Breaking News
Home / ಜಿಲ್ಲೆ / ತುಮಕೂರು

ತುಮಕೂರು

ವೀರಶೈವ, ಲಿಂಗಾಯತ ಒಂದೇ ನಾಣ್ಯದ ಮುಖಗಳು: ಈಶ್ವರ ಖಂಡ್ರೆ

ತುಮಕೂರು: ಎಲ್ಲ ಧರ್ಮ, ಜಾತಿಗಳಿಗೂ ಪ್ರಪಂಚದ ಮೊದಲ ಸಂಸತ್ತು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದವರು ಬಸವೇಶ್ವರರು. ಮೌಡ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ಧರಾಗಬೇಕಿದೆ, ವೀರಶೈವ, ಲಿಂಗಾಯತ ಎಂಬುದು ಶರಣ ಸಮಾಜವೆಂಬ ಒಂದು ನಾಣ್ಯದ ಎರಡು ಮುಖಗಳು ಎಂದು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಈಶ್ವರ ಖಂಡ್ರೆ ಹೇಳಿದರು.   ನಗರದ ಶ್ರೀ …

Read More »

ಹಣಕ್ಕೆ ಬೇಡಿಕೆಯಿಟ್ಟಿದ್ದಲ್ಲದೆ, ತನ್ನೊಂದಿಗೆ ಮಲಗುವಂತೆ ಕೇಳಿದ ಆರೋಪ: ಮಂಜು ಪಾವಗಡ ಸಹೋದನಿಗೆ ಥಳಿತ

ತುಮಕೂರು: ಪತ್ರಕರ್ತನ ಸೋಗಿನಲ್ಲಿ ತುಮಕೂರು ಪಾಲಿಕೆ ಸಿಬ್ಬಂದಿಗೆ ಹಣಕ್ಕಾಗಿ ಬೇಡಿಕೆಯಿಟ್ಟು, ಬೆದರಿಕೆಯೊಡ್ಡಿದ್ದ ಆರೋಪದಡಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಮಂಜು ಪಾವಗಡ ಸಹೋದರ ಪ್ರದೀಪ್ ಪಾವಗಡ ಹಾಗೂ ಮೂವರು ಯುವತಿಯರು ಸೇರಿದಂತೆ ಒಟ್ಟು ನಾಲ್ವರನ್ನು ತುಮಕೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.   ಪ್ರದೀಪ್​ ಪಾವಗಡ ತಾನೊಬ್ಬ ಸತ್ಯ ವಿಸ್ಮಯ ವಾರ ಪತ್ರಿಕೆ ಸಂಪಾದಕ ಎಂದು ಹೇಳಿಕೊಂಡಿದ್ದ ಮತ್ತು ತುಮಕೂರು ಮಹಾನಗರ ಪಾಲಿಕೆ ನಲ್ಮ್ ವಿಭಾಗದ ಸಿಬ್ಬಂದಿ ದೀಪಿಕಾಗೆ ಪರಿಚಯವಾಗಿದ್ದ. ಸಂಘ, ಸಂಸ್ಥೆ ಹೆಸರಲ್ಲಿ …

Read More »

ತಾತನನ್ನೇ ಕೊಂದು ತೋಟದಲ್ಲಿ ಹೂತುಹಾಕಿದ್ದ ಮೊಮ್ಮಗ! ತುಮಕೂರಲ್ಲಿ 8 ತಿಂಗಳ ಬಳಿಕ ಭಯಾನಕ ರಹಸ್ಯ ಬಯಲು

ತುಮಕೂರು: ತಾತನನ್ನು ಮೊಮ್ಮಗನೇ ಕೊಲೆ ಮಾಡಿದ ರಹಸ್ಯ 8 ತಿಂಗಳ ಬಳಿಕ ಬಯಲಾಗಿದೆ. ಅದೂ ಸ್ನೇಹಿತರ ನಡುವೆ ಮನಸ್ತಾಪ ಉಂಟಾಗಿದ್ದರಿಂದ… ಇಂತಹ ವಿಚಿತ್ರ ಪ್ರಕರಣ ಗುಬ್ಬಿ ತಾಲೂಕಿನ ನಡೆದಿದೆ. ಕಲ್ಲರ್ದಗೆರೆ ಭೋವಿ ಕಾಲನಿಯ ಗೋವಿಂದಪ್ಪ (75) ಕೊಲೆಯಾಗಿದ್ದು, ಪ್ರಕರಣದ ಬೆನ್ನು ಹತ್ತಿದ ಚೇಳೂರು ಪೊಲೀಸರು ಗೋವಿಂದಪ್ಪನ ಮೊಮ್ಮಗ ಮೋಹನ್​ ಹಾಗೂ ಆತನ ಸ್ನೇಹಿತರಾದ ಪ್ರಜ್ವಲ್​, ಚೇತನ್​ ಎಂಬುವವರನ್ನು ಬಂಧಿಸಿದ್ದಾರೆ.   ಏನಿದು ಪ್ರಕರಣ?: ಗೋವಿಂದಪ್ಪಗೆ ನಾಲ್ಕು ಎಕರೆ ಜಮೀನು ಇತ್ತು. ಇವರಿಗೆ ಒಬ್ಬ …

Read More »

ಬೆಳ್ಳಂಬೆಳಗ್ಗೆ ತುಮಕೂರು ಬಳಿ ಭೀಕರ ಅಪಘಾತ

ತುಮಕೂರು: ಬೆಳ್ಳಂಬೆಳಗ್ಗೆ ಕೆಎಸ್‌ಆರ್​ಟಿಸಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಗುಣಿ ಸಮೀಪ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 10 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ತುಮಕೂರು-ಶಿವಮೊಗ್ಗ ನ್ಯಾಷನಲ್ ಹೆದ್ದಾರಿ 206ರಲ್ಲಿ ಈ ಘಟನೆ ಸಂಭವಿಸಿದೆ. ಗಿರೀಶ್​ (37), ಮಾನ್ಯ (17), ಮೃತ ದುರ್ದೈವಿಗಳು. ಇವರಿಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ನಿಟ್ಟೂರು ಕಡೆಯಿಂದ ತುಮಕೂರು ಕಡೆಗೆ ಝೈಲೋ ಕಾರು ಬರುತ್ತಿದ್ದರೆ, …

Read More »

ಲಾರಿ, ಬೈಕ್​​ಗಳ ನಡುವೆ ಸರಣಿ ಅಪಘಾತ-ಸ್ಥಳದಲ್ಲೇ ಮೂವರು ಸವಾರರ ಸಾವು

ತುಮಕೂರು: ಸರಣಿ ಅಪಘಾತದಲ್ಲಿ ಮೂವರು ಬೈಕ್ ಸವಾರರು ನಡುರಸ್ತೆಯಲ್ಲೇ ಪ್ರಾಣಬಿಟ್ಟಿರೋ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಿಂಡಿಸ್ಕೆರೆ ಬಳಿ ನಡೆದಿದೆ. ಮೊದಲು ವಿ.ಆರ್.ಎಲ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಅಪಘಾತ ನೋಡಲು ಹೋದ ಮತ್ತೊಂದು ಬೈಕ್‌ಗೆ ಮೊತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಟ್ಟಾರೆ ಎರಡು ಬೈಕ್‌‌ಗಳಲ್ಲಿದ್ದ ಒಟ್ಟು ಮೂವರು ಯುವಕರು ಸಾವನ್ನಪ್ಪಿದ್ದಾರೆ.

Read More »

ಭೀಕರ ಅಪಘಾತ; ದುರ್ಘಟನೆ ಬಳಿಕ ಹೊತ್ತಿಕೊಂಡ ಬೆಂಕಿಯಿಂದ ಇಬ್ಬರು ಪಾರಾಗಿದ್ದೇ ಪವಾಡ

ತುಮಕೂರು: ಬೆಳ್ಳಂಬೆಳಗ್ಗೆ ಎರಡು ಲಾರಿಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪೊಲೀಸರ ಸಮಯ ಪ್ರಜ್ಞೆಯಿಂದ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಶಿರಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಳ್ಳಂಬೆಳ್ಳ ಬಳಿ ನಡೆದಿದೆ. ಬೆಂಗಳೂರು ಕಡೆ ತೆರಳುತ್ತಿದ್ದ ಸಿಮೆಂಟ್ ಪೈಪ್‌ಗಳನ್ನು ಹೊತ್ತಿದ್ದ ಲಾರಿ ಮತ್ತು ಕಟ್ಟಿಗೆ ತುಂಬಿದ ಲಾರಿ ಪರಸ್ಪರ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಪರಿಣಾಮ ಕಟ್ಟಿಗೆ ತುಂಬಿದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ …

Read More »

ತುಮಕೂರು: ಪುಕ್ಕಟೆ ಕೊತ್ತಂಬರಿ ಸೊಪ್ಪಿಗೆ ಮುಗಿಬಿದ್ದ ಜನರು

ತುಮಕೂರು : ಉಚಿತವಾಗಿ ನೀಡುತಿದ್ದ ಕೊತ್ತಂಬರಿ ಸೊಪ್ಪಿಗಾಗಿ ಜನರು ಮುಗಿ ಬಿದ್ದಿರುವ ಘಟನೆ ತುಮಕೂರಿನ ಎನ್.ಆರ್ ಕಾಲೋನಿಯಲ್ಲಿ ನಡೆದಿದೆ. ಪಾಲಿಕೆ ಸದಸ್ಯ ಶ್ರೀನಿವಾಸ್ ಉಚಿತವಾಗಿ ಕೊತ್ತಂಬರಿ ಸೊಪ್ಪು ಹಂಚುತ್ತಿದ್ದರು. ಈ ವೇಳೆ ಜನರು ನಾಮುಂದು ತಾಮುಂದು ಎಂಬಂತೆ ಮುಗಿ ಬಿದ್ದು ಕೊತ್ತಂಬರಿ ಸೊಪ್ಪು ಪಡೆದಿದ್ದಾರೆ. ಜನರು ಮುಗಿ ಬಿದ್ದ ಹಿನ್ನೆಲೆಯಲ್ಲಿ ಸೊಪ್ಪು ಹಂಚುತ್ತಿದ್ದ ಯುವಕ ಆಟೋದಿಂದ ಜನರತ್ತ ಸೊಪ್ಪನ್ನು ಎಸೆದು ಹೋಗಿದ್ದಾನೆ. ಉಚಿವಾಗಿ ಸಿಗುವ ಕೊತ್ತಂಬಿಗಾಗಿ ಜನರು ಮುಗಿಬಿದ್ದಿರುವ ವೀಡಿಯೋ …

Read More »

ನನಗೂ ಸಿಎಂ ಆಗುವ ಆಸೆ ಇದೆ : ಸಚಿವ ಉಮೇಶ ಕತ್ತಿ

ತುಮಕೂರು : ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸೀನಿಯರ್ ಇದಾರೆ. ಅವರಿಗಿಂತ ನಾನು ಸೀನಿಯರ್ ಇದ್ದೇನಿ. ಸಿಎಂ ಸ್ಥಾನಕ್ಕೆ ಯತ್ನಾಳ ಹಾಗೂ ನನಗೆ ಪೈಪೋಟಿ ನಡೆಯಲಿ ಎಂದು ನೂತನ ಸಚಿವ ಉಮೇಶ ಕತ್ತಿ ಹಾಸ್ಯವಾಗಿ ಹೇಳಿದರು. ತುಮಕೂರು ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಬಿಜೆಪಿಯಲ್ಲಿ 75 ವರ್ಷದವರೆಗೂ …

Read More »

ಸರ್ಕಾರದಿಂದ ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ

ತುಮಕೂರು : ರಾಜ್ಯ ಸರ್ಕಾರವು ರೈತರ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿ ವಿವಿಗಳಲ್ಲಿ ಪದವಿ ವ್ಯಾಸಾಂಗ ಮಾಡುವ ರೈತರ ಮಕ್ಕಳಿಗೆ ಮೀಸಲಾತಿಯನ್ನು ಶೇ. 50 ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ರಾಜ್ಯ ಸರ್ಕಾರವು ಕೃಷಿ, ತೋಟಗಾರಿಕೆ, ಪಶುಪಾಲನಾ ಪದವಿಯಲ್ಲಿ ಮೀಸಲಾತಿ ಹೆಚ್ಚಳವಾಗಲಿದ್ದು, ಇದರಲ್ಲಿ ದೊಡ್ಡ ಮತ್ತು ಸಣ್ಣ ರೈತರ ಮಕ್ಕಳು ಎಂಬ ಬೇಧ ಮಾಡದೇ ಎಲ್ಲರಿಗೂ ಸೌಲಭ್ಯ ಕಲ್ಪಿಸಲು …

Read More »

ಮಾಸ್ಕ್ ಧರಿಸದ್ದಕ್ಕೆ ದಂಡ ಹಾಕುತ್ತಿದ್ದ ಸಿಬ್ಬಂದಿ ಮೇಲೆ ಹಲ್ಲೆ

ತುಮಕೂರು: ಕೊರೊನಾ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಜನ ಸಹ ಮತ್ತಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಹೀಗೆ ಮಾಸ್ಕ್ ಹಾಕದೆ ಓಡಾಡುತ್ತಿದ್ದವರಿಗೆ ನಗರ ಸಭೆ ಸಿಬ್ಬಂದಿ ದಂಡ ವಿಧಿಸಿದ್ದು, ಇದರಿಂದ ಕೋಪಿತಗೊಂಡ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಜಿಲ್ಲೆಯ ತಿಪಟೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ಮಾಸ್ಕ್ ಧರಿಸಿದ್ದಕ್ಕೆ ದಂಡ ಹಾಕುತಿದ್ದ ನಗರ ಸಭೆ ಸಿಬ್ಬಂದಿ ವೆಂಕಟೇಶ ಅವರ ಮೇಲೆ ಹಲ್ಲೆ ವ್ಯಕ್ತಿ ಹಲ್ಲೆ …

Read More »