Breaking News

ದಾವಣಗೆರೆ

ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ – ಪಂಚಮಸಾಲಿ ಪೀಠದ ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಸವಾಲು

ದಾವಣಗೆರೆ: ಪಂಚಮಸಾಲಿ ಮಠದ ವಿವಾದ ಭಾರೀ ಭುಗಿಲೆದ್ದಿದೆ. ಮಠದ ಟ್ರಸ್ಟಿಗಳ ವಿರುದ್ಧ ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್  ಆಕ್ರೋಶ ಹೊರಹಾಕಿದ್ದು, 2008 ರಲ್ಲಿ ಪಂಚಮಸಾಲಿ ಮಠ ಆರಂಭವಾಗಿದೆ. ಕೋಟ್ಯಂತರ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಲೆಕ್ಕ ಕೊಡಿ ಎಂದರೆ ಟ್ರಸ್ಟ್‌ನವರು ಯಾಕೆ ಕೊಡಬೇಕು ಎನ್ನುತ್ತಿದ್ದಾರೆ. ಅದರೆ ತರಾತೂರಿಯಲ್ಲಿ ಈಗ ಲೆಕ್ಕ ಕೊಡಲು ಮುಂದಾಗಿದ್ದಾರೆ. ನೀವು ಪ್ರಾಮಾಣಿಕವಾಗಿದ್ದರೆ ಕೊಟ್ಟೂರು ಅಥವಾ ಧರ್ಮಸ್ಥಳಕ್ಕೆ ಬನ್ನಿ ಪ್ರಮಾಣ ಮಾಡಿ. ನಾವು ಬರುತ್ತೇವೆ ಎಂದು ಸವಾಲು ಹಾಕಿದ್ದಾರೆ. …

Read More »

ಮರಕ್ಕೆ ಕಾರು ಡಿಕ್ಕಿ – ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವು

ದಾವಣಗೆರೆ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ  ಜಿಲ್ಲೆ ಜಗಳೂರು ತಾಲೂಕಿನ ಮುಸ್ಟೂರು- ಕಡಬನಕಟ್ಟೆ ಗ್ರಾಮದ ಮಧ್ಯೆ ನಡೆದಿದೆ. ರಘುನಾಥ್ (45) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಿಪಿಐ. ರಘುನಾಥ್ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಡಿಸಿಆರ್‌ಇ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚಿತ್ರದುರ್ಗದ ಕಡೆಯಿಂದ ಜಗಳೂರು ಕಡೆಗೆ ಬರುತ್ತಿರುವಾಗ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ …

Read More »

ಪೀಠಕ್ಕೆ ಬರುವ ಗುರುಕಾಣಿಕೆ ಶ್ವಾಸಕೇಂದ್ರಕ್ಕೆ ವರ್ಗಾವಣೆ – ವಂಚನಾನಂದ ಶ್ರೀಗಳ ಉಚ್ಚಾಟನೆ

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ  ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡ ಬೆನ್ನಲ್ಲೇ ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಸಭೆಯಲ್ಲಿ ನಿರ್ಧರಿಸಿದ್ದಾರೆ. 10 ಕಾರಣಗಳನ್ನು ನೀಡಿ ಉಚ್ಚಾಟನೆ ಮಾಡಲಾಗಿದ್ದು, ಮಠದ ಕಚೇರಿಗೆ ಬೀಗ ಹಾಕಿ ಸೀಲ್ ಮಾಡಲಾಗಿದೆ. ಟ್ರಸ್ಟಿಗಳು ಹೇಳೋದೇನು? ಸ್ವಾಮೀಜಿ ಶ್ವಾಸ ಪೀಠದಲ್ಲಿ ಇರಬೇಕು, ಇಲ್ಲವೇ ಹರಿಹರ ಪಂಚಮಸಾಲಿ ಪೀಠದಲ್ಲಿ ಇರಬೇಕು. ಆದರೆ ಎರಡೂ ಕಡೆ ಇರುವುದು ಸೂಕ್ತವಲ್ಲ. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಈಗಾಗಲೇ …

Read More »

ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು

ದಾವಣಗೆರೆ/ಬೆಂಗಳೂರು: ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸದಿದ್ದಕ್ಕಾಗಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಮೂವರ ವಿರುದ್ಧ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ  ಅವರು ಹೈಕಮಾಂಡ್‌ಗೆ   ದೂರು ನೀಡಿದ್ದಾರೆ. ಸಚಿವರಾದ ಜಮೀರ್ ಅಹಮದ್, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮದ್ ವಿರುದ್ಧ ಎರಡು ಪುಟಗಳ ಸಂಪೂರ್ಣ ವರದಿ ಸಮೇತ ಸುರ್ಜೇವಾಲಾ ಅವರು ದೂರು ದಾಖಲಿಸಿದ್ದು, ಮೂವರ ಮೇಲೆ ಕ್ರಮವಹಿಸುವಂತೆ ಉಲ್ಲೇಖಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ …

Read More »

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ

ದಾವಣಗೆರೆ, ಬಾಗಲಕೋಟೆ: ದಾವಣಗೆರೆ ದಕ್ಷಿಣ  ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ  ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಗುರುವಾರ ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎರಡೂ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಇಂದು ಬಹಿರಂಗ ಪ್ರಚಾರ ಅಂತ್ಯಕ್ಕೂ ಮುನ್ನ ಕೊನೆಯ ದಿನದ ಕಸರತ್ತು ನಡೆಸಿದ್ರು. ನಾಳೆ ಸಂಜೆಯವರೆಗೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ. ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಎರಡೂ ಕ್ಷೇತ್ರದಲ್ಲಿ ಸಮಾವೇಶ ನಡೆಸಿ, ಭರ್ಜರಿ ಮತಯಾಚನೆ …

Read More »

ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ

ದಾವಣಗೆರೆ: ಸಿದ್ದರಾಮಯ್ಯ ಅವರು ದಾವಣಗೆರೆ ದಕ್ಷಿಣ  ಕ್ಷೇತ್ರದ ಉಪಚುನಾವಣೆ (Byelection) ಪ್ರಚಾರ ಮುಗಿಸಿ ಬೆಂಗಳೂರಿಗೆ ಹೋದ್ರೆ ಮತ್ತೆ ಸಿಎಂ ಆಗಿ ದಾವಣಗೆರೆಗೆ ಬರಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು. ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಸೋಲುವ ಭೀತಿ ಕಾಡುತ್ತಿದೆ. ಹಿಂದೂಗಳ ಮತಕ್ಕೆ 7000 ರೂ., ಮುಸ್ಲಿಮರ ಮತಕ್ಕೆ 10,000 ರೂ. ದರ ನಿಗದಿ ಮಾಡಲಾಗಿದೆ …

Read More »

50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ.!

ದಾವಣಗೆರೆ: ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಶನಿವಾರ ದಾವಣಗೆರೆಯಲ್ಲಿ ಮಹತ್ವದ ದಾಳಿ ನಡೆಸಿದ್ದಾರೆ. ಜಮೀನು ಹದ್ದುಬಸ್ತಿಗೆ ಸಂಬಂಧಿಸಿದಂತೆ ವೈದ್ಯರೊಬ್ಬರಿಂದ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ (RI) ಚಂದ್ರಪ್ಪ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲಂಚದ ಹಣದ ಸಮೇತ ಸಿಕ್ಕಿಬಿದ್ದಿರುವ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಹಿನ್ನೆಲೆ ದಾವಣಗೆರೆಯ ವೈದ್ಯರಾದ ಡಾ. ಉಮೇಶ್ ಹಿರೇಮಠ ಅವರು ನಾಗನೂರು ಗ್ರಾಮದ …

Read More »

ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು- ಬಿ.ವೈ.ವಿಜಯೇಂದ್ರ ಟೀಕೆ

ದಾವಣಗೆರೆ: ಬಾಗಲಕೋಟೆಯಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಸ್ಟೆಲ್‍ಗೆ ನುಗ್ಗಿ ಅಲ್ಲಿದ್ದ ವಿದ್ಯಾರ್ಥಿಗಳನ್ನು ಬೆದರಿಸಲು ಮುಂದಾಗಿದ್ದರು. ಇದು ಕಾಂಗ್ರೆಸ್ ಪಕ್ಷದ ಸೋಲಿನ ಆತಂಕಕ್ಕೆ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಸರಕಾರಿ ವಾಹನಗಳಲ್ಲಿ ಬಂದಿದ್ದುದಾಗಿ ತಿಳಿಸಿದರು. ದಾವಣಗೆರೆ- ಬಾಗಲಕೋಟೆಯಲ್ಲಿ ಬಿಜೆಪಿ ಪರವಾದ ವಾತಾವರಣ ಇದೆ. ನಮ್ಮ ಕಾರ್ಯಕರ್ತರು ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಮತದಾರರು …

Read More »

ದಾವಣಗೆರೆಯಲ್ಲಿ ಪ್ರಚಾರದ ವೇಳೆ ಮುಸ್ಲಿಮರಿಂದ ‘ಗೋ ಬ್ಯಾಕ್ ಕಾಂಗ್ರೆಸ್’ ಪ್ರತಿಭಟನೆ

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ  ಹಿನ್ನೆಲೆ ಪ್ರಚಾರದ ವೇಳೆ ಮುಸ್ಲಿಮರು ‘ಗೋ ಬ್ಯಾಕ್ ಕಾಂಗ್ರೆಸ್’ ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು  ಪ್ರಚಾರದ ವೇಳೆ ಮುಸ್ಲಿಮರು ‘ಗೋ ಬ್ಯಾಕ್’ ಎಂದು ಘೋಷಣೆ ಕೂಗಿದ್ದಾರೆ. ದಾವಣಗೆರೆಯ ಬಾಷಾ ನಗರ ಮುಸ್ಲಿಂ ರಸ್ತೆಯಲ್ಲಿ ಪ್ರಚಾರದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಸಾವಿರಾರು ಮುಸ್ಲಿಮರು ‘ಗೋ ಬ್ಯಾಕ್, ಗೋ ಬ್ಯಾಕ್ ಕಾಂಗ್ರೆಸ್’ ಎಂದು ಘೋಷಣೆ ಕೂಗಿದ್ದಾರೆ. ಈ ಬಾರಿ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ …

Read More »

ಉಪಚುನಾವಣಾ ಕಣದಲ್ಲಿ ಅಬ್ಬರದ ಪ್ರಚಾರ – ʻಕೈʼ, ಕಮಲ ನಾಯಕರಿಂದ ಮತಬೇಟೆ

ದಾವಣಗೆರೆ: ಇಲ್ಲಿನ ದಕ್ಷಿಣ  ಕ್ಷೇತ್ರದ ಉಪಚುನಾವಣಾ  ಕಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌  ನಾಯಕರ ಪ್ರಚಾರ ಅಬ್ಬರದಿಂದ ಸಾಗಿದೆ. ʻಕೈʼ ಕೋಟೆಯನ್ನು ಉಳಿಸಿಕೊಳ್ಳಲು ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದರೆ, ಇತ್ತ ಕಮಲ ಅರಳಿಸಲೇಬೇಕು ಎಂದು ಕೇಸರಿ ಪಡೆ ಪಣ ತೊಟ್ಟಿದೆ. ಬಿಜೆಪಿ ಘಟಾನುಘಟಿ ನಾಯಕರುಗಳು ಸಹ ಬೀದಿಗಿಳಿದು ಮತಬೇಟೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರ ಮತಬೇಟೆಗೆ ಕೇಸರಿ ಪಡೆಯ ಘಟಾನಘಟಿ ನಾಯಕರು …

Read More »