Breaking News

ರಾಷ್ಟ್ರ ಮಟ್ಟದಲ್ಲಿ ವೈರಲ್ ಆಯ್ತು ವಿಡಿಯೋ; ನರ್ತಕಿ ಮೇಲೆ ಹಣ ತೂರಿದ ಕಾಂಗ್ರೆಸ್ ಮುಖಂಡ!

Spread the love

ಧಾರವಾಡ: ನಿನ್ನೆ ನರ್ತಕಿಯೊಬ್ಬರ ಮೇಲೆ ಹಣ ತೂರಿದ್ದ ಕಾಂಗ್ರೆಸ್​ ಮುಖಂಡನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ದಿನ ಬೆಳಗಾಗುವಷ್ಟರಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ದೇಶದೆಲ್ಲೆಡೆ ವೈರಲ್ ಆಗಿದೆ. ಶಿವಶಂಕರ ಎಂಬ ಈ ಕಾಂಗ್ರೆಸ್ ಮುಖಂಡ ಧಾರವಾಡದವನು.

ಅಷ್ಟೇ ಅಲ್ಲದೇ ಈತ ಮಾಜಿ ಸಚಿವ ವಿನಯ ಕುಲಕರ್ಣಿ ಪರಮಾಪ್ತ ಕೂಡ.

ಶಿವಶಂಕರ ಹಂಪಣ್ಣವರ, ಮದುವೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ. ಅಲ್ಲೇ ನೃತ್ಯ ಕಾರ್ಯಕ್ರಮವೂ ನಡೆಯುತ್ತಿತ್ತು. ಈ ವೇಳೆ ಶಿವಶಂಕರ ಹಂಪಣ್ಣವರ ನೃತ್ಯಗಾರ್ತಿ ಮೇಲೆ ಹಣ ತೂರಿ ಕುಣಿದಿದ್ದಾನೆ.

ಇಷ್ಟೆಲ್ಲಾ ಆಗಿದ್ದು ಆತನ ಸ್ನೇಹಿತನ ಮಗಳ ಮದುವೆಯ ಅರಿಶಿನ ಕಾರ್ಯಕ್ರಮದಲ್ಲಿ! ಕೌಟುಂಬಿಕ ಕಾರ್ಯಕ್ರಮದಲ್ಲಿ ಹಣ ತೂರಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದ್ದು ವಿಡಿಯೋ ಮಾತ್ರ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ಧಾರವಾಡದ ಹಿರಿಯ ಪತ್ರಿಕಾ ಫೋಟೋಗ್ರಾಫರ್ ಆರ್ ಕೆ ( ರಾಮಚಂದ್ರ ಕುಲಕರ್ಣಿ) ಇನ್ನಿಲ್ಲ

Spread the loveಧಾರವಾಡ: ಆರ್ ಕೆ ಖ್ಯಾತಿಯ ಹಿರಿಯ ಪತ್ರಿಕಾ ಪೋಟೋಗ್ರಾಫರಾಗಿ ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದ ರಾಮಚಂದ್ರ ಕುಲಕರ್ಣಿ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ