Breaking News
Home / ಜಿಲ್ಲೆ / ಉತ್ತರಕನ್ನಡ / ಶ್ರೀ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಪೊಲೀಸರು

ಶ್ರೀ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಪೊಲೀಸರು

Spread the love

ಶಿರಸಿ: ಅಕ್ರಮವಾಗಿ ಶ್ರೀ ಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಶಿರಸಿ ಮಾರುಕಟ್ಟೆ ಪೊಲೀಸರು ಈರ್ವರನ್ನು ಬಂಧಿಸಿ ಅವರಿಂದ ಸುಮಾರು ೨೬ ಸಾವಿರ ರೂಪಾಯಿ ಶ್ರೀಗಂಧವನ್ನು ಹಾಗೂ ಸಾಗಿಸಲು ಬಳಸಿದ ಬೈಕ್ ನ್ನು ವಶಪಡಿಸಿಕೊಂಡಿರುವ ಘಟನೆ ನಗರದ ಕರಿಗುಂಡಿ ರಸ್ತೆಯಲ್ಲಿ ನಡೆದಿದೆ.
 ಶಿರಸಿ – ಕರಿಗುಂಡಿ ರಸ್ತೆಯ ಲಿಡ್ಕರ್ ಕಾಲೋನಿ ಕ್ರಾಸ್ ಹತ್ತಿರ ಮೊಟಾರ್ ಸೈಕಲ್ ನಂ ಕೆ.ಎ ೧೫ ಆರ್ ೧೪೯೯ ರ ಮೇಲೆ  ಇರ್ಷಾದ್ ಖಾದರ್ ಸಾಬ್ ವಡಗೇರಿ ಕಸ್ತೂರ ಬಾ ನಗರ, ಯಾಸೀನ್ ಅಲಿಯಾಸ್ ಮುನ್ನಾ ಹಸನಸಾಬ ಬಸಳೆಕೊಪ್ಪ ಅಕ್ರಮವಾಗಿ ಸಾಗಿಸುತ್ತಿದ್ದರು.
ಅಂದಾಜು  ೧ ಕೆಜಿ ೩೦೦ ಗ್ರಾಂ ತೂಕದ  ೨೬ ಸಾವಿರ ರೂ ಮೌಲ್ಯದ  ಶ್ರೀ ಗಂಧದ ಮರದ ತುಂಡುಗಳನ್ನು ಯಾವುದೇ ಪರವಾನಿಗೆಯಿಲ್ಲದೆ  ಕಳ್ಳತನದಿಂದ ಮಾರಾಟ ಮಾಡಲು ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ.
ಇನ್ನೋರ್ವ ಆರೋಪಿತ ಅಕ್ಬರ್ ಇಬ್ರಾಹಿಂ ಶೇಖ್ ಸಲಾಮತ್ ಗಲ್ಲಿ ಕಸ್ತೂರ ಬಾ ನಗರ ಪರಾರಿಯಾಗಿದ್ದಾನೆ.
ಡಿ.ಎಸ್.ಪಿ ಗೋಪಾಲಕೃಷ್ಣ ನಾಯಕ, ಸಿ.ಪಿ.ಐ. ಬಿ.ಯು ಪ್ರದೀಪ್ ರವರ ಮಾರ್ಗದರ್ಶನದಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದ ಎಎಸ್ಐ ಶಿವಕುಮಾರ ಸಿಬ್ಬಂದಿಗಳಾದ ಚಿದಾನಂದ ನಾಯ್ಕ,  ಇಸ್ಮಾಯೀಲ್ ಕೋಣನಕೇರಿ, ಹನುಮಂತ ಮಾಕಾಪುರ, ಮೋಹನ ನಾಯ್ಕ ರವರನ್ನು ಒಳಗೊಂಡ ತಂಡ ಆರೋಪಿತಗಳನ್ನು ವಶಕ್ಕೆ ಪಡೆದು ಅಂದಾಜು ೨೬ಸಾವಿರ ರೂ ಮೌಲ್ಯದ ಶ್ರೀ ಗಂಧದ ಮರದ ತುಂಡುಗಳನ್ನು ಹಾಗೂ ಕೃತ್ಯಕ್ಕೆ ಬಳಸಲಾದ ಮೊಟಾರ್ ಸೈಕಲ್ ಜಪ್ತಿ ಪಡಿಸಿಕೊಂಡಿದ್ದು ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Spread the love

About Laxminews 24x7

Check Also

ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

Spread the love ಕಾರವಾರ: ಕೊರೊನಾ ಸೋಂಕಿಗೆ ಒಳಗಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ