ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ರಸ್ತೆಗಿಳಿದ ಕೆಪಿಸಿಸಿ ಕಾರ್ಮಿಕ ಘಟಕ/ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ನೂರಾರು ಜನ/ವೇತನ ಹೆಚ್ಚಳ ಮಾಡುವಂತೆ ಆಗ್ರಹ.
ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಬೆಳಗಾವಿಯ ಕರ್ನಾಟಕ ಪ್ರಾದೇಶಿಕ ಕಾಂಗ್ರೇಸ್‍ನ ಕಾರ್ಮಿಕ ಘಟಕ ವತಿಯಿಂದ ಬೆಳಗಾವಿ ನಗರದಲ್ಲಿ ಭುದುವಾರ ದಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಎದುರುಗಡೆ ಜಮಾಯಿಸಿದ್ದ ಕಾಂಗ್ರೇಸ್ ಕಾರ್ಮಿಕ ಘಟಕ ಮುಖಂಡರು ಕೇಂದ್ರ ಸರಕಾರದ ಕಾರ್ಮಿಕ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.ನಂತರ ಕರ್ನಾಟಕ ಪ್ರಾದೇಶಿಕ ಕಾಂಗ್ರೇಸ್ ಸಮಿತಿಯ ಕಾರ್ಮಿಕ ಜಿಲ್ಲಾಧ್ಯಕ್ಷ ಮಹೇಶ ಹಟ್ಟಿಹೊಳ್ಳಿ ಮಾತನಾಡಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ.15 ರಿಂದ 20 ಸಾವಿರ ವೇತನ ಮಾಡಿ ಅಂತ ಮನವಿ ಮಾಡಿದರು ಇದುವರಿಗೆ ವೇತನ ಹೆಚ್ಚಳ ಮಾಡಿಲ್ಲ.ಬೆಳಗಾವಿ 8 ಸಾವಿರ ಮಾತ್ರ ವೇತನವನ್ನು ನೀಡುತ್ತಿದ್ದಾರೆ. ಆ ಸಂಬಳವನ್ನು 15 ರಿಂದ 20 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅನ್ನಪೂರ್ಣಾ ಅಶುರಕರ, ಕಾರ್ಮಿಕ ವಿಭಾಗ ಅಧ್ಯಕ್ಷೆ ಭಾರತಿ ಪಾಟೀಲ ಮಹಿಳಾ ಅಧ್ಯಕ್ಷರು ಜಯಶ್ರೀ ಮಾಳಗಿ ಸೇರಿದಂತೆ ನುರಾರು ಜನರು ಉಪಸ್ಥಿತರಿಂದರು.