Breaking News
Home / ಜಿಲ್ಲೆ / ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ

ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ

Spread the love

ಬೆಂಗಳೂರು: ಮೇ 3ರ ನಂತರ ದೇಶದಲ್ಲಿಯ ಲಾಕ್‍ಡೌನ್ ಸಡಿಲಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ನಡುವೆ ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಕೊರೊನಾ ಹರಡುವಿಕೆ ಎರಡನೇ ಅಲೆಯ ತಡೆಗಾಗಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಕೊರೊನಾ ಸೋಂಕು ಕಳೆದ 3.4 ದಿನಗಳಲ್ಲಿ ದ್ವಿಗುಣವಾಗ್ತಿದೆ. ದ್ವಿಗುಣದ ಪ್ರಮಾಣವನ್ನು 12 ದಿನಗಳಿಗೆ ತರಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಲಾಕ್‍ಡೌನ್ ಮೊದಲು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3.4 ರಿಂದ 7.5 ದಿನಗಳಲ್ಲಿ ದ್ವಿಗುಣವಾಗುತ್ತಿತ್ತು. ಕೊರೊನಾ ಹರಡುವಿಕೆಯ ದ್ವಿಗುಣ ಪ್ರಮಾಣ ಈ ವಾರದ ಕೊನೆಗೆ 10 ದಿನಗಳಿಗೆ ಮತ್ತು ಮೇ ಮೊದಲ ವಾರಕ್ಕೆ 12 ದಿನಗಳಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.

ಲಾಕ್‍ಡೌನ್ ಸಡಿಲಿಕೆಯಾಗುತ್ತಾ? ಸದ್ಯ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಕೇವಲ 3.4 ದಿನಗಳಲ್ಲಿ ಡಬಲ್ ಆಗ್ತಿದ್ದು, ಇದು ಕೆಟ್ಟ ಪರಿಸ್ಥಿತಿ. ಆದ್ರೆ ಈ ದಿನಗಳ ಸಂಖ್ಯೆ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲ ವಾರಕ್ಕೆ 12ಕ್ಕೆ ತರಲು ಪ್ರಯತ್ನಿಸಲಾಗತ್ತಿದೆ. ಆದ್ರೆ ದೇಶದ ಆರ್ಥಿಕತೆ ದೃಷ್ಟಿಯಿಂದ ಮೇ 3ರ ನಂತರ ಕೆಲ ಭಾಗಗಳಲ್ಲಿ ಲಾಕ್‍ಡೌನ್ ನಲ್ಲಿ ಸಡಿಲಿಕೆ ನೀಡುವ ಸಾಧ್ಯತೆಗಳಿವೆ. ಕೊರೊನಾ ತಡೆಗೆ ಲಾಕ್‍ಡೌನ್ ಒಂದೇ ನಮ್ಮ ಬಳಿಯಲ್ಲಿರುವ ಮದ್ದು. ಲಾಕ್‍ಡೌನ್ ಸಡಿಲಿಕೆ ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳು ಇರುತ್ತವೆ ಎಂಬುವುದು ಆರೋಗ್ಯ ಸಚಿವಾಲಯದ ಮಾಹಿತಿ ಎಂದು ವರದಿಯಾಗಿದೆ.

ಕೊರೊನಾ ಎರಡನೇ ಅಲೆ: ಮೇ ಅಂತ್ಯ ಅಥವಾ ಜೂನ್ ಆರಂಭದಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿರುತ್ತದೆ. ಜನರು ಸಹ ಮುಂಜಾಗ್ರತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸಿಂಗ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿರುತ್ತಾರೆ. ಎರಡನೇ ಬಾರಿಗೆ ಕೊರೊನಾ ಅಲೆಯಲ್ಲಿ ಸೋಂಕಿತರ ಸಂಖ್ಯೆ 5 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ದ್ವಿಗುಣವಾಗದಂತೆ ನೋಡಿಕೊಳ್ಳುವ ಸವಾಲು ಕೇಂದ್ರದ ಮುಂದಿದೆ.

ಲಾಕ್‍ಡೌನ್ ಸಡಿಲಿಕೆ ಬಳಿಕ ನಗರ, ಅರೆ ನಗರ, ಪಟ್ಟಣಗಳಲ್ಲಿ ವಾಸಿಸುವ ಜನರ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವುದು. ಈ ಪ್ರದೇಶಗಳು ಗ್ರಾಮೀಣ ಭಾಗಗಳಿಗಿಂತ ಹೆಚ್ಚು ಕಠಿಣವಾಗಿರುತ್ತದೆ. ಮುಂಬೈ, ಇಂದೋರ್ ಮತ್ತು ಚಂಡೀಗಢನಲ್ಲಿ ಯಾವುದೇ ಒಳ್ಳೆಯ ಬೆಳವಣಿಗೆಗಳು ಕಾಣಿಸುತ್ತಿಲ್ಲ. ಕೆಲವೊಂದು ನಗರಗಳು ಕೊರೊನಾ ಹೋರಾಟಕ್ಕೆ ಸನ್ನದ್ಧವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜನರು ಸಹ ಕೋವಿಡ್-19 ವಿರುದ್ಧದ ಯುದ್ಧಕ್ಕೆ ಸಾಥ್ ನೀಡುತ್ತಿದ್ದಾರೆ.

ಯಾವ ಪ್ರದೇಶಗಳಿಗೆ ಲಾಕ್‍ಡೌನ್ ಸಡಿಲಿಕೆ: ಮುಂದಿನ ದಿನಗಳಲ್ಲಿ ಪ್ರದೇಶವಾರು ಕೊರೊನಾ ಪ್ರಕರಣಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಕೊರೊನಾ ಪ್ರಕರಣಗಳ ಏರಿಕೆ ಮತ್ತು ಇಳಿಕೆಯನ್ನ ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಲಾಕ್‍ಡೌನ್ ಸಡಿಲಿಕೆ ಮತ್ತು ವಿನಾಯ್ತಿಗಳನ್ನ ನೀಡಲಾಗುತ್ತದೆ. ಈ ಪ್ರಕ್ರಿಯೆ ಸೆಪ್ಟೆಂಬರ್ ವರೆಗೂ ನಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕೊರೊನಾ ಹರಡುವಿಕೆ ಅಲೆಯು ಮಾರ್ಚ್ ನಂತೆ ಹೆಚ್ಚಾಗದಂತೆ ತಡೆಯಲು ಎಲ್ಲ ಮುಂಜಾಗ್ರತ ಕ್ರಮಗಳನ್ನು ಸರ್ಕಾರಗಳು ತೆಗೆದುಕೊಳ್ಳುತ್ತಿದ್ದು, 3.4 ಅಥವಾ ಅದಕ್ಕಿಂತ ಕಡಿಮೆ ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳದಂತೆ ಹಾಗೂ ಹೊಸ ಪ್ರಕರಣಗಳು ಬರದಂತೆ ಕಾರ್ಯ ನಿರ್ವಸಹಿಸಬೇಕಿದೆ. ಹೀಗಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳನ್ನು ಉತ್ತಮವಾಗಿ ಸಜ್ಜುಗೊಳಿಸಬೇಕಿದೆ.

ಸ್ಪಷ್ಟ ಚಿತ್ರಣ ಸಿಗುತ್ತಾ?: ಮೇ 3ರ ನಂತರ ಕೊರೊನಾ ಸಂಬಂಧಿಸಿದಂತೆ ಸ್ಪಷ್ಟ ಚಿತ್ರಣ ಸಿಗುತ್ತಾ ಅನ್ನೋ ಪ್ರಶ್ನೆಗೆ ಸದ್ಯ ಯಾರ ಬಳಿಯೂ ಉತ್ತರವಿಲ್ಲ. ಮೇ 3ರ ನಂತರ ತೆಗೆದುಕೊಳ್ಳಲು ನಿರ್ಣಯಗಳು ಸರ್ಕಾರ ವಿಂಗಡಿಸಿರುವ ರೆಡ್, ಆರೆಂಜ್ ಮತ್ತು ಗ್ರೀನ್ ಝೋನ್ ಗಳ ನಿರ್ಧರಿಸಲಿದೆ. ಈ ಮೂರು ವಲಯಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಇದರ ಆಧಾರದ ಮೇಲೆ ಲಾಕ್‍ಡೌನ್ ಸಡಿಲಿಕೆ ಯಾವ ಭಾಗ, ಜಿಲ್ಲೆಗೆ ನೀಡಬೇಕು ಎಂಬುವುದು ನಿರ್ಧಾರವಾಗಲಿದೆ.

ಭಾರತದಲ್ಲಿ ಗುರುತಿಸಲಾಗಿರುವ ರೆಡ್ ಝೋನ್ ಗಳಿಂದಲೇ ಶೇ.80ರಷ್ಟು ಕೊರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪ್ರದೇಶದಲ್ಲಿ ನಾಲ್ಕು ದಿನಗಳ ಕಡಿಮೆ ಅವಧಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಇದುವರೆಗೂ 321 ಜಿಲ್ಲೆಗಳಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಕಳೆದ ಏಳು ದಿನಗಳಲ್ಲಿ 77 ಜಿಲ್ಲೆಗಳಲ್ಲಿ, 14 ದಿನಗಳಲ್ಲಿ 62 ಜಿಲ್ಲೆಗಳು, 21 ದಿನಗಳಲ್ಲಿ 17 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಇನ್ನು ಮೂರು ಜಿಲ್ಲೆಗಳಾದ ಮಾಹೆ, ಕೊಡಗು, ಪುರಿ ಗರ್ಹಾವಲ್ ಗಳಲ್ಲಿ ಕಳೆದ 28 ದಿನಗಳಿಂದು ಒಂದು ಪ್ರಕರಣಗಳು ಬೆಳಕಿಗೆ ಬಂದಿಲ್ಲ.

ಸರ್ಕಾರ ಚೀನಾ, ದಕ್ಷಿಣ ಕೊರಿಯಾ ದೇಶಗಳು ಅನುಸರಿಸಿದ ನಿಯಮಗಳನ್ನು ಅಧ್ಯಯನ ನಡೆಸುತ್ತಿದೆ. ಲಾಕ್‍ಡೌನ್ ಬಳಿಕ ಜೀವನ ಶೈಲಿ ಹೇಗಿರಬೇಕು? ಆರ್ಥಿಕ ಸ್ಥಿತಿಗತಿಯ ಸುಧಾರಣೆ ಸೇರಿದಂತೆ ಹಲವು ಆಯಾಮಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ