Breaking News

ಪ್ರೀತಿಸಿ ಮದುವೆಯಾಗಿ ದಾರಿ ತಪ್ಪಿದ ಪತ್ನಿ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಪತಿ ಕೊಲೆ ರಹಸ್ಯ.

Spread the love

ಕೋಲಾರ: ದಾರಿ ತಪ್ಪಿದ ಪತ್ನಿ ಅಕ್ರಮ ಸಂಬಂಧ ಬೆಳೆಸಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ ಘಟನೆ ನಡೆದಿದೆ. ಪೊಲೀಸರ ತನಿಖೆಯಲ್ಲಿ ಕೊಲೆ ರಹಸ್ಯ ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನ. 28 ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆನಂದ್ ನಾಪತ್ತೆಯಾಗಿರುವುದಾಗಿ ಆತನ ಅಣ್ಣ ವೆಂಕಟೇಶ್ ದೂರು ನೀಡಿದ್ದರು.

ನಂತರ ಎರಡು ದಿನಗಳ ಬಳಿಕ ಮತ್ತೊಂದು ದೂರು ನೀಡಿ ತಮ್ಮನ ಪತ್ನಿ ಮೇಲೆ ಅನುಮಾನ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದರು.

 

ಈ ನಡುವೆ ಹೊಸಕೋಟೆ ಬಿ.ಮಾಕನಹಳ್ಳಿ ಬಳಿ ಹಳ್ಳದಲ್ಲಿ ಆನಂದ್ ಮೃತ ದೇಹ ಪತ್ತೆಯಾಗಿದ್ದು, ಆತನ ಪತ್ನಿ ಚೈತ್ರಾ ಪ್ರಿಯಕರನೊಂದಿಗೆ ಸೇರಿ ಆನಂದನ್ನು ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಆರು ವರ್ಷದ ಹಿಂದೆ ಆನಂದ್-ಚೈತ್ರಾ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

 

ಈ ನಡುವೆ ಪಕ್ಕದ ಮನೆಯ ಚಲಪತಿಯೊಂದಿಗೆ ಚೈತ್ರಾ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಈ ವಿಷಯ ತಿಳಿದ ಆನಂದ್ ಬೈದಾಡಿದ್ದಾನೆ. ಗಂಡನಿದ್ದರೆ ಸಂಬಂಧ ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದ ಚೈತ್ರಾ ಪ್ರಿಯಕರನಿಗೆ ಗಂಡನ ಹತ್ಯೆ ಮಾಡುವಂತೆ ಹೇಳಿದ್ದಾಳೆ. ಚಲಪತಿ ಸ್ನೇಹಿತರಾದ ಪೃಥ್ವಿರಾಜ್ ಮತ್ತು ನವೀನ್ ನೆರವಿನೊಂದಿಗೆ ಕೊಲೆ ಮಾಡಿದ್ದಾನೆ. ಕೆಲಸ ಕೊಡಿಸುವುದಾಗಿ ಆನಂದನನ್ನು ಕರೆದೊಯ್ದು ಮದ್ಯ ಕುಡಿಸಿ ಕೊಂದ ನಂತರ ಹಳ್ಳದಲ್ಲಿ ಶವ ಎಸೆದು ಪರಾರಿಯಾಗಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.


Spread the love

About Laxminews 24x7

Check Also

ಕೃಷಿ ವಿವಿ ಅಮೃತ ಮಹೋತ್ಸ ಮತ್ತು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಕುಲುಪತಿಗಳಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ… ಸಿಎಂ ಕುಲಪತಿಗಳ ವಿರುದ್ಧ ದೂರು..

Spread the loveಕೃಷಿ ವಿವಿ ಅಮೃತ ಮಹೋತ್ಸ ಮತ್ತು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಕುಲುಪತಿಗಳಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ… …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ