Breaking News
Home / ಜಿಲ್ಲೆ / ಬೆಳಗಾವಿ / ಕಾಗವಾಡ / ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡೋಣ ಬಳಿ ಕ ಎಲ್ಲರೂ ಒಂದಾಗಿ ಪಕ್ಷ, ಜಾತಿ ಭೇದಗಳನ್ನು ಮರೆತು ಅಭಿವೃದ್ಧಿಗಾಗಿ ಒಂದಾಗೋಣ ಎಂದ ರಾಜು ಕಾಗೆ

ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡೋಣ ಬಳಿ ಕ ಎಲ್ಲರೂ ಒಂದಾಗಿ ಪಕ್ಷ, ಜಾತಿ ಭೇದಗಳನ್ನು ಮರೆತು ಅಭಿವೃದ್ಧಿಗಾಗಿ ಒಂದಾಗೋಣ ಎಂದ ರಾಜು ಕಾಗೆ

Spread the love

ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮ ಸರ್ವಾಂಗಿನ ಅಭಿವೃದ್ಧಿ ವಾಗಲು ಸ್ಥಳೀಯ ಎಲ್ಲ ರಾಜಕೀಯ ಪಕ್ಷದ ಮುಖಂಡರು ಚುನಾಯಿತ ಸದಸ್ಯರು ಇವರ ಸಹಕಾರದಿಂದ 12 ಅಂತರರಾಷ್ಟ್ರೀಯ,ರಾಷ್ಟ್ರ, ರಾಜ್ಯ, ಪ್ರಶಸ್ತಿಗಳು ಲಭಿಸಿವೆ ಇದು ಒಂದು ಗ್ರಾಮದ ಒಕ್ಕಟಕ್ಕೆದ ಫಲ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಮಂಗಳವಾರ ರಂದು ಶರುಗುಪ್ಪಿ ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಬಳಿಕ ಪ್ರಥಮ ಬಾರಿಗೆ ಶಾಸಕ ರಾಜು ಕಾಗೆ ಆಗಮಿಸಿದ ನಿಮಿತ್ಯ ಅವರನ್ನು ಮತ್ತು ನೂತನ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸುವ ಕಾರ್ಯಕ್ರಮ ಜರಗಿತು.

ಸನ್ಮಾನ ಸ್ವೀಕರಿಸಿ ಶಾಸಕ ರಾಜು ಕಾಗೆ ಮಾತನಾಡುವಾಗ ನಾನು ಐದು ಬಾರಿ ಶಾಸಕನಾಗಿದ್ದೇನೆ, 20 ವರ್ಷದ ಅವಧಿಯಲ್ಲಿ ಪ್ರತಿಯೊಂದು ಪಂಚಾಯತಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಅನುದಾನಗಳು ಸಮಪಾಲವಾಗಿ ನೀಡಿದೆ, ಆದರೆ ಶಿರಗುಪ್ಪಿ ಗ್ರಾಮ ಪಂಚಾಯಿತಿಗೆ ಅಂತರರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ, ಜಿಲ್ಲಾಮಟ್ಟದ ಹೀಗೆ 12 ಪ್ರಶಸ್ತಿಗಳು ಲಭಿಸಿದೆ ಇದು ಎಲ್ಲ ಶ್ರೇಯಸ್ಸು ಗ್ರಾಮದಲ್ಲಿ ಇರುವ ಎಲ್ಲ ರಾಜಕೀಯವು ಮುಖಂಡರು ಗ್ರಾಮದ ಅಭಿವೃದ್ಧಿಗಾಗಿ ಒಗ್ಗಟಿನ ಪ್ರಶಸ್ತಿಗಳು, ಎಂದು ಹೇಳಿ ಕಾಗವಾಡ ಕ್ಷೇತ್ರದ ಇನ್ನುಳಿದ ಪಂಚಾಯಿತಿಗಳು ಶಿರುಗುಪ್ಪಿ ಗ್ರಾಮದ ಅನುಕರಣೆ ಮಾಡಬೇಕೆಂದು ಅಭಿಪ್ರಾಯಪಟ್ಟರು.

ಚುನಾವಣೆಯಲ್ಲಿ ಮಾತ್ರ ರಾಜಕೀಯ ಮಾಡೋಣ ಬಳಿ ಕ ಎಲ್ಲರೂ ಒಂದಾಗಿ ಪಕ್ಷ, ಜಾತಿ ಭೇದಗಳನ್ನು ಮರೆತು ಅಭಿವೃದ್ಧಿಗಾಗಿ ಒಂದಾಗೋಣ ಎಂದು ಹೇಳಿದರು.


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ