ಗದಗ: ಆತ 12 ವರ್ಷಗಳಿಂದ ಸೈನಿಕನಾಗಿ ದೇಶ ಕಾಯ್ತಿದ್ದ. ಒಂದು ತಿಂಗಳ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದ. ಬಳಿಕ ಮೇಲಾಧಿಕಾರಿಗಳ ಕರೆ ಮೇಲೆ ಮತ್ತೆ ಸೇವೆಗೆ ಹಾಜರಾದ. ಆದ್ರೆ ಬೆಳಿಗ್ಗೆ ಅಪ್ಪ ಅಮ್ಮನ ಜೊತೆಗೆ ಖುಷಿ ಖುಷಿಯಾಗಿ ಮಾತನಾಡಿದ್ದ ಯೋಧ ಮಾತನಾಡಿದ ಒಂದೇ ಗಂಟೆಯಲ್ಲಿ ಯೋಧನ ಹುತಾತ್ಮನಾದ ಸುದ್ದಿ ಬರಸಿಡಿಲಂತೆ ಬಡಿದಿದೆ. ಇಂದು ಛತ್ತೀಸ್ಘಡದಲ್ಲಿ ಗದಗ ಮೂಲದ ಯೋಧ ಹುತಾತ್ಮನಾಗಿರೋ ಸುದ್ದಿ ತಿಳಿದು ಗೊಜನೂರು ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. …
Read More »ಹಾವೇರಿ: ಇನ್ನೂ ಕೈಸೇರದ ‘ಕೋವಿಡ್ ರಿಸ್ಕ್ ಭತ್ಯೆ’
ಹಾವೇರಿ: ಕೋವಿಡ್ ಸೇವೆಯಲ್ಲಿ ಜೀವ ಒತ್ತೆಯಿಟ್ಟು ಕರ್ತವ್ಯ ನಿರ್ವಹಿಸಿದ ‘ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ’ಗಳಿಗೆ (ಲ್ಯಾಬ್ ಟೆಕ್ನಿಷಿಯನ್) ರಾಜ್ಯ ಸರ್ಕಾರ ಘೋಷಿಸಿದ ‘ಕೋವಿಡ್ ರಿಸ್ಕ್ ಭತ್ಯೆ’ ಕಾಗದದಲ್ಲೇ ಉಳಿದಿದ್ದು, ಸಿಬ್ಬಂದಿಗಳಿಗೆ ಇನ್ನೂ ದೊರೆತಿಲ್ಲ. ಕೋವಿಡ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದ ವೈದ್ಯರಿಗೆ ₹10 ಸಾವಿರ, ಶುಶ್ರೂಷಕ ಅಧಿಕಾರಿಗಳಿಗೆ ₹8 ಸಾವಿರ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಕರ್ತವ್ಯ ನಿರ್ವಹಿಸುವ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಿಗೆ ₹5 ಸಾವಿರ ‘ಕೋವಿಡ್ ರಿಸ್ಕ್ ಭತ್ಯೆ’ಯನ್ನು 2021ರ …
Read More »ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಆದೇಶ: B.S.Y.
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರು ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ತಕ್ಷಣ ಹಿಂದಿನ ಬಾಕಿಯೂ ಸೇರಿ ಶೇ.11 ತುಟ್ಟಿ ಭತ್ಯೆಯನ್ನು ಜುಲೈ 1ರಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶದಿಂದ 6 ಲಕ್ಷ …
Read More »ವಿಶೇಷ ಜಿಲ್ಲಾಧಿಕಾರಿ: ಐಎಎಸ್ ಅಧಿಕಾರಿ ನೇಮಕಕ್ಕೆ ಸೂಚನೆ
ಕೆಎಎಸ್ ಅಧಿಕಾರಿಗಳಾದ ಎಂ. ಕೆ.ಜಗದೀಶ್ ಮತ್ತು ಬಸವರಾಜ್ ಅವರನ್ನು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ನಗರದ ವಕೀಲ ವಾಸುದೇವ ರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ‘ಐಎಎಸ್ ಅಧಿಕಾರಿಗಳನ್ನೇ ಈ ಹುದ್ದೆಗಳಿಗೆ ನೇಮಕ ಮಾಡಬೇಕು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿದೆ. ‘ಕರ್ನಾಟಕ ಭೂಕಂದಾಯ …
Read More »ನಟಿ ಶಿಲ್ಪಾ ಶೆಟ್ಟಿ ಪತಿ, ರಾಜ್ ಕುಂದ್ರ ಪೋರ್ನ್ ಜಗತ್ತಿನ ಮಾಸ್ಟರ್ ಮೈಂಡ್; ಪೂನಂ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಬಂಧನದ ಬಳಿಕ ಅಡಲ್ಟ್ ಸ್ಟಾರ್ ಪೂನಂ ಪಾಂಡೆ ಹೇಳಿಕೆ ವೈರಲ್ ಆಗುತ್ತಿದೆ. 2019ರಲ್ಲಿ ರಾಜ್ ಕುಂದ್ರ ವಿರುದ್ಧ ದೂರು ದಾಖಲಿಸಿದ್ದ ಪೂನಂ, ರಾಜ್ ಕುಂದ್ರರನ್ನು ‘ಬ್ಲೂ ಫಿಲ್ಮ್ ದಂಧೆಯ ಮಾಸ್ಟರ್ ಮೈಂಡ್’ ಎಂದು ಆರೋಪಿಸಿದ್ದರು ಎನ್ನುವ ಸುದ್ದಿ ಈಗ ಬಾಲಿವುಡ್ ನಲ್ಲಿ ವೈರಲ್ ಆಗುತ್ತಿದೆ. ಕಳೆದ ಒಂದು ವರ್ಷದಿಂದ ಬ್ಲೂ ಫಿಲ್ಮ್ ದಂಧೆಯ ಹಿಂದೆ ಬಿದ್ದಿದ್ದ ಮುಂಬೈ …
Read More »ಬೆತ್ತಲೆಯಾಗಿ ಆಡಿಷನ್ ನೀಡಲು ಕೇಳಿದ್ದ: ರಾಜ್ ಕುಂದ್ರಾ ವಿರುದ್ಧ ಬಾಂಬ್ ಸಿಡಿಸಿದ ನಟಿ
ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಪ್ರದರ್ಶನ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನವಾಗಿದ್ದು, ಪ್ರಕರಣ ಸಂಬಂಧ ಹಲವು ಕುತೂಹಲಕಾರಿ ಅಂಶಗಳು ಹೊರಗೆ ಬರುತ್ತಿವೆ. ನಟಿ ಸಾಗರಿಕಾ ಸುಮನ್ ಮಾತನಾಡಿ, ”ರಾಜ್ ಕುಂದ್ರಾ, ಬೆತ್ತಲೆಯಾಗಿ ಆಡಿಷನ್ ನೀಡುವಂತೆ ಕೇಳಿದ್ದ” ಎಂದಿದ್ದಾರೆ. ”2020ರ ಆಗಸ್ಟ್‌ನಲ್ಲಿ ನನಗೆ ವೆಬ್ ಸರಣಿಯೊಂದರಲ್ಲಿ ನಟಿಸಲು ಅವಕಾಶ ಬಂತು. ರಾಜ್ ಕುಂದ್ರಾ ಸಂಸ್ಥೆಯ ವ್ಯವಸ್ಥಾಪಕ ಉಮೇಶ್ ಕಾಮತ್ ನನಗೆ ಕರೆ ಮಾಡಿದರು. ನನಗೆ ವಿಡಿಯೋ ಕಾಲ್‌ನಲ್ಲಿ …
Read More »ಐವರು ನಿರ್ದೇಶಕರ ಒಂದು ಸಿನಿಮಾ ‘ಆದ್ದರಿಂದ’
ಒಟಿಟಿ ಸಮಯದಲ್ಲಿ ಅಂಥಾಲಜಿ ಸಿನಿಮಾಗಳು ಜನಪ್ರಿಯಗೊಳ್ಳುತ್ತಿವೆ. ಯಾವುದಾದರೂ ಒಂದು ವಿಷಯ ಆಧರಿಸಿ ಕೆಲವು ನಿರ್ದೇಶಕರು ಸೇರಿ ಅರ್ಧ ಗಂಟೆಯ ಸಿನಿಮಾ ಮಾಡುತ್ತಾರೆ. ಅದನ್ನು ಒಂದರಹಿಂದೊಂದರಂತೆ ಜೋಡಿಸಿ 2 ಅಥವಾ ಮೂರು ಗಂಟೆಯ ಸಿನಿಮಾ ರೀತಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕನ್ನಡದಲ್ಲಿಯೂ ಈ ರೀತಿಯ ಪ್ರಯತ್ನಗಳು ಈಗಾಗಲೇ ಆಗಿವೆ. ಇದೀಗ ಇಂಥಹುದೇ ಮತ್ತೊಂದು ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಅದುವೇ ‘ಆದ್ದರಿಂದ’. ಐದು ಜನ ಕನ್ನಡದ ಪ್ರತಿಭಾವಂತ ಸಿನಿಮಾ ನಿರ್ದೇಶಕರು ಒಟ್ಟಾಗಿ ಸಿನಿಮಾ ನಿರ್ದೇಶಕನ …
Read More »ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಭಜರಂಗಿ-2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷೆಯ ‘ಭಜರಂಗಿ-2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2ನೇ ಲಾಕ್ ಡೌನ್ ಬಳಿಕ ಬಿಡುಗಡೆ ದಿನಾಂಕ ಘೋಷಣೆ ಮಾಡಿದ ಮೊದಲ ಸಿನಿಮಾ ತಂಡ ಇದಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಇದೀಗ ಹ್ಯಾಟ್ರಿಕ್ ಹೀರೋ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದ್ದು, ಶಿವಣ್ಣ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ಭಜರಂಗಿ-2’ ಸಿನಿಮಾ ‘ಸೆಪ್ಟಂಬರ್ 10’ರಂದು ಬಿಡುಗಡೆಯಾಗಲಿದೆ …
Read More »ಧುಮುಕುತ್ತಿರುವ ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಯುವಕರ ಹುಚ್ಚು ಸಾಹಸ
ಕಲಬುರಗಿ: ಮುಂಗಾರಿನ ಅಬ್ಬರ ಮಳೆಯಿಂದ ಭೋರ್ಗರೆಯುತ್ತಿದ್ದ ಜಲಪಾತದಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಣೆ ಮಾಡಿರುವ ಘಟನೆ ಚಿಂಚೋಳಿ ತಾಲೂಕಿನ ಎತ್ತಿಪೋತ ಜಲಪಾತ ಬಳಿ ನಡೆದಿದೆ. ಸತತವಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭರ್ಜರಿ ಮಳೆಗೆ ಎತ್ತಿಪೋತ ಜಲಪಾತ ಧುಮುಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ಹೀಗೆ ಮೈದುಂಬಿ ಹರಿಯುತ್ತಿರುವ ಜಲಪಾತ ನೋಡಲು ತೆರಳಿದ್ದ ಯುವಕರಿಬ್ಬರು ಸೆಲ್ಫಿ ತೆಗೆಯುವ ದುಸ್ಸಾಹಸಕ್ಕೆ ಮುಂದಾಗಿ ನೀರಿಗಿಳಿದಿದ್ದರು. ಆದರೆ ಜಲಪಾತದ ರಭಸಕ್ಕೆ …
Read More »‘ಪರೀಕ್ಷೆ ರದ್ದು ಮಾಡಿ’ ಅಂತ ವಿಶ್ವವಿದ್ಯಾಲಯದ ಮುಂದೆಯೇ ಪ್ರತಿಭಟನೆಗೆ ಕುಳಿತ ಸ್ಟುಡೆಂಟ್ಸ್
ದಾವಣಗೆರೆ: ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಘಟನೆ ದಾವಣಗೆರೆಯ ವಿಶ್ವ ವಿದ್ಯಾಲಯದಲ್ಲಿ ನಡೆದಿದೆ. ಇತ್ತೀಚೆಗೆ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಯ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಸದ್ಯ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗ್ತಿದೆ. ಆದರೆ ಯಾವುದೇ ಕ್ಲಾಸ್ ನಡೆಸದೇ ಕೇವಲ ಎರಡು ತಿಂಗಳ ಆನ್ಲೈನ್ ಕ್ಲಾಸ್ ಮಾಡಿದ್ದು ಮತ್ತು ಎರಡು ತಿಂಗಳ ಅಂತರದಲ್ಲಿ ಎರಡು ಸೆಮ್ ಗಳ ಪರೀಕ್ಷೆ ನಡೆಸುತ್ತಿರೋದಕ್ಕೆ …
Read More »
Laxmi News 24×7