Breaking News

ಧಾರವಾಡ

ವಿನಯ್ ಕುಲಕರ್ಣಿ ದೋಷಿ ಇಂದು ಶಿಕ್ಷೆ ಪ್ರಮಾಣ ಪ್ರಕಟ

ಧಾರವಾಡ: ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ  ಯೋಗೇಶ್‌ಗೌಡ  ಕೊಲೆ ಕೇಸಲ್ಲಿ ಅಪರಾಧಿಯಾಗಿದ್ದಾರೆ. ಈ ಸಂಬಂಧ ನ್ಯಾಯಾಲಯ ಇಂದು (ಏ.16) ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. 10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಜನಪ್ರತಿನಿಧಿಗಳ ಕೋರ್ಟ್ ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ದೋಷಿ ಎಂದು ಆದೇಶಿಸಿದೆ. ಅದರಂತೆ ಪ್ರಕರಣ ಸಂಬಂಧ ಇಂದು ಶಿಕ್ಷೆ ಪ್ರಮಾಣವನ್ನು ಪ್ರಕಟ ಮಾಡಲಿದೆ. ಆರೋಪಿಗಳಿಗೆ …

Read More »

ನಮ್ಮ ತಮ್ಮನ ಸಾವಿನ ಪ್ರಕರಣ ಎಲ್ಲಾ ರಾಜಕಾರಣಿಗಳಿಗೆ ತಕ್ಕ ಪಾಠವಾಗಬೇಕು: ಯೋಗೇಶ್ ಗೌಡ ಸಹೋದರಿ

ಹುಬ್ಬಳ್ಳಿ: ನಮ್ಮ ತಮ್ಮನ ಸಾವಿನ ಪ್ರಕರಣ ಎಲ್ಲಾ ರಾಜಕಾರಣಿಗಳಿಗೆ ತಕ್ಕ ಪಾಠವಾಗಬೇಕು ಎಂದು ಯೋಗೇಶ್ ಗೌಡ ಸಹೋದರಿ ಅಕ್ಕಮ್ಮ ಹೇಳಿದ್ದಾರೆ. ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ  ಅವರು ಯೋಗೇಶ್ ಗೌಡ ಕೊಲೆ ಕೇಸಲ್ಲಿ‌  ಅಪರಾಧಿಯಾಗಿದ್ದಾರೆ. ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪದಡಿ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. 10 ವರ್ಷಗಳ ನಿರಂತರ ತನಿಖೆ, ವಿಚಾರಣೆ ಬಳಿಕ ಇವತ್ತು ವಿನಯ್ …

Read More »

ಎಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳು ಕೇಳುವುದರಲ್ಲಿ ತಪ್ಪಿಲ್ಲ- ಸಚಿವ ಸಂತೋಷ ಲಾಡ್

ಈ ಕುರಿತು ಧಾರವಾಡದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಕೇಳುವವರಲ್ಲಿ ಮೊದಲ ಬಾರಿ ಎರಡನೇ ಬಾರಿ ಆಯ್ಕೆ ಆಗಿದ್ದಾರೆ ಅನ್ನುವುದು ವಿಚಾರವಲ್ಲ. ಎಲ್ಲರಿಗೂ ಸಚಿವಾರಗೋ ಅರ್ಹತೆ ಇದೆ‌. ಎಲ್ಲರೂ ಸಚಿವರಾಗಬೇಕು ಅಂದುಕೊಳ್ಳುವುದು ತಪ್ಪಲ್ಲ. ಪಾರ್ಟಿ ಪ್ರೋಟೋಕಾಲ್ ಅನುಸರಿಸುವುದು ತುಂಬಾ ಮುಖ್ಯವಾಗುತ್ತದೆ. ಎಲ್ಲರಿಗೂ ಹೈಕಮಾಂಡ ಭೇಟಿ ಮಾಡಿ, ತಮ್ಮ ಬಯಕೆ ಹೇಳಿಕೊಳ್ಳುವ ಅವಕಾಶವಿದೆ. ಸಚಿವಾಕಾಂಕ್ಷಿಗಳ ನಡೆಯನ್ನು ನಾನು ಸ್ವಾಗತ್ತಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರ ದೆಹಲಿ ಟೂರನ್ನು ಸಮರ್ಥಿಸಿಕೊಂಡಿದ್ದಾರೆ. ಇದೇ …

Read More »

ಧಾರವಾಡದಲ್ಲಿ ಹೋರಾಟಕ್ಕೆ ಮುಂದಾಗಿದ್ದ ಉದ್ಯೋಗಾಕಾಂಕ್ಷಿಗಳು ಪೊಲೀಸರ ವಶಕ್ಕೆ

ಧಾರವಾಡ: ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್‌ ಜಯಂತಿ ದಿನವಾದ ಇಂದು ಧಾರವಾಡದ ಜಯನಗರದಲ್ಲಿ ಪ್ರತಿಭಟನೆ  ನಡೆಸಿದ ಉದ್ಯೋಗಾಕಾಂಕ್ಷಿಗಳನ್ನ ಪೊಲೀಸರು ವಶಕ್ಕೆ ಪಡೆದ್ದಾರೆ. ಸಮಾನ ಮನಸ್ಕರ ತಂಡ, ರೈತ ಸಂಘಟನೆ ಹಾಗೂ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಅದಕ್ಕಾಗಿ ಪೊಲೀಸರ ಅನುಮತಿಯನ್ನೂ ಕೇಳಿದ್ದರು. ಅಂಬೇಡ್ಕರ್ ಜಯಂತಿ ಹಿನ್ನೆಲೆ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ. ಹೀಗಿದ್ದರೂ ಅನೇಕರು ಧಾರವಾಡದ  ಜಯನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಪೊಲೀಸರು …

Read More »

ಧಾರವಾಡದ ಅಣ್ಣಿಗೇರಿ ಬಸಾಪುರದಲ್ಲಿ ಮನೆ ಕಳ್ಳತನ ಪ್ರಕರಣ, ವಾರದಲ್ಲಿ ಇಬ್ಬರು ಆರೋಪಿಗಳ ಬಂಧನ

ಧಾರವಾಡ- ಕಳೆದ ಏಪ್ರಿಲ್ 2ರಂದು ಧಾರವಾಡ ಜಿಲ್ಲೆ ಅಣ್ಣಿಗೇರಿ ತಾ. ಬಸಾಪುರ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಅಣ್ಣಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಣ್ಣಿಗೇರಿ ತಾಲ್ಲೂಕಿನ ನಿವಾಸಿಗಳಾದ ಉಮೇಶ ಹರಣಶಿಕಾರಿ(30), ಈರಪ್ಪ ಹರಣಶಿಕಾರಿ (25) ಇಬ್ಬರು ಬಂಧಿತ ಮನೆಗಳ್ಳರಾಗಿದ್ದಾರೆ. ಏಪ್ರಿಲ್ 2ರಂದು ಬಸಾಪುರ ಗ್ರಾಮದಲ್ಲಿ ಮನೆಯ ಡೋರ್ ಲಾಕ್ ಮುರಿದು ಮನೆ ಕಳ್ಳತನ ಮಾಡಲಾಗಿತ್ತು. ಈ ಕುರಿತು ಮನೆಯ ಮಾಲೀಕರು ಅಣ್ಣಿಗೇರಿ‌ ಪೊಲೀಸ …

Read More »

ಯುವತಿಯರು, ಮಹಿಳೆಯರಿಗೆ ಬ್ಯಾಡ್ ಟಚ್ ಮಾಡ್ತಿದ್ದ ಜಿಮ್ ಟ್ರೇನರ್ ಅರೆಸ್ಟ್

ಧಾರವಾಡ: ಯುವತಿಯರು, ಮಹಿಳೆಯರಿಗೆ ಬ್ಯಾಡ್ ಟಚ್ ಮಾಡುತ್ತಿದ್ದ ಜಿಮ್ ಟ್ರೇನರ್‌ನ್ನು ಪೊಲೀಸರು ಬಂಧಿಸಿದ್ದಾರೆ. ಸಾಬೀರ್ ಬಂಧಿತ ಆರೋಪಿ. ಧಾರವಾಡ ನಗರದ ಮರಾಠಾ ಕಾಲೋನಿಯ ಫಿಟನೆಸ್ ಫಸ್ಟ್ ಎಂಬ ಜಿಮ್‌ನಲ್ಲಿದ್ದ ಜಿಮ್ ಟ್ರೇನರ್ ಆಗಿದ್ದ ಎನ್ನಲಾಗಿದೆ. ಸಂತ್ರಸ್ತೆ ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಿಮ್‌ಗೆ ಬರುವ ಯುವತಿ ಮತ್ತು ಮಹಿಳೆಯರಿಗೆ ಬ್ಯಾಡ್ ಟಚ್ ಮಾಡುತ್ತಾ ಟ್ರೆನ್ ಮಾಡುತ್ತಿದ್ದ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಭಜರಂಗ ದಳದ ಕಾರ್ಯಕರ್ತರು ಸೇರಿಕೊಂಡು ಜಿಮ್‌ಗೆ …

Read More »

ಯೋಗೇಶ್ ಗೌಡ ಹತ್ಯೆ ಕೇಸ್ – ಏ.9ಕ್ಕೆ ತೀರ್ಪು ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

ಧಾರವಾಡ: ಜಿಲ್ಲಾ ಪಂಚಾಯಿತಿ ಮಾಜಿ ಜಿಲ್ಲಾ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏ.9ಕ್ಕೆ ಕಾಯ್ದಿರಿಸಿದೆ. ಕಳೆದ 6 ತಿಂಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಸಂಪೂರ್ಣ ವಾದ-ಪ್ರತಿವಾದ ಆಲಿಸಿತ್ತು. ಜೊತೆಗೆ ಮಾರ್ಚ್ ಕೊನೆಯ ವಾರದಲ್ಲಿ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಲಿಖಿತ ವಾದ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಇಂದು (ಏ.2) ಎಲ್ಲರೂ ಲಿಖಿತ ವಾದ ಸಲ್ಲಿಸಿದ ಬಳಿಕ ಏ.9ಕ್ಕೆ …

Read More »

ಅಂಗನವಾಡಿ ಕಾರ್ಯಕರ್ತೆಯರ ಬೇಸಿಗೆ ರಜೆ ಕಡಿತಕ್ಕೆ ಆಕ್ರೋಶ: ಒಂದು ತಿಂಗಳ ರಜೆಗಾಗಿ ಬೆಳಗಾವಿ ತಾಲೂಕು ಸಮಿತಿ ಆಗ್ರಹ

ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಬಾರಿ ಬೇಸಿಗೆ ರಜೆ ಕಡಿತಗೊಳಿಸಿರುವ ಸರ್ಕಾರದ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಪೂರ್ಣ ಒಂದು ತಿಂಗಳ ರಜೆ ನೀಡಬೇಕೆಂದು ಒತ್ತಾಯಿಸಿ ಬೆಳಗಾವಿ ತಾಲೂಕು ಸಮಿತಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಗ್ರಹಿಸಿದೆ. ಬೆಳಗಾವಿ ತಾಲೂಕಿನ ಅಂಗನವಾಡಿ ನೌಕರರ ಸಂಘ (CITU) ಸರ್ಕಾರಕ್ಕೆ ಪ್ರಬಲ ಒತ್ತಾಯವೊಂದನ್ನು ಮಂಡಿಸಿದೆ. 2025ನೇ ಸಾಲಿನಲ್ಲಿ ನೀಡಲಾಗಿದ್ದ ಒಂದು ತಿಂಗಳ ಪೂರ್ಣ ಬೇಸಿಗೆ ರಜೆಯನ್ನು …

Read More »

ಧಾರವಾಡದ ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹಾವಳಿ: ಅಬಕಾರಿ ಅಧಿಕಾರಿಗಳಿಗೆ ಶಾಸಕ ವಿನಯ್ ಕುಲಕರ್ಣಿ ತರಾಟೆ

ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಕೆಂಡಾಮಂಡಲವಾಗಿದ್ದಾರೆ. ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ ಶಾಸಕರು, ಇಲಾಖೆಯ ನಿರ್ಲಕ್ಷ್ಯಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಧಾರವಾಡದಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಬಕಾರಿ ಇಲಾಖೆಯ ವೈಫಲ್ಯಗಳು ಅನಾವರಣಗೊಂಡವು. ಹಳ್ಳಿ ಹಳ್ಳಿಗಳಲ್ಲಿ ಎಲ್ಲಿ ಬೇಕೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ನಿತ್ಯ ನೂರಾರು ದೂರುಗಳು …

Read More »

ವಾರ್ಡರ್‌ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ – ಮೂವರ ವಿರುದ್ಧ FIR

ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ (Prisoners) ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಕೈದಿಗಳಿಗೆ‌ ವಾರ್ಡರ್‌ಗಳೇ  ನಿಷೇಧಿತ ತಂಬಾಕು ಉತ್ಪನ್ನಗಳನ್ನ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಧಾರವಾಡ ಜೈಲಿನಲ್ಲಿ  ನಿಷೇಧಿತ ಉತ್ಪನ್ನಗಳ ಪೂರೈಕೆ ಹಿಂದೆ ಬೇರೆ ಯಾರೂ ಇಲ್ಲ, ಇದೇ ಕಾರಾಗೃಹದ ವಾರ್ಡರ್‌ಗಳೇ ಇದ್ದಾರೆ ಎಂಬುದು ಕುತೂಹಲಕಾರಿ …

Read More »