Home / ಜಿಲ್ಲೆ / ಬೆಳಗಾವಿ / ಗೋಕಾಕ / ರೈತರಿಗೆ ಹಾಲಿನಿಂದಲೇ ಹೆಚ್ಚಿನ ಉತ್ಪಾದನೆ ತರಲು ಕರ್ನಾಟಕ ಹಾಲು ಮಹಾಮಂಡಳಿ ನಿರ್ಧರಿಸಿದೆ

ರೈತರಿಗೆ ಹಾಲಿನಿಂದಲೇ ಹೆಚ್ಚಿನ ಉತ್ಪಾದನೆ ತರಲು ಕರ್ನಾಟಕ ಹಾಲು ಮಹಾಮಂಡಳಿ ನಿರ್ಧರಿಸಿದೆ

Spread the love

ಮೂಡಲಗಿ : ರೈತರಿಗೆ ಹಾಲಿನಿಂದಲೇ ಹೆಚ್ಚಿನ ಉತ್ಪಾದನೆ
ತರಲು ಕರ್ನಾಟಕ ಹಾಲು ಮಹಾಮಂಡಳಿ ನಿರ್ಧರಿಸಿದ್ದು, ರೈತರ
ಆರ್ಥಿಕಾಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು
ರೂಪಿಸುತ್ತಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ
ಬಾಲಚಂದ್ರ ಜಾರಕಿಹೊಳಿ ಹೇಳಿದರು.


ತಾಲೂಕಿನ ಹಳ್ಳೂರ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ
ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರೈತರ
ಉದ್ಧಾರವೇ ನಮ್ಮ ಕೆಎಂಎಫ್ ಗುರಿಯಾಗಿದೆ ಎಂದು ಹೇಳಿದರು.
ರೈತರಿಗಾಗಿ ಕರ್ನಾಟಕ ಹಾಲು ಮಹಾಮಂಡಳಿ ಮುಂದಿನ
ದಿನಗಳಲ್ಲಿ ಹಲವಾರು ಯೋಜನೆಗಳನ್ನು ಕೈಗೊಳ್ಳಲಿದೆ.
ಇದರಿಂದ ರೈತರ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ಬಲ ಬರಲಿದೆ. ಕೇವಲ
ಹಾಲಿನಿಂದಲೇ ರೈತರು ಹೆಚ್ಚಿನ ಲಾಭಾಂಶ ಗಳಿಸಲು ನಮ್ಮ
ಮಹಾಮಂಡಳಿ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಿದೆ. ಹಾಲು
ಉತ್ಪಾದಕರ ಸಹಕಾರಿ ಸಂಘಗಳಿಗೆ ಉತ್ತಮ ಗುಣಮಟ್ಟದ
ಹಾಲನ್ನು ನೀಡಿ ಸಂಘಗಳ ಬಲವರ್ಧನೆಗೆ ರೈತರು ಕೈ
ಜೋಡಿಸಬೇಕು ಎಂದು ಹೇಳಿದರು.

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇದೇ
ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಹಾಲಿನ
ಗುಣಮಟ್ಟದ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ
ಬಸಪ್ಪ ಸಂತಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ
ನಾಗಪ್ಪ ಶಿವಾಪೂರ, ಕುಮಾರ ಲೋಕನ್ನವರ, ಮಲ್ಲಿಕಾರ್ಜುನ
ಸಂತಿ, ಶಂಕರ ಬೋಳನ್ನವರ, ಶ್ರೀಶೈಲ ಹಿರೇಮಠ,
ಭೀಮಶೆಪ್ಪ ಹೊಸಟ್ಟಿ, ಯಲ್ಲಪ್ಪ ಪೂಜೇರಿ, ಶ್ರೀಶೈಲ ಬಾಗೋಡಿ,
ಬಾಳಪ್ಪ ಗೌರವ್ವಗೋಳ, ಬಸಪ್ಪ ನಾವಿ, ಮುಂತಾದವರು
ಉಪಸ್ಥಿತರಿದ್ದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಾಗಪ್ಪ ಶಿವಾಪೂರ
ಹಾಗೂ ಕಾರ್ಯದರ್ಶಿ ಬಸಪ್ಪ ಪಾಲಭಾವಿ ಜಂಟಿಯಾಗಿ ಸನ್ಮಾನಿಸಿದರು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ