Breaking News

‘ವಚನ ಕಟ್ಟು ರಕ್ಷಿಸಿದ ಮಾಚಿದೇವ’

Spread the love

ವದತ್ತಿ: ‘ಹನ್ನೆರಡನೇ ಶತಮಾನದ ಬಸವಣ್ಣನವರ ಕಾಲದಲ್ಲಿನ ವಚನ ಕಟ್ಟುಗಳನ್ನು ರಕ್ಷಿಸುವಲ್ಲಿ ಮಾಚಿದೇವ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಸಕಲ ಶರಣರ ವಸ್ತ್ರಗಳನ್ನು ಶುಚಿಗೊಳಿಸುವಲ್ಲಿ ತಲ್ಲೀನರಾಗಿದ್ದರು’ ಎಂದು ತಹಶೀಲ್ದಾರ್‌ ಎಂ.ಎನ್.ಹೆಗ್ಗನ್ನವರ ಹೇಳಿದರು.‌

ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಮಡಿವಾಳ ಮಾಚಿದೇವರ ಜಯಂತಿ ಆಚರಿಸಿ ಮಾತನಾಡಿದ, ವಚನಗಳ ರಕ್ಷಣೆ ವೇಳೆ ಮಾಚಿದೇವರು ವೀರಭದ್ರನ ಅವತಾರ ತಾಳಿದ್ದು ವಿಶೇಷ. ಇಂದು ಮಡಿವಾಳ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಶ್ಲಾಘನೀಯವೆಂದರು.

ಶಾಸಕರ ಸಹೋದರ ಅಶ್ವತ್ ವೈದ್ಯ ಅವರು ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಎಂ.ಎನ್. ಗುಂಡಪ್ಪಗೋಳ, ಯಲ್ಲಪ್ಪ ಮಡಿವಾಳರ, ಅಜ್ಜಪ್ಪ ಮಡಿವಾಳರ, ರಾಜು ಮಡಿವಾಳರ, ಸುರೇಶ ಮಡಿವಾಳರ, ಬಸವರಾಜ ಮಡಿವಾಳರ ಇದ್ದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ