Breaking News
Home / ಜಿಲ್ಲೆ / ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

Spread the love

ನವದೆಹಲಿ: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಸಂಬಂಧ ಸಾರ್ವಜನಿಕರಲ್ಲಿ ನೂರಾರು ಪ್ರಶ್ನೆಗಳಿವೆ. ಈ ಗೊಂದಲಗಳನ್ನು ಬಗೆಹರಿಸಲು ಈಗ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ವಿನೂತನ ಪ್ರಯೋಗವೊಂದನ್ನು ಆರಂಭಿಸಿದೆ.

ಟ್ವಿಟರ್‌ನಲ್ಲಿ @CovidIndiaSeva ಗೆ ಸಾರ್ವಜನಿಕರು ನೇರವಾಗಿ ತಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬಹುದಾಗಿದೆ. ಜನರ ಪ್ರಶ್ನೆಗಳಿಗೆ ಇನ್ಮುಂದೆ ಕೇಂದ್ರ ಆರೋಗ್ಯ ಇಲಾಖೆ ಉತ್ತರಿಸಲಿದೆ.

ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಇತ್ತೀಚಿನ ಹೊಸ ಮಾಹಿತಿಗಳು, ಸಾರ್ವಜನಿಕರ ಪ್ರಶ್ನೆಗಳು, ಆರೋಗ್ಯ ಸೇವೆಗಳು, ರೋಗಲಕ್ಷಣಗಳನ್ನು ಹೊಂದಿರುವವರ ಸಹಾಯಕ್ಕಾಗಿ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪ್ರತಿಕ್ರಿಯಿಸಿದ್ದು, ಆನ್‍ಲೈನ್ ಮೂಲಕ ಜನರಿಗೆ ಪರಿಹಾರ ಕಂಡುಕೊಂಡುವ ಪ್ರಯತ್ನ ಮಾಡುತ್ತಿರುವುದು ಸಂತಸವಾಗಿದೆ. ಇದು ಕೊರೊನಾ ವಿರುದ್ಧದ ಹೋರಾಟದ ಒಂದು ಭಾಗ ಎಂದಿದ್ದಾರೆ.

ಇದು ಕೇವಲ ಕೇಂದ್ರ ಆರೋಗ್ಯ ಇಲಾಖೆ ಮಾತ್ರ ಒಳಗೊಂಡಿರದೇ ರಾಜ್ಯವಾರು ಪೊಲಿಸ್ ಮಹಾನಿರ್ದೇಶಕರು, ಸರ್ಕಾರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಕಾರ್ಯಾಲಯ, ಕೇಂದ್ರ ಹಣಕಾಸು, ಕೈಗಾರಿಕೆ, ವಿದೇಶಾಂಗ ಸಚಿವಾಲಗಳಿಗೂ ಟ್ಯಾಗ್ ಮಾಡಲಿದೆ. ಜನರ ಹಲವು ಪ್ರಶ್ನೆಗಳಿಗೆ ಎಲ್ಲ ಆಯಾಮಗಳಲ್ಲೂ ಉತ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಇದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸಲಾಗಿದ್ದು, ಸಂಪೂರ್ಣ ಪಾರದರ್ಶಕವಾಗಿರಲಿದೆ. ಅಲ್ಲದೇ ಪ್ರಶ್ನೆಯೊಂದು ಹೆಚ್ಚು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾತ್ಮಕವಾಗಿ ಕಾರ್ಯ ನಿರ್ವಹಿಸುವ ಪ್ರಯತ್ನವೂ ಆಗಿದೆ.

 


Spread the love

About Laxminews 24x7

Check Also

ಸಂತೋಷ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ರೈನಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ

Spread the loveಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ