ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ತಾಯಿ-ಮಗ ಹೀಗೆ ಸಾವಿನಲ್ಲಿ ಒಂದಾಗಿದ್ದಾರೆ. ಲೋ ಬಿಪಿಯಿಂದಾಗಿ 45 ವರ್ಷದ ಕುಶಾಲ್ ಮೃತಪಟ್ಟಿದ್ದ.
ಮಗನ ಸಾವಿನ ಸುದ್ದಿ ಕೇಳಿ ತಾಯಿ ಲಕ್ಷ್ಮಮ್ಮ(69) ಸಹ ಇಹಲೋಕ ತ್ಯಜಿಸಿದ್ದಾರೆ.
ನಿನ್ನೆ ಮನೆಯಲ್ಲಿ ಟಿವಿ ನೋಡುವ ವೇಳೆ ಕುಶಾಲ್‌ಗೆ ಲೋ ಬಿಪಿ ಆಗಿದೆ. ರಕ್ತದೊತ್ತಡ ಕುಸಿದು ಒದ್ದಾಡುತ್ತಿದ್ದ ಕುಶಾಲ್‌ನನ್ನು ಸ್ಥಳೀಯರು ಮನೆಯ ಹೊರಗೆ ತಂದಿದ್ದಾರೆ. ಈ ವೇಳೆ ಕುಶಾಲ್ ಮನೆಯ ಮುಂದೆ ಪ್ರಾಣ ಬಿಟ್ಟಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಲಕ್ಷ್ಮಮ್ಮ ಮಗನ ಸಾವು ನೋಡಿ ಹೃದಯಾಘಾತಕ್ಕೆಈಡಾಗಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.