Breaking News

ಜಾತಿಗಣತಿ ವೇಳೆ ಉಪಜಾತಿ ಬರೆಸಬೇಡಿ ಎಂಬ ನಿರ್ಣಯಕ್ಕೆ ಪಂಚಮಸಾಲಿ ಶ್ರೀ ವಿರೋಧ

Spread the love

ಬಾಗಲಕೋಟೆ, ): ಉಪಜಾತಿ ಬರೆಸಬೇಡಿ ಎಂದು ವೀರಶೈವ ಮಹಾಸಭಾ ಅಧಿವೇಶನದ ನಿರ್ಣಯಕ್ಕೆ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ (jaya mruthyunjaya swamiji) ವಿರೋಧ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂದು ನಿರ್ಣಯ ಮಾಡಿರುವುದನ್ನು ನಾವು ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಒಳಪಂಗಡದವರು, ಉಪಜಾತಿ ಕಾಲನಲ್ಲಿ ತಮ್ಮ ಉಪಜಾತಿ ನಮೂದಿಸಬಾರದು ಎಂದು ನಿರ್ಣಯ ಮಾಡಿರುವುದನ್ನು ನಾವು ಪಂಚಮಸಾಲಿಗಳು ಒಪ್ಪಲಿಕ್ಕೆ ಸಾಧ್ಯವಿಲ್ಲ. ವೀರಶೈವ ಮಹಾಸಭಾದವರು ಆಯಾ ಉಪಜಾತಿಗಳ ಸಮಾಜಿಕ ಸೌಲಭ್ಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೂಗು ತೂರಿಸುವುದು ಸರಿಯಲ್ಲ. ಈ ನಿರ್ಣಯವನ್ನು ಪುನರ್ ಪರಿಶೀಲಿಸಬೇಕು ಎಂದು ಸಲಹೆಯ‌ನ್ನು ಮಹಾಸಭೆಗೆ ಕೊಡಲು ಇಚ್ಚಿಸುತ್ತೇನೆ ಎಂದಿದ್ದಾರೆ.


Spread the love

About Laxminews 24x7

Check Also

ಮುನಿರತ್ನಗೆ ಜಾಮೀನು ನೀಡದಿರಲು ಮನವಿ

Spread the love ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ