ಮಗನ ಹತ್ಯೆಗೆ ತಂದೆಯಿಂದಲೇ ಸುಪಾರಿ! ಹುಬ್ಬಳ್ಳಿಯಲ್ಲಿ ಖ್ಯಾತ ಉದ್ಯಮಿ ಪುತ್ರನ ಬದುಕು ದುರಂತ ಅಂತ್ಯ.

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಖ್ಯಾತ ಉದ್ಯಮಿಯೊಬ್ಬರ ಪುತ್ರನ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಉದ್ಯಮಿಯ ತೋಟದ ಮನೆಯಲ್ಲೇ ಮಗನ ಶವ ಪತ್ತೆಯಾಗಿದೆ. ‘ಮಗ ನಾಪತ್ತೆಯಾಗಿದ್ದಾನೆ. ದಯವಿಟ್ಟು ಆತನನ್ನು ಹುಡುಕಿಕೊಡಿ’ ಎಂದು ಪೊಲೀಸ್​ ಠಾಣೆಯಲ್ಲಿ ಹೈಡ್ರಾಮ ಮಾಡಿದ್ದ ತಂದೆಯೇ ಇಡೀ ಪ್ರಕರಣ ರೂವಾರಿ ಎಂಬ ಆಘಾತಕಾರಿ ರಹಸ್ಯ ಬಯಲಾಗಿದೆ.

 

ಉದ್ಯಮಿ ಭರತ್ ಜೈನ್​ರ ಪುತ್ರ ಅಖಿಲ್ ಜೈನ್(30) ಮೃತ ದುರ್ದೈವಿ. ಅಖಿಲ್​ ಕಾಣೆಯಾಗಿದ್ದಾನೆ ಎಂದು ಡಿ.3ರಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಸಹೋದರ ದೂರು ನೀಡಿದ್ದರು. ಮಗ ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ತಂದೆ ಭರತ ಜೈನ್ ಹೈಡ್ರಾಮ ಮಾಡಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ತಂದೆ ಮೇಲೆಯೇ ಅನುಮಾನ ಮೂಡಿತ್ತು.

 

ಭರತ್ ಜೈನ್​ರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಮಗನ ಹತ್ಯೆಗೆ ಸ್ಥಳೀಯ ಹಂತಕರಿಗೆ ಸುಪಾರಿ ನೀಡಿದ್ದಾಗಿ ತಂದೆ ಬಾಯ್ಬಿಟ್ಟಿದ್ದಾರೆ. ಇವರ ಹೇಳಿಕೆ ಆಧರಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಬ್ಬಳ್ಳಿ ತಾಲೂಕಿನ ದೇವರಗಿಡಿಹಾಳ ಗ್ರಾಮದಲ್ಲಿ ಭರತ್ ಜೈನ್​ಗೆ ಸೇರಿದ ತೋಟದ ಮನೆಯಲ್ಲಿ ಮಗನ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

 

ಮಗನ ಹತ್ಯೆಗೆ ಸುಪಾರಿ ಕೊಟ್ಟಿದ್ದು ಏಕೆ ಎಂಬ ಕಾರಣ ಇನ್ನೂ ಗೊತ್ತಾಗಿಲ್ಲ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಕೇಶ್ವಾಪುರ ಠಾಣೆ ಪೊಲೀಸ್ ಇನ್​ಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

17 ಪಿಎಸ್‌ಐಗಳ ವರ್ಗಾವಣೆ

Spread the loveಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳನ್ನು (ಪಿಎಸ್‌ಐ) ನಗರದ ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ