Breaking News
Home / ಜಿಲ್ಲೆ / ಶಿವಮೊಗ್ಗ

ಶಿವಮೊಗ್ಗ

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಧಾರೆ ಚುರುಕು: ತುಂಬಿದ ತುಂಗಾ ಡ್ಯಾಂ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಪ್ರಾರಂಭವಾಗಿದೆ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತದೆ. ವರುಣನ ಆಗಮನದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 199.90 ಮಿಮೀ ಮಳೆ ಸುರಿದಿದೆ. ಸರಾಸರಿ 28.56 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಈವರೆಗೆ ಸರಾಸರಿ 73.13 ಮಿಮೀ ಮಳೆ ಮಾತ್ರ ದಾಖಲಾಗಿದೆ. …

Read More »

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಪರಿಸ್ಥಿತಿ ಹೇಗಿರಲಿದೆ ಎಂದು ಕಾದು ನೋಡಿ: ವಿಜಯೇಂದ್ರ

ಶಿವಮೊಗ್ಗ: ಲೋಕಸಭೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷದವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆಯಂತೆ ಎಲ್ಲರಿಗೂ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ ಅಕ್ಕಿ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್​ನವರು ಭರವಸೆ ನೀಡಿದ್ದು …

Read More »

ಶಿರಸಿ: ಡೀಲ್ ನಿಮ್ದು, ಕಮಿಷನ್ ನಮ್ದು- ಆಹಾರದ ಕಿಟ್ ಸ್ಕ್ಯಾಮ್‌ ಆರೋಪದ ಪೋಸ್ಟರ್‌ ವೈರಲ್‌

ಶಿರಸಿ: ಮಂಗಳವಾರ ಫೆ.28 ರಂದು ತಾಲೂಕಿನ ಬನವಾಸಿಗೆ ಕದಂಬೋತ್ಸವ ಉದ್ಘಾಟನೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸ್ಥಳೀಯ ಶಾಸಕ, ಸಚಿವ ಶಿವರಾಮ ಹೆಬ್ಬಾರ್ ಅವರನ್ನು‌ ಅಣಕಿಸುವ ಪೇ ಸಿ.ಎಂ. ಪೋಸ್ಟರ್ ಸೋಮವಾರ ರಾತ್ರಿ ಅಂಟಿಸಲಾಗಿದ್ದು, ಸಖತ್ ವೈರಲ್ ಆಗಿದೆ.   ರಾಜ್ಯದ ಹಲವೆಡೆ ನಡೆಯುತ್ತಿದ್ದ ಪೇ ಸಿಎಂ ಪೋಸ್ಟರ್ ಅಭಿಯಾನ ಈಗ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಪೇ ಸಿಎಂ ಎಂದು ಹೆಬ್ಬಾರ ಅವರ ಪೊಟೋ ಹಾಕಲಾಗಿದೆ. …

Read More »

ನಾಳೆಯಿಂದಲೇ ರಾಜ್ಯಾದ್ಯಂತ ಪ್ರವಾಸ: B.S.Y.

ಶಿವಮೊಗ್ಗ: ನಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದೇನೆ. ಆದರೆ, ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಬಲಪಡಿಸಿ ಅಧಿಕಾರಕ್ಕೆ ತರುವುದೇ ನನ್ನ ಗುರಿ. ಆ ದಿಕ್ಕಿನಲ್ಲಿ ನಾಳೆಯಿಂದಲೇ ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.   ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಕೂಡ ಯಡಿಯೂರಪ್ಪ ಮನೆಯಲ್ಲಿ ಕುಳಿತಿದ್ದಾನೆಂದು ಭಾವಿಸುವುದು ಬೇಡ. ನನ್ನ ಕೈ ಕಾಲು ಗಟ್ಟಿ ಇರುವವರೆಗೂ ಪಕ್ಷ ಬಲಿಪಡಿಸಲು ನನ್ನ ಕೈಲಾದ ಕೆಲಸ ಮಾಡುತ್ತೇನೆ. …

Read More »

ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಶಿವಮೊಗ್ಗ: ಮಲೆನಾಡು ಭಾಗದ ಬಹುಕಾಲದ ಕನಸಾದ ಶಿವಮೊಗ್ಗದ ನೂತನ ವಿಮಾನ ನಿಲ್ದಾಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದರು. 450 ಕೋಟಿ ರೂ ವೆಚ್ಚದಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More »

ಪೊಲೀಸರ ಹಿತಕಾಯಲು ಬದ್ಧ: ಅಲೋಕ್‌ ಕುಮಾರ್

ಶಿವಮೊಗ್ಗ: ‘ಪೊಲೀಸ್ ಸಿಬ್ಬಂದಿ ಆರೋಗ್ಯವಾಗಿದ್ದರೆ ಮತ್ತು ಮನೆಯಲ್ಲಿ ನೆಮ್ಮದಿ ಇದ್ದರೆ ಇಲಾಖೆ ಸಶಕ್ತವಾಗಿರುತ್ತದೆ. ಆಗ ಸಾರ್ವಜನಿಕರಿಗೂ ಒಳ್ಳೆಯ ಸೇವೆ ಸಿಗಲಿದೆ. ಹೀಗಾಗಿ ಸಿಬ್ಬಂದಿಯ ಹಿತ ಕಾಯಲು ಇಲಾಖೆ ಬದ್ಧವಾಗಿದೆ’ ಎಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದರು. ಇಲ್ಲಿನ ಡಿಎಆರ್ ಮೈದಾನದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕುಟುಂಬ ವರ್ಗದವರ ಜೊತೆ ಸಭೆ ನಡೆಸಿ ಅವರ ಯೋಗಕ್ಷೇಮ ಆಲಿಸಿದ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.   ‘ಪೊಲೀಸರು ಕರ್ತವ್ಯದ ಮೇಲೆ ಹಲವು …

Read More »

ಅವಧಿಪೂರ್ವ ಚುನಾವಣೆ ಎದುರಿಸಲು ಸಿದ್ಧ: ಡಿ.ಕೆ.ಶಿವಕುಮಾರ್‌

ಶಿವಮೊಗ್ಗ: ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಂದರೆ ಎದುರಿ ಸಲು ಕಾಂಗ್ರೆಸ್‌ ಪಕ್ಷ ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವ ಧಿಗೂ ಮುನ್ನ ಚುನಾವಣೆ ಬರುತ್ತದೆಯೇ ಎಂಬ ಬಗ್ಗೆ ಏನನ್ನೂ ಹೇಳುವುದಿಲ್ಲ. ಇದು ಸರಕಾರಕ್ಕೆ ಬಿಟ್ಟ ವಿಚಾರ. ನಾವಂತೂ ಚುನಾವಣೆಗೆ ಸನ್ನದ್ಧರಾಗಿದ್ದೇವೆ ಎಂದು ಹೇಳಿದರು. ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ನಡೆದಿರುವ ಸಿದ್ಧತೆಗಳ ಬಗ್ಗೆ ಮುಂದಿನ ನಾಲ್ಕೈದು ದಿನಗಳಲ್ಲಿ …

Read More »

ಎಲ್ಲಾ ಕಡೆ ಬಿಜೆಪಿ ಇದೆ, ನಮಗೆ ರಕ್ಷಣೆ ಯಾವಾಗ?: ಹರ್ಷ ಸಹೋದರಿ ಪ್ರಶ್ನೆ

ಶಿವಮೊಗ್ಗ: ಹರ್ಷನ ಕಳಕೊಂಡು 8 ತಿಂಗಳು ಆಗಿದೆ, ಈಗಲೂ ಪ್ರೇಮಸಿಂಗ್ ಚೂರಿ ಇರಿತ ಸೇರಿದಂತೆ ಪ್ರಕರಣ ನಡೆಯುತ್ತಲೇ ಇದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಇದೆ, ಮೇಲಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಇದೆ.ನಮಗೆ ರಕ್ಷಣೆ ಯಾವಾಗ ಸಿಗುತ್ತದೆ ಎಂದು ಹರ್ಷ ಸಹೋದರಿ ಅಶ್ವಿನಿ ಮಂಗಳವಾರ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.   ಸುದಿಗಾರರೊಂದಿಗೆ ಮಾತನಾಡಿ,ಹಿಂದುತ್ವದ ಕೆಲಸ ಮಾಡುತ್ತಿದ್ದ ಎಂದು ಹರ್ಷನ ಟಾರ್ಗೆಟ್ ಮಾಡಿ ಹೊಡೆದರು. ಅಂಥವನನ್ನೇ ಕೊಲ್ಲುತ್ತಾ ರೆಂದರೆ, ನಮಗೆ ಯಾವ ರಕ್ಷಣೆ …

Read More »

ಹಿಂದೂ-ಮುಸ್ಲಿಂರನ್ನು ಬೇರೆ ಮಾಡೋ ಕೆಲಸ ಎಸ್ ಡಿಪಿಐ- ಪಿಎಫ್‌ಐ ಮಾಡುತ್ತಿದ್ದವು: ಈಶ್ವರಪ್ಪ

ಶಿವಮೊಗ್ಗ: ರಾಷ್ಟ್ರದ್ರೋಹಿ ಚಟುವಟಿಕೆ ಮಾಡಿದ ಪಿಎಫ್ ಐ ಮತ್ತು ಎಸ್ ಡಿಪಿಐ ನಾಯಕರ ಬಂಧನ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಹಿಂದೂ – ಮುಸ್ಲಿಂ- ಕ್ರೈಸ್ತರು ಒಟ್ಟಾಗಿ ಬಾಳಲು. ಎಸ್ ಡಿಪಿಐ ಮತ್ತು ಪಿಎಫ್‌ಐ ಹಿಂದೂ-ಮುಸ್ಲಿಂರನ್ನು ಬೇರೆ ಬೇರೆ ಮಾಡು ಕೆಲಸ ಮಾಡುತ್ತಿದ್ದರು. ಗೋಹತ್ಯೆ ಜೊತೆಗೆ ಹಿಂದೂ ಸಂಸ್ಕೃತಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದ್ದರು. …

Read More »

ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ: ಈಶ್ವರಪ್ಪ

ಶಿವಮೊಗ್ಗ: ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮುರುಘಾ ಶ್ರೀ ಬಂಧನ ವಿಚಾರವಾಗಿ ಮಾತನಾಡಿದ ಅವರು, ಮಠದ ಸ್ವಾಮಿಗಳು ಅಂದರೆ ನನಗೆ ದೇವರಿದ್ದಂತೆ. ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ. ತನಿಖೆ ನಡೆಯುತ್ತಿದೆ ಸತ್ಯವೋ ಸುಳ್ಳೋ ಹೊರಗೆ ಬರಲಿ. ಮಠ, ಮಂದಿರ, ಭಕ್ತಿ, ಜಾಗೃತಿ ಉಂಟು ಮಾಡುತ್ತದೆ ಎಂದಿದ್ದಾರೆ.    

Read More »