Breaking News

ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ

Spread the love

ಬೆಂಗಳೂರು: ನವರಸ ನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ ಎಂದು ಹೇಳಬಹುದಾಗಿದೆ. ಮಾರ್ಚ್​ 17ರಂದು ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 61ನೇ ಜನುಮದಿನವನ್ನು ಆಚರಿಸಿಕೊಂಡ ನಟ ಜಗ್ಗೇಶ್​ಗೆ ಇದೀಗ ವಿವಾಹ ವಾರ್ಷಿಕೋತ್ಸವದ ದಿನವನ್ನೂ ಸಂಭ್ರಮಿಸಿದ್ದಾರೆ.ಪತ್ನಿ ಪರಿಮಳ ಜತೆಗಿನ 40 ವರ್ಷದ ಪ್ರಯಾಣವನ್ನು ನೆನೆಪು ಮಾಡಿಕೊಂಡಿದ್ದಾರೆ. 1982ರ ಕಾಲಘಟ್ಟಕ್ಕೆ ಮತ್ತೆ ಜಾರಿದ್ದಾರೆ.

 

ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಹಲವರು ಲವ್ ಮಾಡಿ ಮದುವೆ ಆಗಿದ್ದಾರೆ. ನಟ ಜಗ್ಗೇಶ್ ಅವರದ್ದು ಕೂಡ ಲವ್ ಮ್ಯಾರೇಜ್. ಪರಿಮಳಾ ಅವರಿಗೆ ಸಿನಿಮಾ ನಂಟು ಇಲ್ಲದಿದ್ದರೂ ಜೊತೆಗಿನ ಪ್ರೇಮ್ ಕಹಾನಿ ಮಾತ್ರ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ ಎಂದು ಹೇಳಬಹುದಾಗಿದೆ.

ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ಮದುವೆಯಾದರು. ಈ ವಿಶೇಷ ದಿನವನ್ನು ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ. ಜಗ್ಗೇಶ್ ಮದುವೆ ವಿಚಾರ ಸಖತ್ ಸುದ್ದಿ ಆಗಿತ್ತು. ಅವರು ಮದುವೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಅಲ್ಲಿ ಅವರಿಗೆ ಜಯ ಸಿಕ್ಕಿತ್ತು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ