾರ ಸಮಾಜದಿಂದ ದೇವರ ದಾಸಿಮಯ್ಯನವರ ಜಯಂತಿ

ವಡಗಾಂವನಲ್ಲಿ ನೇಕಾರ ಸಮಾಜದಿಂದ ದೇವರ ದಾಸಿಮಯ್ಯನವರ ಜಯಂತಿ…ಕಣ್ಮನ ಸೆಳೆದ ಮೆರವಣಿಗೆ… ಸಮಾಜ ಬಾಂಧವರೊಂದಿಗೆ ಹಜ್ಜೆ ಹಾಕಿದ ಶಾಸಕ ಅಭಯ್ ಪಾಟೀಲ್ ಬೆಳಗಾವಿಯ ವಡಗಾಂವನಲ್ಲಿ ನೇಕಾರ ಸಮಾಜದ ವತಿಯಿಂದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿಯ ನಿಮಿತ್ಯ ವಿಜೃಂಭಣೆಯ ಮೆರವಣಿಗೆ ನಡೆಯಿತು.ಶಾಸಕರಾದ ಅಭಯ್ ಪಾಟೀಲ ಹಾಗೂ ಅವರ ಕಾರ್ಯಕರ್ತರು ಹುಮ್ಮಸ್ಸಿನಿಂದ ಮೆರವಣಿಗೆಯ ವಾದ್ಯಗಳಿಗೆ ಹೆಜ್ಜೆ ಹಾಕಿದರು. ಭಾವಚಿತ್ರದ ಧ್ವಜಗಳು …

Read More »

ರಸ್ತೆ ನಿರ್ಮಾಣ, ಚರ್ಚ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ರಸ್ತೆ ನಿರ್ಮಾಣ, ಚರ್ಚ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಬೆಳಗಾವಿ : ಕಂಗ್ರಾಳಿ ಬಿಕೆ ಗ್ರಾಮದ ಚರ್ಚ್ ಗಲ್ಲಿಯ ರಸ್ತೆ ನಿರ್ಮಾಣ ಹಾಗೂ ಶಾರೋನ್ ತೆಲಗು ಕ್ರಿಶ್ಚಿಯನ್ ಬ್ರೆಶರ್ನ್ ಚರ್ಚ್ ಅಭಿವೃದ್ಧಿ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸ್ಥಳೀಯ ಜನರೊಂದಿಗೆ ಸೇರಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ರಸ್ತೆ ನಿರ್ಮಾಣಕ್ಕಾಗಿ 80 ಲಕ್ಷ ಹಾಗೂ ಚರ್ಚ್ ಅಭಿವೃದ್ಧಿಗೆ 24 ಲಕ್ಷ ರೂ,ಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ …

Read More »

ನ್ಯಾಯವಾದಿ ಮೇಲೆ ಹಲ್ಲೆ

ಗುರಾಯಿಸಿದ್ದೇಕೆ ಎಂದು ಪ್ರಶ್ನಿಸಿದಕ್ಕೆ ನ್ಯಾಯವಾದಿ ಮೇಲೆ ಹ**-ಲ್ಲೆ* ಬೆಳಗಾವಿಯ ಕಣಬರ್ಗಿಯಲ್ಲಿ ಘಟನೆ ಕಣಬರ್ಗಿ ನಿವಾಸಿ ರಾಹುಲ್ ಟ್ಯಾನಗಿ ಹಲ್ಲೆ ಗೊಳಗಾದ ನ್ಯಾಯವಾದಿ ಬೈಕ್ ಮೇಲೆ ಹೊರಟಿದ್ದ ರಾಹುಲ್ ಹಾಗೂ ಸಂಬಂಧಿ ನೇಹಾಲ್ ಹೆಗ್ಗನಾಯಕ ಈ ವೇಳೆ ನಾಲ್ಕೈದು ಜನರ ಗುಂ,**ಪು ನ್ಯಾಯವಾದಿ ರಾಹುಲ್‌ರನ್ನು ಗುರಾಯಿಸಿದೆ ಇದನ್ನು ಪ್ರಶ್ನಿಸಿ ಮನೆಗೆ ಹೋಗಿದ್ದ ನ್ಯಾಯವಾದಿ ರಾಹುಲ್ ಟ್ಯಾನಗಿ

Read More »

ಘನಘೋರ ಕೃತ್ಯಕ್ಕೆ ಸಾಕ್ಷಿಯಾದ ಕಲಬುರಗಿ: ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ

ಕಲಬುರಗಿ, ಏಪ್ರಿಲ್​​ 03: ಆತ ಸರ್ಕಾರಿ ನೌಕರ. ಮದುವೆಯಾಗಿ ಸುಖಃ ಸಂಸಾರ ನಡೆಸುತ್ತಿದ್ದ. ಅದಕ್ಕೆ ಸಾಕ್ಷಿವೆಂಬಂತೆ ಎರಡು ಮಕ್ಕಳು ಸಹ ಇದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಡೆತ್​ನೋಟ್ (Death Note) ಬರೆದಿಟ್ಟು ತನ್ನ ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ಕೊಂದು (kill) ತಾನು ಕೂಡ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಗಾಬರೆ ಲೇಔಟ್​ನ ಅಪಾರ್ಟ್ಮೆಂಟ್​ನಲ್ಲಿ ಘಟನೆ ನಿನ್ನೆ ನಡೆದಿದೆ. ಈ ಘನಘೋರ ಕೃತ್ಯ ‌ಕಂಡು‌ ಇಡೀ ಕಲಬುರಗಿ ಬೆಚ್ಚಿಬಿದ್ದಿದೆ. ಸ್ಟೇಷನ್ ಬಜಾರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ …

Read More »