₹4 ಲಕ್ಷ ಮೌಲ್ಯದ ಶ್ರೀಗಂಧ ಕಟ್ಟಿಗೆ ವಶ

Spread the love

ಹುಕ್ಕೇರಿ: ತಾಲ್ಲೂಕಿನ ಗುಡಸ್ ಗ್ರಾಮದ ಗಾಯರಾಣ ಪ್ರದೇಶಕ್ಕೆ ಹೊಂದಿಕೊಂಡಿರುವ ಲಕ್ಷ್ಮೀದೇವಿ ಗುಡಿಯ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧ ತುಂಡುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.

ಖಚಿತ ಮಾಹಿತಿ ಆಧರಿಸಿ ಹುಕ್ಕೇರಿ ವಲಯದ ಸಿಬ್ಬಂದಿ ಕಾರೊಂದನ್ನು ಬೆನ್ನತ್ತಿ ಹಿಡಿದು ನಿಲ್ಲಿಸಿದಾಗ, ತಕ್ಷಣಕ್ಕೆ ಕತ್ತಲಾಗಿದ್ದರಿಂದ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.

ವಾಹನ ಸಮೇತ ₹4 ಲಕ್ಷ ಮೌಲ್ಯದ (40.605 ಕೆ.ಜಿ.) ಶ್ರೀಗಂಧದ ತುಂಡುಗಳನ್ನು ಇಲಾಖೆಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಆರ್.ಎಫ್.ಒ ಪ್ರಸನ್ನ ಬೆಲ್ಲದ ತಿಳಿಸಿದರು. ‌

‌ಮೇಲಧಿಕಾರಿಗಳ ನಿರ್ದೇಶನದಂತೆ ಹುಕ್ಕೇರಿ ವಲಯ ಅರಣ್ಯಾಧಿಕಾರಿ ಪ್ರಸನ್ನ ಬೆಲ್ಲದ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿತ್ತು.ಹುಕ್ಕೇರಿ ತಾಲ್ಲೂಕಿನ ಗುಡಸ್ ಬಳಿ ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಶ್ರೀಗಂಧದ ಕಟ್ಟಿಗೆ ತುಂಡುಗಳು.


Spread the love

About Laxminews 24x7

Check Also

ಕೃಷ್ಣಾ ನದಿಗೆ ಬಾಗಿನ ಬಿಡಲು ಹೋದವ ಮುಳುಗಿ ಸಾವು

Spread the loveಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷ್ಣಾ ನದಿ ತುಂಬಿರುವ ಕಾರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ