Breaking News
Home / ರಾಜಕೀಯ / ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ.

ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ.

Spread the love

ಹಾಸನ: ಮೂರು ದಿನಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ರೌಡಿಶೀಟರ್ ಮಾಸ್ತಿಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳು ಶರಣಾಗಿದ್ದಾರೆ.

ಚನ್ನರಾಯಪಟ್ಟಣದ ರೌಡಿಶೀಟರ್ ಹುಲಿವಾಲ ಚೇತು, ಹಾಸನದ ಸಾಲಗಾಮೆ ರಾಕೇಶ್ ಅಲಿಯಾಸ್​ ರಾಕಿ ಮತ್ತು ಮಂಡ್ಯ ಮೂಲದ ಶಿವು, ಶರಣಾದ ಆರೋಪಿಗಳು. ಜೂ.4ರ ಮಂಗಳವಾರ ಐದು ಮಂದಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾಸ್ತಿಗೌಡನನ್ನು ಬರ್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದರು. ಆರೋಪಿಗಳಲ್ಲಿ ಮೂವರು ತಾವಾಗಿಯೇ ಶರಣಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ಈ ಕುರಿತು ಹಾಸನ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ನಮ್ಮ ಇಲಾಖೆಯಿಂದ ಬೇರೆ ಬೇರೆ ತಂಡಗಳನ್ನು ಮಾಡಿ ಬೆಂಗಳೂರು ಮತ್ತು ಮಂಗಳೂರು ಹಾಗೂ ಇತರ ಭಾಗಗಳಿಗೆ ಕಳುಹಿಸಲಾಗಿತ್ತು. ಇದರ ಮಧ್ಯೆ ಮೂವರು ಆರೋಪಿಗಳು ಪೊಲೀಸ್ ಠಾಣೆಗೆ ಆಗಮಿಸಿ ಶರಣರಾಗಿದ್ದಾರೆ. ಚನ್ನರಾಯಪಟ್ಟಣದ ರೌಡಿಶೀಟರ್ ಹುಲಿವಾಲ ಚೇತು, ಹಾಸನದ ಸಾಲಗಾಮೆ ರಾಕೇಶ್ ಅಲಿಯಾಸ್​ ರಾಕಿ ಮತ್ತು ಮಂಡ್ಯ ಮೂಲದ ಶಿವು ಶರಣಾದ ಆರೋಪಿಗಳಾಗಿದ್ದಾರೆ ಎಂದರು.


Spread the love

About Laxminews 24x7

Check Also

ಪಿಎಸ್‌ಐ ನೇಮಕಾತಿ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪಾಲ್​ಗೆ ಷರತ್ತು ಬದ್ದ ಜಾಮೀನು

Spread the love ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರಿ​ಗೆ ಕರ್ನಾಟಕ ಹೈಕೋರ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ