Breaking News
Home / ಜಿಲ್ಲೆ / ಯಾದಗಿರಿ / ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ

ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ

Spread the love

ಯಾದಗಿರಿ: ಶೀಲ ಶೆಂಕಿಸಿ ಪತಿಯೇ ತನ್ನ ಪತ್ನಿಯನ್ನು ಸಲಾಕೆಯಿಂದ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಯಾದಗಿರಿ ತಾಲೂಕಿನ ಮಾಧ್ವಾರ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮಾಧ್ವಾರ ಗ್ರಾಮದ ರೇಣುಕಾಳನ್ನು ಆಕೆಯ ಪತಿ ಚೌಡಪ್ಪ ಕೊಲೆ ಮಾಡಿದ್ದಾನೆ. ರೇಣುಕಾ ಮತ್ತು ಚೌಡಪ್ಪ ಕಳೆದ ಒಂಭತ್ತು ವರ್ಷದಿಂದ ದಾಂಪತ್ಯ ನಡೆಸುತ್ತಿದ್ದರು. ಈ ಇಬ್ಬರಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಮೊದಲಿಂದಲೂ ಚೌಡಪ್ಪ ರೇಣುಕಾಳ ಶೀಲ ಶೆಂಕಿಸಿ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ರೇಣುಕಾ ಎಂದಿನಂತೆ ತನ್ನ ಪುತ್ರನ ಜೊತೆ ಕುರಿ ಮೇಯಿಸಲು ಜಮೀನಿಗೆ ತೆರಳಿದ್ದಳು. ಈ ವೇಳೆ ಜಮೀನಿಗೆ ಬಂದ ಚೌಡಪ್ಪ ಸಲಾಕೆಯಿಂದ ತೆಲೆಗೆ ಹೊಡೆದು ಕೊಲೆ ಮಾಡಿ ಓಡಿ ಹೋಗಿದ್ದಾನೆ. ತನ್ನ ತಂದೆ ಗಾಬರಿಯಿಂದ ಓಡಿಹೋಗುದನ್ನು ಕಂಡ ಮಗ, ತಾಯಿ ಇದ್ದ ಸ್ಥಳಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಚೌಡಪ್ಪ ತಲೆ ಮರೆಯಿಸಿಕೊಂಡಿದ್ದಾನೆ. ಈ ಬಗ್ಗೆ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಸಿಡಿಲು ಬಡಿದು ಜಮೀನಿನಲ್ಲಿ ಕಟ್ಟಿಹಾಕಿದ್ದ 20ಕ್ಕೂ ಹೆಚ್ಚು ಕುರಿಗಳು ಸಾವು

Spread the loveಯಾದಗಿರಿ: ಸಿಡಿಲು ಬಡಿದು 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟ ಗ್ರಾಮದಲ್ಲಿ ನಿನ್ನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ