Breaking News
Home / ನವದೆಹಲಿ (page 20)

ನವದೆಹಲಿ

ರಿಪಬ್ಲಿಕ್ ಟಿವಿಗೆ ಬ್ರಿಟನ್ ದಂಡ: ಬ್ರಿಟಿಷರನ್ನು 280 ಬಾರಿ ಕ್ಷಮೆ ಕೋರಿ ಸಾವರ್ಕರ್ ದಾಖಲೆ ಮುರಿದು ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾದ ಅರ್ನಾಬ್ ಗೋ ಸ್ವಾಮಿ

ಹೊಸದಿಲ್ಲಿ: ಬ್ರಿಟನ್ ನ ಟಿವಿ ನಿಯಂತ್ರಣ ಪ್ರಾಧಿಕಾರ ಆಫ್ ಕಾಮ್ 20 ಲಕ್ಷ ರೂ. ದಂಡ ವಿಧಿಸಿದ ಬಳಿಕ 280 ಬಾರಿ ಕ್ಷಮೆ ಕೋರುವ ಮೂಲಕ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಬ್ರಿಟಿಷ್ ಸರಕಾರಕ್ಕೆ ಹಲವು ಬಾರಿ ಕ್ಷಮೆ ಕೋರುವ ಮೂಲಕ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಹಿಂದುತ್ವವಾದಿ ಸಾವರ್ಕರ್ ಅವರಿಗೆ ಗೋಸ್ವಾಮಿಯನ್ನು ಹೋಲಿಸಿರುವ ಜನರು ಕ್ಷಮೆ ಯಾಚನೆಯಲ್ಲಿ ಸಾರ್ವಕರ್ …

Read More »

ಪ್ರತಿಭಟನಾ ನಿರತರು ಇಂದಿನಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನ

ನವದೆಹಲಿ,ಡಿ.21-ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾ ನಿರತರು ಇಂದಿನಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ. ಹರಿಯಾಣ, ಉತ್ತರಪ್ರದೇಶ ಗಡಿ ಭಾಗದಲ್ಲಿ ಕೊರೆಯುವ ಚಳಿಯಲ್ಲೂ ಪ್ರತಿಭಟನೆ ನಡೆಸುತ್ತಿರುವ ರೈತರು ಒಂದೊಂದು ತಂಡದಂತೆ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ 11 ಮಂದಿ ರೈತ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ …

Read More »

ಸಲೂನ್ ಮಾಲೀಕರೊಬ್ಬರು ತಮ್ಮ ಕೆನಡಾ ಪ್ರವಾಸ ರದ್ದುಗೊಳಿಸಿ ರೈತರಿಗೆ ಉಚಿತ ಕಟಿಂಗ್ ಶೇವಿಂಗ್ ಮಾಡುತ್ತಿದ್ದಾರೆ

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ಕೆಲ ವಾರಗಳಿಂದ ರೈತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದಾರೆ. ನಗರದ ಸಿಂಘು ಬಾರ್ಡರ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಲವರು ಹಲವು ರೀತಿಯ ಸಹಾಯ ಮಾಡಿದ್ದಾರೆ. ಅದೇ ರೀತಿ ಸಲೂನ್ ಮಾಲೀಕರೊಬ್ಬರು ತಮ್ಮ ಕೆನಡಾ ಪ್ರವಾಸ ರದ್ದುಗೊಳಿಸಿ ಉಚಿತ ಸೇವೆ ನೀಡಲು ಮುಂದಾಗಿದ್ದಾರೆ. ಸುಮಾರು 20 ದಿನಗಳಿಂದ ರೈತರು ಸಿಂಘು ಬಾರ್ಡರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ ಕಟಿಂಗ್, ಶೇವಿಂಗ್‍ಗಾಗಿ ಸಾಲಾಗಿ …

Read More »

ಡಿಸೆಂಬರ್ 27ರಂದು ಮನ್​​ ಕೀ ಬಾತ್​ ಮುಗಿಯವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ

ಡಿಸೆಂಬರ್ 27ರಂದು ಮನ್​​ ಕೀ ಬಾತ್​ ಮುಗಿಯವ ತನಕ ಮನೆಯಲ್ಲಿ ತಟ್ಟೆ ಬಾರಿಸುವಂತೆ ರೈತರ ಕರೆ ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಕಿಸಾನ್ ಯೂನಿಯನ್​​ ನಾಯಕ ಜಗಜಿತ್ ಸಿಂಗ್ ದಲೆವಾಲಾ, ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಊಟದ ತಟ್ಟೆಯನ್ನ ಹಿಡಿದು ಬಾರಿಸುವಂತೆ ಕರೆ ನೀಡುವಂತೆ ಕರೆ ಕೊಡುತ್ತಿದ್ದೇವೆ. ಅವರ ಭಾಷಣ ಮುಗಿಯುವವರೆಗೂ ರೈತರಿಗೆ ಬೆಂಬಲ ನೀಡುವ ಪ್ರತೀ ನಾಗರೀಕರೂ ತಟ್ಟೆಯನ್ನ …

Read More »

ಖುದ್ದು ಅಮಿತ್ ಶಾ ಅವರೇ ಯಡಿಯೂರಪ್ಪ ಅವರನ್ನು ದೆಹಲಿಗೆ ಆಹ್ವಾನ

ಬೆಂಗಳೂರು, ಡಿ.19- ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ದೆಹಲಿಗೆ ಆಹ್ವಾನಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆಯ ಚಟುವಟಿಕೆಗಳು ಮತ್ತೆ ಗರಿಗೆದರುವಂತೆ ಮಾಡಿದೆ. ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಸಲು ಮುಖ್ಯ ಮಂತ್ರಿ ಯಡಿಯೂರಪ್ಪ ಮೂರು ಬಾರಿ ದೆಹಲಿಗೆ ಭೇಟಿ ನೀಡಿದ್ದರಾದರೂ ಪ್ರಯೋ ಜನವಾಗಲಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಭೇಟಿಗೆ ಸಮಯವನ್ನೇ ನೀಡಿರಲಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ …

Read More »

ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.

ನವದೆಹಲಿ: ಆಕಾಶ್ ಮತ್ತು ಶ್ಲೋಕಾ ದಂಪತಿಗೆ ಇಂದು ಗಂಡು ಮಗು ಜನಿಸಿದೆ. ಈ ಮೂಲಕ ಖ್ಯಾತ ಉದ್ಯಮಿ ರಿಲಾಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅಜ್ಜನಾಗಿ ಬಡ್ತಿ ಪಡೆದಿದ್ದಾರೆ.ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಧೀರೂಬಾಯಿ ಹಾಗೂ ಕೋಕಿಲಾಬೆನ್ ಅಂಬಾನಿ ಕುಟುಂಬದ ಮರಿಮೊಮ್ಮಗನನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಮೂಲಕ ನೀತಾ ಮತ್ತು ಮುಕೇಶ್ ಅಂಬಾನಿ ಅಜ್ಜ, ಅಜ್ಜಿಯಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಶ್ಲೋಕಾ …

Read More »

ಜೆಟ್ ಏರ್‌ವೇಸ್ ಮುಂದಿನ ವರ್ಷ 2021ರ ಬೇಸಿಗೆ ವೇಳೆಗೆ ಮತ್ತೆ ತನ್ನ ಹಾರಾಟವನ್ನು ಆರಂಭಿಸಲಿದೆ.

ನವದೆಹಲಿ, ಡಿ.10- ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿದ್ದ ಜೆಟ್ ಏರ್‌ವೇಸ್ ಮುಂದಿನ ವರ್ಷ 2021ರ ಬೇಸಿಗೆ ವೇಳೆಗೆ ಮತ್ತೆ ತನ್ನ ಹಾರಾಟವನ್ನು ಆರಂಭಿಸಲಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಕಾರ್ಯಚರಣೆಯನ್ನು ಆರಂಭಿಸುವ ಕುರಿತು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೆಟ್ ಏರ್‌ವೇಸ್ ಮಾಲೀಕತ್ವ ವಹಿಸಿಕೊಂಡಿರುವ ಜಲನ್‍ಕಾಲ್‍ರಾಕ್ ಒಕ್ಕೂಟ (ಎನ್‍ಎಲ್‍ಸಿಟಿ) ಘೋಷಿಸಿದೆ. ಕಳೆದು ಹೋಗಿರುವ ನಮ್ಮ ಐತಿಹಾಸಿಕ ಸ್ಥಾನವನ್ನು ಮರುಪಡೆಯಲು ಮತ್ತು ವಿಮಾನಯಾನ ಉದ್ಯಮಕ್ಕೆ ಹೊಸ ಮಾನದಂಡಗಳನ್ನು ಸ್ಥಾಪಿಸಿ ಅತ್ಯುತ್ತಮ ಸೇವೆಯನ್ನು ನೀಡುವ …

Read More »

ರಿಯಾ ಚಕ್ರವರ್ತಿ ಮತ್ತು ಶೋವಿಕ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಅರೆಸ್ಟ್

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿರುವ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್‍ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಡ್ರಗ್ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ನಾರ್ಕೋಟಿಕ್ಸ್ ಬ್ಯೂರೋ(ಎನ್‍ಸಿಬಿ) ಬಂಧಿಸಿದೆ.ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಬೆಳಕಿಗೆ ಬಂದ ನಂತರ ಪರಾರಿಯಾಗಿದ್ದ ಪೆಡ್ಲರ್ ರೆಗೆಲ್ ಮಹಕಲ್‍ನನ್ನು ಎನ್‍ಸಿಬಿ ಈಗ ಮುಂಬೈನ ಪಶ್ಚಿಮ ಉಪನಗರದಲ್ಲಿ ಬಂಧಿಸಿದೆ. ಮಹಕಲ್ ಈ ಪ್ರಕರಣದ ಆರೋಪಿ ಅನುಜ್ ಕೇಶ್ವಾನಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದನು. ನಂತರ ಅದನ್ನು ಕೈಜಾನ್ ಎಂಬ ವ್ಯಕ್ತಿಗೆ …

Read More »

250 ರೂ.ಗೆ 1 ಡೋಸ್‌ – ಮಾರ್ಚ್‌ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

ನವದೆಹಲಿ: ಇಂಗ್ಲೆಂಡಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್‌ ಲಸಿಕೆ ಖರೀದಿ ವಿಚಾರವಾಗಿ ಶೀಘ್ರವೇ ಪುಣೆಯ ಸೀರಂ ಮತ್ತು ಭಾರತ ಸರ್ಕಾರದ ನಡುವೆ ಒಪ್ಪಂದ ನಡೆಯುವ ಸಾಧ್ಯತೆಯಿದೆ.ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೀರಂ 1 ಡೋಸ್‌ಗೆ 250 ರೂ. ದರ ನಿಗದಿ ಪಡಿಸಿದ್ದು ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಪ್ರಕಟಿಸಿದೆಈ ಕುರಿತು ಮಾತನಾಡಿದ ಸಂಸ್ಥೆ ಸಿಇಒ ಅದರ್ ಪೂನಾವಾಲಾ, …

Read More »

ರೈತರಿಗೆ ಬೆಂಬಲ; ದಿಲ್ಲಿ ಸಿಎಂ ಕೇಜ್ರಿವಾಲ್ ಗೆ ಗೃಹ ಬಂಧನ: ಆಪ್ ಆರೋಪ

ನವದೆಹಲಿ : ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಪೆÇಲೀಸರು ಗೃಹ ಬಂಧನದಲ್ಲಿರಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ವಕ್ತಾರ ಸೌರಭ್ ಭಾರದ್ವಾಜ್, ದೆಹಲಿ ಪೆÇಲೀಸರು ಕೇಜ್ರೀವಾಲ್ ಅವರನ್ನು ಗೃಹಬಂಧನದಲ್ಲಿ ಇರಿಸಿದೆ. ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ದೆಹಲಿ ಪೆÇಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಂಗ್ಯೂ ಬಾರ್ಡರ್ ನಲ್ಲಿ ರೈತರನ್ನು ಭೇಟಿ ಮಾಡಿದ ನಂತರ ಗೃಹ ಬಂಧನದಲ್ಲಿರಿಸಲಾಗಿದೆ. ಅವರ ನಿವಾಸಕ್ಕೆ ತೆರಳಲು …

Read More »