Breaking News
Home / ಜಿಲ್ಲೆ / ಧಾರವಾಡ / ಬೆಲೆ ಕುಸಿತಕ್ಕೆ ಕಂಗಾಲಾಗಿ ಗಿಡದಿಂದ ಹತ್ತಿ ಬಿಡಿಸದ ರೈತ.

ಬೆಲೆ ಕುಸಿತಕ್ಕೆ ಕಂಗಾಲಾಗಿ ಗಿಡದಿಂದ ಹತ್ತಿ ಬಿಡಿಸದ ರೈತ.

Spread the love

ಧಾರವಾಡ: ರೈತರ ಪಾಲಿನ ಬಿಳಿ ಬಂಗಾರ ಅಂತಲೇ ಹೆಸರುವಾಸಿಯಾಗಿರುವ ಮತ್ತು ವರ್ಷದಿಂದ ವರ್ಷಕ್ಕೆ ಏರುತ್ತ ಹೊರಟಿದ್ದ ಹತ್ತಿ ಯ ಬೆಲೆ ಈ ಬಾರಿ ಏಕಾಏಕಿಯಾಗಿ ಕುಸಿದಿದ್ದು, ಇದರಿಂದಾಗಿ ರೋಸಿ ಹೋದ ರೈತರು ಇದೀಗ ಹತ್ತಿಯನ್ನು ಬಿಡಿಸದೇ ಗದ್ದೆಯಲ್ಲಿ ಹಾಗೆಯೇ ಬಿಡುತ್ತಿದ್ದು, ಬೆಳೆದು ನಿಂತಲ್ಲಿಯೇ ಹತ್ತಿಯೆಲ್ಲವೂ ಹಾಳಾಗಿ ಹೋಗುತ್ತಿದೆ.

 

ಧಾರವಾಡ, ನವಲಗುಂದ, ಅಣ್ಣಿಗೇರಿ ತಾಲೂಕಿನ ಭಾಗದಲ್ಲಿ ಹತ್ತಿ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ವರ್ಷ ಒಂದು ಕ್ವಿಂಟಾಲ್​ ಹತ್ತಿಗೆ 12 ಸಾವಿರ ರೂಪಾಯಿಗೂ ಹೆಚ್ಚು ಬೆಲೆ ಇತ್ತು. ಹೀಗಾಗಿ ಈ ವರ್ಷ ಅದು 14 ಸಾವಿರಕ್ಕೆ ಏರುವ ಸಾಧ್ಯತೆ ಇದೆ ಎಂದು ರೈತರು ಲೆಕ್ಕಾಚಾರ ಹಾಕಿದ್ರು. ಆದ್ರೆ ಇತ್ತೀಚೆಗೆ ಹತ್ತು ಸಾವಿರದವರೆಗೂ ಬಂದಿದ್ದ ಬೆಲೆ ಏಕಾಏಕಿಯಾಗಿ ಈಗ ಏಳು ಸಾವಿರಕ್ಕೆ ಇಳಿದಿದೆ. ಈ ಕಾರಣದಿಂದಾಗಿ ಈಗ ರೈತರು ಹತ್ತಿಯನ್ನು ಬಿಡಸದೇ ಹಾಗೆಯೇ ಗದ್ದೆಯಲ್ಲಿ ಬಿಟ್ಟು ಕೈ ಚೆಲ್ಲಿ ಕುಳಿತಿದ್ದಾರೆ. ಮತ್ತೊಂದೆಡೆ ಗದ್ದೆಯಲ್ಲಿಯೇ ಹತ್ತಿ ಬೆಳೆಯಲ್ಲವೂ ಹಾಳಾಗಿ ಹೋಗುತ್ತಿದೆ. ಸದ್ಯ ಹತ್ತಿ ಬೆಳೆದ ಬೆಳೆಗಾರರ ಸ್ಥಿತಿ ಮಾತ್ರ ಬಡವನ ಕೋಪ ದವಡೆಗೆ ಮೂಲ ಎಂಬತಾಗಿದೆ.

ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋ ನೋಡಿ:

ಹತ್ತಿಯ ಉತ್ಪನ್ನಕ್ಕೂ ಅದಕ್ಕೆ ಬರುವ ಈಗಿನ ಬೆಲೆಯ ಒಟ್ಟು ಆದಾಯಕ್ಕೂ ಹಾಗೂ ಅದಕ್ಕಾಗಿ ಮಾಡಿರೋ ಖರ್ಚಿಗೂ ತಾಳೆ ಹಾಕಿದ್ರೆ, ಎಷ್ಟೋ ಖರ್ಚು ರೈತರ ಮೈ ಮೇಲೆ ಬರುವ ಸಾಧ್ಯತೆ ಇದೆ. ಈಗ ರೈತರು ಕಟಾವು ಮಾಡುವ ಕೂಲಿಗೆ ಸಾಲ ಮಾಡಬೇಕಾಗಿದೆ. ಹೀಗಾಗಿ ಹತ್ತಿ ಬೆಳೆಯನ್ನು ಹಾಗೆಯೇ ಬಿಟ್ಟಿದ್ದಾರೆ.

ಇದನ್ನೂಓದಿ: ಸಾಲಬಾಧೆಯಿಂದ ರೈತ ಆತ್ಮಹತ್ಯೆ

ರೈತರಿಗೆ ಈ ಸಲ ಮಳೆ ಸಾಕಷ್ಟು ಕಾಟ ಕೊಟ್ಟಿತ್ತು. ಹೀಗಾಗಿ ಪ್ರತಿ ಎಕರೆಗೆ ಏನಿಲ್ಲವೆಂದರೂ ಸುಮಾರು 50 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಆದರೆ ಇಳುವರಿ ಮಾತ್ರ ಈ ಸಲ ಕಡಿಮೆ ಬಂದಿದೆ. ಪ್ರತಿ ಸಲ ಎಕರೆಗೆ 12 ಕ್ವಿಂಟಾಲ್ ವರೆಗೂ ಬರುತ್ತಿದ್ದ ಇಳುವರಿ ಈ ಸಲ 8 ಕ್ವಿಂಟಾಲ್​ ಗೆ ಇಳಿದಿದೆ. ಆದರೆ ಈ ಸಮಯದಲ್ಲಿಯೇ ಏಕಾಏಕಿಯಾಗಿ ಬೆಲೆ ಕುಸಿದಿದೆ. ಸರ್ಕಾರದ ಬೆಂಬಲ ಬೆಲೆಯ ಖರೀದಿ ಕೇಂದ್ರದಲ್ಲಿಯೂ ಒಳ್ಳೆ ಬೆಲೆ ಸಿಗುತ್ತಿಲ್ಲ. ಹೀಗಾಗಿ ಸರ್ಕಾರದ ಖರೀದಿ ಕೇಂದ್ರವೂ ನಮಗೆ ಉಪಯೋಗ ಆಗಿಲ್ಲ. ಹೀಗಾಗಿ ಸರ್ಕಾರಕ್ಕೂ ನಾವು ಬೇಡವಾಗಿ ಹೋಗಿದ್ದೇವೆ ಅನ್ನೋದು ರೈತರ ಅಳಲು .


Spread the love

About Laxminews 24x7

Check Also

ಅದಾನಿ ಮ್ಯಾನೇಜರ್‌ ಮಾತ್ರ, ದುಡ್ಡೆಲ್ಲಾ ಪ್ರಧಾನಿ ನರೇಂದ್ರ ಮೋದಿಯದ್ದು: ಕೇಜ್ರಿವಾಲ್

Spread the love ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ