Breaking News

ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಇಲ್ಲದೆ ಜನರು ಹೈರಾಣು.

Spread the love

ರಾಮದುರ್ಗ : ನಗರದ ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ಹೈರಾಣು ಆಗಿ ತರಾಟೆಗೆ ತಗೆದುಕೊಂಡ ಘಟನೆ ಜರುಗಿದೆ, ಸರ್ಕಾರದ ಗೃಹಲಕ್ಷ್ಮಿ , ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಅನ್ನಭಾಗ್ಯ ಹಣ ಇತರ ಯೋಜನೆಗಳನ್ನು ಬ್ಯಾಂಕ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಈ ಕುರಿತು ರಾಮದುರ್ಗದ ತಾಲೂಕಿನ ಮಹಿಳೆಯರು ತಮ್ಮ ಖಾತೆಗೆ ಹಣ ಜಮಾವಣೆ ಕುರಿತು ಖಾತರಿ ಪಡಿಸಲು,

ಎನ್ ಸಿ ಪಿ ನಂಬರ ಚೇಕ್ ಮಾಡಲು ಮತ್ತು ಪಾಸ್ ಬುಕ್ ತಿದ್ದುಪಡಿ ಸರಿಪಡಿಸಿ ಸಲು ಮತ್ತು ವಿಚಾರಣೆಗೆ ನಗರದ ಯುನಿಯನ್ ಬ್ಯಾಂಕಿಗೆ ನೂರಾರು ಜನ ಮಹಿಳೆಯರು ಸಾಲುಗಟ್ಟಿ ದಿನಪೂರ್ತಿ ನಿಂತರು ಸಿಬ್ಬಂದಿಗಳು ಮಾತ್ರ ಗ್ರಾಹಕರಿಗೆ ಸೂಕ್ತ ಮಾರ್ಗದರ್ಶನ ನಿಡದೆ ಇರುವದರಿಂದ ರೊಚ್ಚಿಗೆದ್ದ ಮಹಿಳೆಯರು ಬ್ಯಾಂಕ ಕಾವಲುಗಾರನಿಗೆ ತರಾಟೆ ತಗೆದುಕೊಂಡರು, ಇಷ್ಟಾದರೂ ಯಾವೊಬ್ಬ ಸಿಬ್ಬಂದಿ ಬರಲೆಇಲ್ಲಾ ಈ ಕುರಿತು ಸರ್ಕಾರಕ್ಕೆ ಹಿಡಿ ಶಾಪ ಹಾಕಿ ಮಹಿಳೆಯರು ಮನೆಗೆ ತೆರಳಿದರು.

ಈ ಕುರಿತು ವಿಧಾನ ಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಬ್ಯಾಂಕ್ ಅಧಿಕಾರಿಗಳೊಡನೆ ಚರ್ಚಿಸಿ ಮಹಿಳೆಯರಿಗೆ ಆಗುವ ತೊಂದರೆ ಸರಿ ಪಡಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

1200 ರೈತರ ಆತ್ಮಹತ್ಯೆ: ಕಾಂಗ್ರೆಸ್ ಆಡಳಿತದಲ್ಲಿ ರೈತರ ಜೀವಕ್ಕಿಲ್ಲ ಬೆಲೆ- ಪ್ರಹ್ಲಾದ್ ಜೋಶಿ

Spread the love ಬೆಂಗಳೂರು ಜುಲೈ 26: ರಾಜ್ಯದಲ್ಲಿ ಕಳೆದ 15 ತಿಂಗಳಲ್ಲಿ 1200ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ