Breaking News

ಎಸೆಸೆಲ್ಸಿ ಪರೀಕ್ಷೆ ನಕಲಿಗೆ ಸಹಕಾರ: ನಾಲ್ವರು ಸಹ ಶಿಕ್ಷಕರ ಅಮಾನತು

Spread the love

ಚಿತ್ರದುರ್ಗ: ಎಸೆಸೆಲ್ಸಿ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ಆರೋಪದಲ್ಲಿ ನಾಲ್ವರು ಸಹ ಶಿಕ್ಷಕರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ.

Suspension: ಎಸೆಸೆಲ್ಸಿ ಪರೀಕ್ಷೆ ನಕಲಿಗೆ ಸಹಕಾರ: ನಾಲ್ವರು ಸಹ ಶಿಕ್ಷಕರ ಅಮಾನತು

ಚಳ್ಳಕೆರೆ ತಾಲೂಕು ಪರಶುರಾಂಪುರ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಳ್ಳಕೆರೆ ತಾಲೂಕು ಪಿ.ಈಬನಹಳ್ಳಿ ಶಾಲೆಯ ಚಂದ್ರಶೇಖರ್‌, ಕೊರ್ಲಕುಂಟೆ ಶಾಲೆಯ ಪ್ರಕಾಶ್‌, ಗೋಸಿಕೆರೆ ರಾಧಾಕೃಷ್ಣ ಶಾಲೆಯ ರಾಘವೇಂದ್ರ ಹಾಗೂ ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ರೇವಣ್ಣ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.

ಮೂರು ಕೊಠಡಿಗಳಲ್ಲಿ 18 ವಿದ್ಯಾರ್ಥಿಗಳು ನಕಲು ಮಾಡುತ್ತಿದ್ದರೂ ಶಿಕ್ಷಕರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.


Spread the love

About Laxminews 24x7

Check Also

ಚಿತ್ರದುರ್ಗ ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ

Spread the loveನವದೆಹಲಿ: ಚಿತ್ರದುರ್ಗ  ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗಿದ್ದರು. ಈ ಸಂಕಷ್ಟದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ