Breaking News
Home / ರಾಜಕೀಯ / ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

Spread the love

ಮೋದಿ ಆಡಳಿತದಲ್ಲಿ ಆರ್ಥಿಕವಾಗಿ ಜಪಾನ್- ಇಂಗ್ಲೆಂಡ್‌ ಕಿಂತ ಮುಂದೆ ಭಾರತ ಇದೆ: ಮಾಜಿ ಸಚಿವ ಮುರಗೇಶ ನಿರಾಣಿ…!!

 : ಬೆಳಗಾವಿ : ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ಜಪಾನ್ ಮತ್ತು ಇಂಗ್ಲೆಂಡ್ ದೇಶಗಳನ್ನು ಹಿಂದೆ ಹಾಕಿ ಭಾರತ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದೆ. ಇನ್ನೂ ಕೆಲವೆ ವರ್ಷದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮೊದಲ ಸ್ಥಾನದಲ್ಲಿ ತರುವುದು ಮೋದಿಯವರ ಗುರಿ ಆಗಿದೆ ಎಂದು ಮಾಜಿ ಸಚಿವ ಮುರಗೇಶ ನಿರಾಣಿ ಅವರು ಹೇಳಿದರು.‌

ಲೋಕಸಭಾ ಚುನಾವಣೆಯ ಅಂಗವಾಗಿ ಮುಡಲಗಿ- ಅರಭಾವಿ ಮತಕ್ಷೇತ್ರದ ಕುಲಗೋಡ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಭಹಿರಂಗ ಸಭೆ ನಡೆಸಿ ಮತಯಾಚನೆ ಮಾಡಿ ಮಾತನಾಡಿದ ಅವರು, ದಿನದ 24 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ ಎಂದರೆ ಅದು ನರೇಂದ್ರ ಮೋದಿಯವರು. ಸಿದ್ದೇಶ್ವರ ಶ್ರೀಗಳು ತಮ್ಮ ಜೀವನದಲ್ಲಿ ಹೋಗಳಿದ್ದು ಒಬ್ಬನೆ ರಾಜಕಾರಣಿ ಅದು ನರೇದ್ರ ಮೋದಿ. 543 ಲೋಕಸಭಾ ಕ್ಷೇತ್ರದಲ್ಲಿ 200 ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ.‌ ಅದರಲ್ಲಿ 2 ಕ್ಷೇತ್ರ ಈಗಾಗಲೇ ಬಿಜೆಪಿ ಗೆದ್ದಂತೆ ಆಗಿದೆ. ಬಹುಮತ ಸಿಗಬೇಕು ಎಂದರೆ 375 ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು. ಆದರೆ ಈ ಕಾಂಗ್ರೆಸ್ ನವರು ಯಾವ ಆಧಾರದ ಮೇಲೆ ಗ್ಯಾರಂಟಿ ತಗೆದುಕೊಂಡು ಹೊಗುತ್ತಿದ್ದಾರೆ ಗೊತ್ತಿಲ್ಲ ಎಂದು ಮುರಗೇಶ ನಿರಾಣಿ ಅವರು ತಿಳಿಸಿದರು.

ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರು, ಈ ಹಿಂದೆ ಇಡಿ ಬೆಳಗಾವಿ ಜಿಲ್ಲೆ ಪ್ರವಾಸ ಮಾಡಿ, ಈ ಕ್ಷೇತ್ರದ ಸಮಸ್ಯೆ ಆಲಿಸಿದ್ದೆನೆ. 2000 ನೆ ಇಸ್ವಿಯಲ್ಲಿ ಕುಲಗೊಡಗೆ ಬಂದು, ಜನರ ಸಮಸ್ಯೆ ಆಲಿಸಿದ್ದೆನೆ.‌ ನಾನು ಹೊರಗಿನವರು ಎಂದು ಹೇಳುತ್ತಿರುವರು ಅವತ್ತು ಇರಲೇ ಇಲ್ಲ. ಮಹಾಂತೇಶ ಕವಟಿಕಮಠ ಅವರು ಕೂಡಾ ಲೋಕಸಭೆಗೆ ಸ್ಪರ್ಧೆ ಮಾಡಬೇಕು ಎಂದು ಇದ್ದರು. ಆದರೆ ನಮಗೆ ಟಿಕೆಟ್ ಸಿಕ್ಕ ನಂತರ ನಮ್ಮ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮೋದಿಯವರ ೧೦ ವರ್ಷದ ಸಾಧನೆ ನಮ್ಮ ಕಣ್ಣಮುಂದೆ ಇದೆ. ಇಂದು ಬೆಳಗ್ಗೆ ಪಾಕಿಸ್ತಾನದ ಪ್ರತಿಪಕ್ಷದ ನಾಯಕ ಅಲ್ಲಿಯ ಲೀಡರ್ ಗಳಿಗೆ ಹೇಳಿದ್ದಾರೆ. ಇಂದು ಭಾರತ ಸೂಪರ್ ಪಾವರ್ ಆಗಿದೆ. ಪಾಕಿಸ್ತಾನದವರು ನಾವು ಏನು ಮಾಡುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಿಗೆ ಮೀಸಲಾತಿ. ಮಹಿಳೆಯರಿಗೆ ಗ್ಯಾಸ್ ವಿತರಣೆ, ವಿಮಾ ಯೋಜನೆ, ಜನ ಔಷಧ ಕೇಂದ್ರದ ಮುಲಕ ಔಷಧ ವಿತರಣೆ, ಕಿಸಾನ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ಖಾತೆ ಹಣ ನೀಡಲಾಗುತ್ತಿದೆ.‌ ಇಡೀ ಜಗತ್ತಿನಯಲ್ಲಿ ದೇಶ ಸೂಪರ್ ಪಾವರ್ ಮಾಡುವುದು ಮೋದಿಯವರ ಗ್ಯಾರಂಟಿ ಆಗಿದೆ. ಮುಂದಿನ ದಿನಗಳಲ್ಲಿ ಕಾಮನ್ ಸಿವಿಲ್ ಕೋರ್ಟ್ ಜಾರಿಗೆ ಬರಲಿದೆ. ಬೆಳಗಾವಿಯಲ್ಲಿ ಸಾಕಷ್ಟು ಶುಗರ್ ಕಾರ್ಖಾನೆ ಇದೆ. ಆದರೂ ಉದ್ಯೋಗ ಸೃಷ್ಟಿ ಮಾಡಲು ಬೇರೆ ಬೇರೆ ಕಾರ್ಖಾನೆ ಸ್ಥಾಪನೆ ಮಾಡಬೇಕು ಎಂದರು.‌

ಬಾಲಚಂದ್ರ ಜಾರಕಿಹೊಳಿ ಅವರು ಹೆಚ್ಚು ಮಾತನಾಡದೆ ಕೆಲಸ ಮಾಡುತ್ತಾರೆ. ಅವರು ಒಬ್ಬ ಕಿಂಗ್ ಮೇಕರ್, ಯಾವುದೆ ಸರ್ಕಾರ ಇದ್ದರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎಂದು ತಿಳಿಸಿದರು.


Spread the love

About Laxminews 24x7

Check Also

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಕೇಸು: ಇಂದು ಹಾಸನದಲ್ಲಿ SIT ಸ್ಥಳ ಮಹಜರು, ಮೇ.4ಕ್ಕೆ ರೇವಣ್ಣ ವಿಚಾರಣೆ

Spread the loveಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಹಗರಣ ಕೇಸಿಗೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಎಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ