ಶಿರಸಿ: ಮಂಗಳವಾರ ಫೆ.28 ರಂದು ತಾಲೂಕಿನ ಬನವಾಸಿಗೆ ಕದಂಬೋತ್ಸವ ಉದ್ಘಾಟನೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸ್ಥಳೀಯ ಶಾಸಕ, ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಅಣಕಿಸುವ ಪೇ ಸಿ.ಎಂ. ಪೋಸ್ಟರ್ ಸೋಮವಾರ ರಾತ್ರಿ ಅಂಟಿಸಲಾಗಿದ್ದು, ಸಖತ್ ವೈರಲ್ ಆಗಿದೆ.
ರಾಜ್ಯದ ಹಲವೆಡೆ ನಡೆಯುತ್ತಿದ್ದ ಪೇ ಸಿಎಂ ಪೋಸ್ಟರ್ ಅಭಿಯಾನ ಈಗ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಪೇ ಸಿಎಂ ಎಂದು ಹೆಬ್ಬಾರ ಅವರ ಪೊಟೋ ಹಾಕಲಾಗಿದೆ. ಈ ಪೋಸ್ಟರ್ ನಲ್ಲಿ ಡೀಲ್ ನಿಮ್ದು, ಕಮಿಷನ್ ನಮ್ದು ಎಂದು ಆಹಾರ ಕಿಟ್ ಸ್ಕ್ಯಾಮ್ ಆರೋಪ ಪ್ರಸ್ತಾಪ ಮಾಡಲಾಗಿದೆ.
ಬನವಾಸಿಯ ರಸ್ತೆಗಳಲ್ಲಿ, ಮರದ ಮೇಲೆ ಈ ಪೋಸ್ಟರ್ ಗಳನ್ನು ಅಂಟಿಸಲಾಗಿದ್ದು, ಅದನ್ನು ಮಂಗಳವಾರ ಕೆಲವೆಡೆ ತೆರವುಗೊಳಿಸಲಾಗಿದೆ.