Breaking News
Home / ರಾಜ್ಯ

ರಾಜ್ಯ

ರಾಜ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಸಿಲ್ಲ: ಸಚಿವ ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಕೋವಿಡ್ ನಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ವಿಚಾರವು ಅಪ್ರಸ್ತುತವಾಗಿದ್ದು, ಅಂತಹ ಯಾವುದೇ ಚರ್ಚೆಗಳೂ ನಡೆದಿಲ್ಲ. ಕೇವಲ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಾಗಿದೆ. ಈ ವೇಳೆ ರಾಜ್ಯದಲ್ಲಿ ಕೊರೋನಾ ನಿರ್ವಹಣೆ …

Read More »

ಟಾಲಿವುಡ್‌ ಪೋಷಕ ನಟ ಟಿಎನ್‌ಆರ್‌ ಇನ್ನಿಲ್ಲ

ಟಾಲಿವುಡ್‌ನ ಪೋಷಕ ನಟ, ನಿರೂಪಕ ತುಮ್ಮಲ ನರಸಿಂಹ ರೆಡ್ಡಿ (ಟಿಎನ್‌ಆರ್‌) ಸೋಮವಾರ ಕೋವಿಡ್‌ನಿಂದ ನಿಧನರಾದರು. ಸಿನಿಮಾ ಪತ್ರಕರ್ತರೂ ಆಗಿದ್ದ ಅವರು ತಮ್ಮದೇ ಆದ ಯುಟ್ಯೂಬ್‌ ಚಾನೆಲ್‌ ಮೂಲಕ ಹಲವಾರು ಸಿನಿಗಣ್ಯರ ಸಂದರ್ಶನ ಮಾಡಿದ್ದರು. ‘ಮಹಾಮಹೇಶ್ವರ’ ‘ಉಗ್ರ ರೂಪಸ್ಯ’, ‘ಹಿಟ್’, ‘ಜಾರ್ಜ್‌ ರೆಡ್ಡಿ’ ಅವರು ನಟಿಸಿದ ಪ್ರಮುಖ ಚಿತ್ರಗಳು. ಟಿಎನ್‌ಆರ್‌ ನಿಧನಕ್ಕೆ ಟಾಲಿವುಡ್‌ ಸಂತಾಪ ವ್ಯಕ್ತಪಡಿಸಿದೆ.

Read More »

ಗುಡ್ ನ್ಯೂಸ್ : ಅತಿಥಿ ಉಪನ್ಯಾಸಕರ ನೇಮಕಕ್ಕೆ ಕಾಲೇಜು ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಪ್ರಸಕ್ತ ಸಾಲಿನ ಸಮ ಸೆಮಿಸ್ಟರ್ ತರಗತಿಗಳಿಗೆ ಬೋಧಿಸಲು ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಹಿಂದೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಆದ್ಯತೆ ನೀಡಿ ಅಥವಾ ಹೊಸ ಅಭ್ಯರ್ಥಿಗಳಿಂದ ಅರ್ಜಿ ಪಡೆದು ಕಾಲೇಜು ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ವಿಭಾಗ ಮುಖ್ಯಸ್ಥರುಉ ಹಿರಿಯ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಸದಸ್ಯರನ್ನು …

Read More »

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ 14 ದಿನ ಮುಂದೂಡಿಕೆ?

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದ 18 ವರ್ಷ ಮೇಲ್ಪಟ್ಟವರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಜ್ಯದಲ್ಲಿ ಮೇ. 10 ರಿಂದ 24 ರವರೆಗೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಬರಲು ಸಮಸ್ಯೆ ಅಗುತ್ತದೆ ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಅವರು, ಬೆಂಗಳುರು ಸೇರಿದಂತೆ …

Read More »

ಲಾಠಿ ಪ್ರಹಾರಕ್ಕೆ ಬ್ರೇಕ್ ಹಾಕಿದ ಕಮಲ್ ಪಂತ್

ಬೆಂಗಳೂರು: ಕೊರೊನಾದಿಂದ ಲಾಕ್‍ಡೌನ್ ಘೋಷಿಸಿದ್ದರು ರಸ್ತೆಗಳಿದವರ ಮೇಲೆ ಬಲ ಪ್ರಯೋಗ ಮಾಡಿದ್ದರಿಂದ ಜನರು ಪೊಲೀಸರ ಮೇಲೆ ಆಕ್ರೋಶಗೊಂಡಿದ್ದಾರೆ. ಹೀಗಾಗಿ ಪೊಲೀಸ್ ಆಯುಕ್ತ ಕಮಲ್ ಪಂತ್‍ರವರು ಸಾರ್ವಜನಿಕರ ಮೇಲೆ ಪೊಲೀಸರು ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಸೂಚಿಸಿದ್ದಾರೆ. ಈ ಬಗ್ಗೆ ಕಮಲ್ ಪಂತ್‍ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಒಂದು ವೇಳೆ ಸಾರ್ವಜನಿಕರು ಲಾಕ್‍ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು …

Read More »

ಜಗತ್ತಿನ ಅತಿ ದೊಡ್ಡ ನೆಟ್ವರ್ಕ್ ಈ ಒಂದು ಪ್ರದೇಶ ದಲ್ಲಿಲ್ಲ…?

ಜಮಖಂಡಿ: ಏರ್ಟೆಲ್ ಹಾಗೂ ಜಿಯೋ. ಜಗತ್ತಿನ ಅತ್ಯಂತ ದೊಡ್ಡ ನೆಟ್ವರ್ಕ್ ಅಂತ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಜಾಹೀರಾತು ಹಾಗೂ ಇನ್ನಿತರ ಮೂಲದ ಮೂಲಕ ಜನರಿಗೆ ತಲುಪಿಸುವ ಹಾಗೆ ದೃಶ್ಯ ಮಾಧ್ಯಮ, ಪ್ರಿಂಟ್ ಮೀಡಿಯಾ, ಹಾಗೂ ಡಿಜಿಟಲ್ ಮೀಡಿಯಾ ಮೂಲಕ ತಮ್ಮ ಪ್ರಚಾರ ಮಾಡ್ತೀರಿ, ಇದನ್ನ ಲಕ್ಷಾಂತರ ಜನ ಕೂಡ ವೀಕ್ಷಣೆ ಮಾಡುತ್ತಾರೆ ಆದ್ರೆ ಇವತ್ತು ಕಳೆದ ವರ್ಷ ದಿಂದ ಶಾಲೆ ಮಕ್ಕಳಿಗೆ ರಜೆ ಕೊಟ್ಟ ಹಾಗೆ ನಮ್ಮ ರಾಜ್ಯ …

Read More »

ಪೆಟ್ರೋಲ್ ಬೆಲೆ ಲೀಟರ್ ಗೆ 100.20 ರೂಪಾಯಿಗೆ ಏರಿಕೆ

ದೆಹಲಿ:ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೋಮವಾರವೂ(ಮೇ 10) ಹೆಚ್ಚಳವಾಗಿದ್ದು, ಮಹಾರಾಷ್ಟ್ರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ. ಕಳೆದ ಒಂದು ವಾರದಲ್ಲಿ ತೈಲ ಬೆಲೆ ಐದು ಬಾರಿ ಏರಿಕೆಯಾಗಿದ್ದು, ಮಹಾರಾಷ್ಟ್ರದ ಪರ್ಭಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100.20 ರೂಪಾಯಿಗೆ ಏರಿಕೆಯಾಗಿದೆ. ಭೋಪಾಲ್ ನಲ್ಲಿ ಪೆಟ್ರೋಲ್ ಬೆಲೆ 99.55 ರೂಪಾಯಿಗೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ರಾಜಸ್ಥಾನದ ಗಂಗಾನಗರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ …

Read More »

ವಾಹನವಿಲ್ಲದೆ ಪರದಾಟ: 7 ಕಿ.ಮೀ ನಡೆದ ತುಂಬು ಗರ್ಭಿಣಿ!

ಕೊಪ್ಪಳ: ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯು ಆಸ್ಪತ್ರೆಗೆ ತೆರಳಲು ಪರದಾಡಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ನರೇಗಲ್ ಗ್ರಾಮದ ಲಕ್ಷ್ಮೀ ಪೂಜಾರ ಅವರು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ಚೆಕಪ್ ಗೆ ಹೋಗಬೇಕಿತ್ತು. ಆದರೆ ಪೊಲೀಸರು ಎಲ್ಲ ವಾಹನಗಳನ್ನ ಹಿಡಿದು ಜಪ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ವಾಹನ ಚಾಲಕರು ಪೊಲೀಸರಿಗೆ ಹೆದರಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆ ತರಲು ನಿರಾಕರಿಸಿದ್ದರು. ಇದರಿಂದ ಗ್ರಾಮದಿಂದ 7 …

Read More »

10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ?: ಸಚಿವ ಈಶ್ವರಪ್ಪ

ಶಿವಮೊಗ್ಗ: ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಗರಂ ಆದ ಸಚಿವ ಕೆ.ಎಸ್.ಈಶ್ವರಪ್ಪ “ಪ್ರಿಂಟ್ ಮಾಡ್ತೀವಾ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ನೀವು ಬಾಯಿಗ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. ಅದಾದ ಮೇಲೆ ನಾವು, ನೀವು ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳೋಣ ಎಂದರು.   ರಾಜ್ಯದ ಜನ …

Read More »

‘ಪ್ರಚಾರ ಮಂತ್ರಿ’ ಮೋದಿ; ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ‘ಪ್ರಚಾರ ಮಂತ್ರಿ’ ಎಂದು ವ್ಯಂಗ್ಯವಾಡಿದೆ. ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, ಬಂಗಾಳದ ಚುನಾವಣೆಗೆ ಹತ್ತಿಪ್ಪತ್ತು ಪ್ರಚಾರ ಸಭೆ ನಡೆಸಿದ ‘ಪ್ರಚಾರ ಮಂತ್ರಿ’ ಮೋದಿಯವರು ಇದುವರೆಗೂ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ನೋಡಲಿಲ್ಲ, ಆಕ್ಸಿಜನ್ ಪೂರೈಕೆ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿಲ್ಲ, ವೈದ್ಯಕೀಯ ತಜ್ಞರ, ವಿಜ್ಞಾನಿಗಳ ಸಭೆ ನಡೆಸಲಿಲ್ಲ, ಪತ್ರಿಕಾಗೋಷ್ಠಿ ನಡೆಸಿ …

Read More »