Breaking News

ಜ್ಯೂಮ್ ಪರ್ಯಾಯವಾಗಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದರೆ ಕೇಂದ್ರ ಸರ್ಕಾರದಿಂದ  ಒಂದು ಕೋಟಿ

Spread the love

ಹೊಸದಿಲ್ಲಿ: ಜ್ಯೂಮ್ ಪರ್ಯಾಯವಾಗಿ ಹೊಸ ಆ್ಯಪ್ ಅಭಿವೃದ್ಧಿ ಪಡಿಸಿದರೆ ಕೇಂದ್ರ ಸರ್ಕಾರದಿಂದ  ಒಂದು ಕೋಟಿ ಮೊತ್ತದ ಬಹುಮಾನ ನೀಡಲು ಘೋಷಿಸಿದೆ.

ಲಾಕ್​​ಡೌನ್​​ ಅವಧಿಯಲ್ಲಿ ಮನೆಯಲ್ಲಿ ಕುಳಿತು ಕಾಲ ಕಳೆಯುತ್ತಿರೋ ಜನರು, ಹೆಚ್ಚಾಗಿ ಜ್ಯೂಮ್ ಆ್ಯಪ್ ಅನ್ನು ಹೆಚ್ಚಾಗಿ ಬಳಸೋಕೆ ಶುರು ಮಾಡಿದ್ದರು. ವರ್ಕ್ ಫ್ರಮ್ ಹೋಮ್ ಮಾಡುವ ಪ್ರತಿಷ್ಟಿತ ಕಂಪನಿಗಳ ಸಿಬ್ಬಂದಿ, ಉದ್ಯಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೂಮ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿಡಿಯೋ ಕಾನ್ಪರೆನ್ಸ್​  ಬಳಕೆ ಮಾಡ್ತಿದ್ರು.

ಈ ಜ್ಯೂಮ್ ಆ್ಯಪ್ ಅಷ್ಟೊಂದು ಸೇಫ್ ಅಲ್ಲ. ಬಳಕೆದಾರರ ಮಾಹಿತಿ ಸೋರಿಕೆ ಆಗುತ್ತೆ ಅಂತ ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಎಚ್ಚರಿಸಿತ್ತು. ಜೊತೆಗೆ ಮೇಕ್​ ಇನ್​ ಇಂಡಿಯಾದ ಭಾಗವಾಗಿ ಜ್ಯೂಮ್​ಗೆ ಪರ್ಯಾಯವಾಗಿ ಹೊಸ ಆ್ಯಪ್​​ ಅನ್ನು ಅಭಿವೃದ್ಧಿ ಪಡಿಸಿದ್ರೆ, ದೊಡ್ಡ ಮೊತ್ತದ ಬಹುಮಾನ ನೀಡುವುದಾಗಿ ಘೋಷಿಸಿತ್ತು.

ಇದೀಗ ಕೇಂದ್ರ ಸರ್ಕಾರ, ಭಾರತದ ಸ್ಟಾರ್ಟ್ ಅಪ್‌ಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಅಭಿವೃದ್ಧಿ ಪಡಿಸುವಂತೆ ಚಾಲೆಂಜ್​ವೊಂದನ್ನ ನೀಡಿದೆ. ಈ ಸವಾಲಿಗೆ ಇನ್ನೋವೇಷನ್​ ಚಾಲೆಂಜ್​ ಫಾರ್ ಡೆವಲಪ್​ಮೆಂಟ್ ಆಫ್ ವಿಡಿಯೋ ಕಾನ್ಫರೆನ್ಸಿಂಗ್ ಸಲ್ಯೂಷನ್ ಅಂತಾ ಹೆಸರಿಡಲಾಗಿದೆ. ಈ ಸಂಸ್ಥೆಯ ವಿಜೇತರಿಗೆ ಬರೋಬ್ಬರಿ ೧ ಕೋಟಿ ಮೊತ್ತ ಬಹುಮಾನದ ರೂಪದಲ್ಲಿ ಸಿಗಲಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಆ್ಯಪ್ ಅಭಿವೃದ್ಧಿಪಡಿಸಲು ಸಂಸ್ಥೆಗಳಿಗೆ ಏಪ್ರಿಲ್ ೩೦ರವರೆಗೆ ಡೆಡ್​​ಲೈನ್ ನೀಡಲಾಗಿದೆ.


Spread the love

About Laxminews 24x7

Check Also

ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ

Spread the love ಲಾರಿ ಡಿಕ್ಕಿ ಹಿನ್ನೆಲೆ ಪಲ್ಟಿಯಾದ ಐಸ್ ಕ್ಯೂಬ್ ತುಂಬಿದ ಟಂಟಂ ವಾಹನ ಇಳಕಲ್ ಹೊರವಲಯದ ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ