Breaking News
Home / ಜಿಲ್ಲೆ / ಬೆಳಗಾವಿ / ಹಿರೆಮಠದ ಚಂದ್ರಶೇಖರ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ಜರಗಿಸುವ ಮೂಲಕ ದಸರಾ ಹಬ್ಬಕ್ಕೆ ತೆರೆ

ಹಿರೆಮಠದ ಚಂದ್ರಶೇಖರ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ಜರಗಿಸುವ ಮೂಲಕ ದಸರಾ ಹಬ್ಬಕ್ಕೆ ತೆರೆ

Spread the love

ಹುಕ್ಕೇರಿ ನಗರದಲ್ಲಿ ಕಳೆದ 9 ದಿನಗಳಿಂದ ಜರಗುತ್ತಿರುವ ನವರಾತ್ರಿ ಉತ್ಸವಕ್ಕೆ ಹಿರೆಮಠದ ಚಂದ್ರಶೇಖರ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ಜರಗಿಸುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಯಿತು.

ನವರಾತ್ರಿ ಅಂಗವಾಗಿ ಹುಕ್ಕೇರಿ ನಗರದ ಹಿರೇಮಠದಲ್ಲಿ ಒಂಬತ್ತು ದಿನಗಳ ಕಾಲ ಗುರುಶಾಂತೇಶ್ವರನಿಗೆ ಅಭಿಷೇಕ,ಮಹಾ ಚಂಡಿಕಾಹೋಮ, ಅದ್ಯಾತ್ಮೀಕ ಪ್ರವಚನ ದೊಂದಿಗೆ ಭಾವೈಕ್ಯ ದಸರಾ, ಕೃಷಿ ದಸರಾ, ಮಹಿಳಾ ದಸರಾ, ಜಾನಪದ ದಸರಾ, ಮಕ್ಕಳ ದಸರಾ, ಯುವ ದಸರಾ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಅಧಿಕಾರಿಗಳು, ಕಲಾವಿದರು ಸೇರಿದಂತೆ ಪ್ರಗತಿಪರ ಚಿಂತಕರಿಗೆ ಶ್ರೀ ಗಳು ದಸರಾ ಗೌರವ ನೀಡಿ ಅಭಿನಂದಿಸಿದರು.
ತುಮಕುರು ಜಿಲ್ಲೆಯ ಸೋಮನಕಟ್ಟಿ ಕಾಡಸಿದ್ದೇಶ್ವರ ಮಠದ ಕರಿ ವೃಷಭ ದೇಶಿಕೇಂದ್ರ ಮಹಾಸ್ವಾಮಿಗಳಿಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಇವರಿಂದ ಪ್ರತಿಷ್ಟಿತ ರೇಣುಕ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು

ಕೋನೆಯ ದಿನ ದಸರಾ ದರ್ಬಾರ ಜರುಗಿಸಿ, ಪಟ್ಟಣದ ಹೋರವಲಯದ ಕೃಷಿ ಇಲಾಖೆ ಆವರಣದ ಬನ್ನಿ ಮಂಟಪದ ವರಗೆ ವಾದ್ಯ ಮೇಳಗಳೊಂದಿಗೆ ಅಡ್ಡ ಪಲ್ಲಕ್ಕಿ ಮೂಲಕ ಸಾಗಿದ ಶ್ರೀಗಳು ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ದಸರೆಯ ದಶಮಿ ದಿನ ಬನ್ನಿ ಮರಕ್ಕೆ ಹೋಮ,ಹವನ ಮಾಡಿ ಇಡಿ ಮಾನವ ಕುಲಕ್ಕೆ ಶುಭವಾಗಲಿ ಎಂದು ಪ್ರಾರ್ಥನೆ ಮಾಡಲಾಗಿದೆ ಕಾರಣ ಎಲ್ಲರೂ ಸಹಬಾಳ್ವೆ ಯಿಂದ ಸಮಾನತೆಯಿಂದ ಬಾಳಿ ಬದುಕ ಬೇಕು, ಕಷ್ಟ ಕಾರ್ಪಣ್ಯಗಳಿಗೆ‌ ಹೆದರದೆ ದೈರ್ಯದಿಂದ ಜಿವನ ಸಾಗಿಸಿ ಎಂದರು.

ಶ್ರೀಗಳ ಪಾದ ಪೂಜೆ ನೆರವೆರಿಸಿದ ನಂತರ ಸಾಮೂಹಿಕ ಶಿಮೋಲಂಘನೆ ಮಾಡುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯಲಾಯಿತು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ