ಪೌರತ್ವ ತಿದ್ದುಪಡಿ ಕಾಯ್ದೆ ವಿಶೇಷ ಸಭೆಯು ಗೋಕಾಕಿನಲ್ಲಿ ಜರುಗಿತು..!!
ಗೋಕಾಕನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಶೇಷ ಸಭೆ ಆಯೋಜನೆ/ಅಂಬಿರಾವ್ ಪಾಟೀಲ ನೀಡಿದ್ರು ಸಭೆಗೆ ಚಾಲನೆ/ ಕಾಯ್ದೆ ಬಗ್ಗೆ ತಿಳುವಳಿಕೆ ನೀಡಿದ ನ್ಯಾಯವಾದಿಗಳು
ಮಂಗಳವಾರ ದಂದು ಭಾರತೀಯ ಜನತಾ ಪಾರ್ಟಿ ಗೋಕಾಕ ವಿಧಾನ ಸಭಾ ಕ್ಷೇತ್ರದ ವತಿಯಿಂದ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಗೆ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಧುರೀಣರಾದ ಶ್ರೀ ಅಂಬಿರಾವ್ ಪಾಟೀಲ,ಭಾಜಪ ನಗರ ಅಧ್ಯಕ್ಷರಾದ ಶ್ರೀ ಶಶಿಧರ ದೇಮಶೆಟ್ಟಿ, ಗ್ರಾಮೀಣ ಅಧ್ಯಕ್ಷರಾದ ವಿರೂಪಾಕ್ಷ ಎಲಿಗಾರ ಆಗಮಿಸಿದ್ದರು.
ಭಾರತ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಕಾರ್ಮಿಕ ಧುರೀಣರಾದ ಶ್ರೀ ಅಂಬಿರಾವ್ ಪಾಟೀಲ ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿಶೇಷ ಸಭೆಗೆ ಚಾಲನೆ ನೀಡಿದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿಗಳಾದ ಪಕೀರಗೌಡ ಸಿದ್ದನಗೌಡರ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.