Breaking News
Home / ಜಿಲ್ಲೆ / ಮೈಸೂರ್ / ಹಲವು ವರ್ಷಗಳಿಂದಲೂ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್​ಗೆ ದೊಡ್ಡ ಸವಾಲಾಗಿದೆ.

ಹಲವು ವರ್ಷಗಳಿಂದಲೂ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್​ಗೆ ದೊಡ್ಡ ಸವಾಲಾಗಿದೆ.

Spread the love

ಲವು ವರ್ಷಗಳಿಂದಲೂ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗವನ್ನು ಉಳಿಸಿಕೊಳ್ಳುವುದೇ ಜೆಡಿಎಸ್​ಗೆ ದೊಡ್ಡ ಸವಾಲಾಗಿದೆ.ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಕಳೆದ ಬಾರಿ ಜೆಡಿಎಸ್​ ಭರ್ಜರಿ ಗೆಲುವು ಗಳಿಸಿತ್ತು. ಆದರೆ, ಈ ಬಾರಿ ಜೆಡಿಎಸ್​ಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಪ್ರಬಲ ಪೈಪೋಟಿ ಎದುರಾಗಿದೆ.ಹಾಗಾಗಿ ಭದ್ರಕೋಟೆ ಉಳಿಸಿಕೊಳ್ಳುವುದು ಜೆಡಿಎಸ್​ಗೆ ಸವಾಲಾಗಿದೆ ಎಂದೇ ಹೇಳಬಹುದು.

ಹೆಚ್​ಡಿ ದೇವೇಗೌಡ ಹಾಗೂ ಹೆಚ್​ಡಿ ಕುಮಾರಸ್ವಾಮಿ ಅವರು ಮತದಾರರನ್ನು ಸೆಳೆಯುವ ಪ್ರಮುಖ ನಾಯಕರು. ಆದ್ರೆ ದೇವೇಗೌಡರಿಗೆ ಆರೋಗ್ಯ ಸಮಸ್ಯೆ ಇರುವುದರಿಂದ ಎಲ್ಲಾ ಭಾಗದಲ್ಲೂ ಈ ಬಾರಿ ಪ್ರಚಾರ ಕಷ್ಟ. ಇದು ಸಹ ಹಿನ್ನೆಡೆಗೆ ಕಾರಣವಾಗಬಹುದು. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿರುವಂತೆ ಎರಡನೇ ಹಂತದ ನಾಯಕರ ಕೊರತೆಯೂ ಪಕ್ಷದಲ್ಲಿದೆ. ಹಾಗಾಗಿ, ಜೆಡಿಎಸ್​ನಲ್ಲಿ ಪ್ರಚಾರಕ್ಕೆ ತೊಂದರೆಯಾಬಹುದು. ಹಳೇ ಮೈಸೂರು ಭಾಗ ಬಿಟ್ಟರೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗಗಲ್ಲಿ ಪಕ್ಷಕ್ಕೆ ದೊಡ್ಡ ಶಕ್ತಿ ಇಲ್ಲ. ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಕೊರೆಯೂ ಇದೆ. ರಾಷ್ಟ್ರೀಯ ಪಕ್ಷಗಳಂತೆ ಸಂಪನ್ಮೂಲ ಕ್ರೋಢಿಕರಣದಲ್ಲಿ ಹಿಂದೆ ಉಳಿದಿರುವ ಜೆಡಿಎಸ್, ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯನ್ನು ಎದುರಿಸಿದೆ. ಇದೆಲ್ಲವೂ ಜೆಡಿಎಸ್​ಗೆ ಸವಾಲಾಗಿ ಪರಿಣಮಿಸಿದೆ.

ಹಳೇ ಮೈಸೂರು ಭಾಗದಲ್ಲಿ 57 ಕ್ಷೇತ್ರಗಳಿವೆ. ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬೇಕೆಂದಾದರೆ ಈ ಕ್ಷೇತ್ರಗಳ ಚುನಾವಣೆ ಗೆಲುವು ಪ್ರಮುಖವಾಗಿದೆ. ಈ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದವರು ಶೇ.17 ರಷ್ಟಿದ್ದು, ಇವರ ಒಲವು ಯಾರ ಮೇಲಿರುತ್ತದೆಯೋ ಅವರು ಅಧಿಕಾರಿದ ಗದ್ದುಗೆ ಹಿಡಿಯುತ್ತಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹಳೇ ಮೈಸೂರು ಪ್ರದೇಶವು ರಾಜ್ಯದಲ್ಲಿ ಚುನಾವಣಾ ತಂತ್ರದ ದೃಷ್ಟಿಯಿಂದ ತುಂಬಾ ಪ್ರಬಲ ಎಂದು ಪರಿಗಣಿಸಲಾಗಿದೆ. ಈ ಪ್ರದೇಶವು ಜೆಡಿಎಸ್​ನ ಸಾಂಪ್ರದಾಯಿಕ ಭದ್ರಕೋಟೆ ಎಂಬ ಹೆಗ್ಗಳಿಕೆಯೂ ಹೊಂದಿದೆ. ಸದ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆ ಈ ಕ್ಷೇತ್ರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆಗಳು ಕಂಡು ಬರುತ್ತಿದ್ದು, ಈ ಬಾರಿ ತೀವ್ರ ಪೈಪೋಟಿಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸಹ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿದ್ದು, ಜೆಡಿಎಸ್ ಕೋಟೆಯನ್ನು ಕೆಡವಲು ನಾನಾ ರೀತಿ ತಂತ್ರಗಳನ್ನು ಮಾಡುತ್ತಿವೆ.

ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮೂವರು ಅಭ್ಯರ್ಥಿಗಳು ಸಹ ಹಳೇ ಮೈಸೂರು ಭಾಗದಲ್ಲಿರುವುದು ಮತ್ತೊಂದು ವಿಶೇಷ. ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಒಟ್ಟು 52 ಸ್ಥಾನಗಳು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ನಿರ್ಣಾಯಕವಾಗಿವೆ. ಮತ್ತೊಂದೆಡೆ ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರಿನಲ್ಲಿ ಯಾವುದೇ ಪಕ್ಷ ಗೆದ್ದರೂ ಕರ್ನಾಟಕವನ್ನು ಗೆದ್ದು ಅಧಿಕಾರ ಹಿಡಿಯಬಹುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಮೊದಲಿನಿಂದಲೂ ಕಾಂಗ್ರೆಸ್‌ನ ಮೂಲ ಭದ್ರಕೋಟೆಯಾಗಿತ್ತು. ಇತ್ತೀಚಿನ ದಶಕದಲ್ಲಿ ಜೆಡಿಎಸ್ ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ. ಒಕ್ಕಲಿಗ ಸಮುದಾಯದ ಮತಗಳು ಹಳೇ ಮೈಸೂರು ಭಾಗದಲ್ಲಿ ಶೇ.17 ರಷ್ಟಿದ್ದರೂ, ಈ ಕ್ಷೇತ್ರಗಳಲ್ಲಿ ಎಸ್‌ಸಿ-ಎಸ್‌ಟಿ ಪ್ರಾಬಲ್ಯವೂ ಇದೆ ಎಂಬುದನ್ನು ತಳ್ಳಿಹಾಕುವಂತೆ ಇಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ಇಡೀ ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸುತ್ತಿತ್ತು. ಕಾಂಗ್ರೆಸ್‌ಗೆ ಇಲ್ಲಿಂದ ಉತ್ತಮ ಸ್ಥಾನ ಸಿಗುತ್ತಿತ್ತು. ಆದರೆ ಕಳೆದ ಕೆಲವು ಚುನಾವಣೆಗಳಲ್ಲಿ ನಿರೀಕ್ಷಿತ ಸ್ಥಾನಗಳು ಸಿಗಲಿಲ್ಲ. 2018 ರ ಚುನಾವಣೆಯಲ್ಲಿ ಹಳೇ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ 20 ಸ್ಥಾನಗಳನ್ನು ಪಡೆದುಕೊಂಡಿದೆ. ಇದು 2013 ಕ್ಕಿಂತ 6 ಸ್ಥಾನ ಕಡಿಮೆಯಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡ ಒಕ್ಕಲಿಗರಾದ ಕಾರಣ ಇಲ್ಲಿ ಕಾಂಗ್ರೆಸ್ ಇನ್ನೂ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

ದಾಳಿ ಕಾಲಕ್ಕೆ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಜಾಲಗಾರ ಗಲ್ಲಿಯಲ್ಲಿ ವಾಸಿಸುತ್ತಿದ್ದ ಒಬ್ಬ ರೌಡಿ ಶೀಟರ್ ಮನೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿದಾಗ, ಆತನ ಬಳಿ 02 ತಲವಾರಗಳು ಸಿಕ್ಕಿದ್ದು, ಅವುಗಳನ್ನು ಜಪ್ತಪಡಿಸಿಕೊಂಡು ಆತನ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ  ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ಚುನಾವಣಿಯು ಭಯಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಜರುಗಿಸುವ ನಿಟ್ಟಿನಲ್ಲಿ  ಹಾಗೂ ಬೆಳಗಾವಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬರುವ ಸಲುವಾಗಿ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ