ರಾಜಕೀಯ ಲಾಭಕ್ಕಾಗಿ ಪರಿಶಿಷ್ಟರ ಪಟ್ಟಿಯಲ್ಲಿ ಬೇರೆ ಜಾತಿಗಳನ್ನ ಸೇರಿಸಿದರೂ ಮೀಸಲಾತಿ ಹೆಚ್ಚಿಸಿ:ಶಾಸಕ ಸತೀಶ ಜಾರಕಿಹೊಳಿ
ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದಾಗ ತಮ್ಮ ರಾಜಕೀಯ ಲಾಭಕ್ಕಾಗಿ ಬೇರೆ ಬೇರೆ ಜಾತಿಗಳನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುತ್ತವೆ.ಆದರೆ ಅದಕ್ಕೆ ಅನುಗುಣವಾಗಿ ಅಲ್ಲಿರುವ ಮೀಸಲಾತಿ ಪ್ರಮಾಣ ಏರಿಕೆ ಮಾಡುವುದಿಲ್ಲ ಇದರಿಂದ ಪರಿಶಿಷ್ಟರಿಗೆ ನಿರಂತರ ಸಮಸ್ಯೆ ಉಂಟಾಗುತ್ತಿದೆ ಆದ್ದರಿಂದ ರಾಜಕೀಯ ಪಕ್ಷಗಳು ಯಾವುದೇ ಜಾತಿಗಳನ್ನು ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸಿದರೆ ಅಲ್ಲಿರುವ ಜಾತಿಗಳ ಜನರಿಗೆ ಅನ್ಯಾಯ ಆಗದೆ ರೀತಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಶುಕ್ರವಾರ ದಂದು ಬೆಳಗಾವಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೂಹನ ದಾಸ ಆಯೋಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ಬೆಳಗಾವಿ ವಿಭಾಗ ಮಟ್ಟದ ಜನರಿಂದ ಅಹವಾಲು ಸ್ವೀಕೃತಿ ಮತ್ತು ಸಮಾಲೋಚನೆ ಸಭೆ ಆಯೋಜಿಸಿತ್ತು.ಈ ಸಭೆಯಲ್ಲಿ ಯಮಕನಮರ್ಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರು ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶೋಷಿತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ ಅವರಿಗೆ ಮನವಿ ಮಾಡಿಕೊಂಡರು.ಹಾಗೂ ರಾಜಕೀಯ ಪಕ್ಷಗಳು ಕೆಲ ಜಾತಿಗಳನ್ನು ಓಲೈಸಿಕೊಳ್ಳಲು ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ ಆದರೆ ಅಲ್ಲಿರುವ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬಗ್ಗೆ ಆಲೋಚನೆ ಮಾಡುವುದಿಲ್ಲ.ಆದ್ದರಿಂದ ಮೊದಲು ಮೀಸಲಾತಿ ಹೆಚ್ಚಿಸುವ ಬಗ್ಗೆ ಆಲೋಚಿಸಿ ನಂತರ ಬೇರೆ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಲ್ಲಿ ಸೇರಿಸಲು ಮುಂದಾಗಬೇಕೆಂದರು.
ಅದೇ ರೀತಿ ಪರಿಶಿಷ್ಟ ಪಂಗಡಕ್ಕೆ ಉದ್ಯೋಗ ಹಾಗೂ ನೌಕರಿಯಲ್ಲಿರುವ ಮೀಸಲಾತಿಯಿಂದ ಅನ್ಯಾಯ ಆಗುತ್ತಿದ್ದು ಪರಿಶಿಷ್ಟ ಪಂಗಡದ ಜನರು ಈಗಿರುವ 3% ಮೀಸಲಾತಿಯನ್ನು ಜನಸಂಖ್ಯೆ ಅನುಗುಣವಾಗಿ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ.ಹಾಗೂ ಹೋರಾಟ ನಡೆಸುತ್ತಿದ್ದಾರೆ ಇದು ನ್ಯಾಯಯುತವಾಗಿದೆ ಬಹಳ ವರ್ಷಗಳಿಂದ ಪರಿಶಿಷ್ಟ ಪಂಗಡದ ಜನರಿಗೆ ಮೀಸಲಾತಿಯಿಂದ ಅನ್ಯಾಯ ಆಗುತ್ತಿದೆ.ಇದನ್ನು ಆಯೋಗ ಸೂಕ್ಷ್ಮವಾಗಿ ಗಮನಿಸಿ ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.