ಬಾಗಲಕೋಟೆ: ಜಮಖಂಡಿಯಲ್ಲಿ ನಕಲಿ ಲೋಕಾಯುಕ್ತನ ಬಂಧನ ಅಧಿಕಾರಿಗಳಿಗೆ ತಾನೇ ಕರೆ ಮಾಡಿ ಕಛೇರಿಗಳಿಗೆ ಭೇಟಿ ನೀಡಿ ಸಾಹೇಬರ ಆಪ್ತ ನಾನು ನಿಮಗೆ ಕರೆ ಮಾಡಿ ಹೇಳಿದ್ದಾರಂತೆ ನನಗೆ ಕಳಿಸಿದ್ದಾರೆ ಮುಂದಿನ ವ್ಯವಸ್ಥೆ ಮಾಡಿ ಎಂದು ಹೇಳಿ ವಂಚಿಸಿ ಮೋಸ ಮಾಡುತ್ತಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ . ನಗರದ ರಮಾನಿವಾಸ ನಿರೀಕ್ಷಣಾ ಮಂದಿರ ಹತ್ತಿರ ನಕಲಿ ಲೋಕಾಯುಕ್ತ ಅಧಿಕಾರಯಾದ ರಾಯಬಾಗ ತಾಲ್ಲೂಕಿನ ಹಾರೂಗೆರಿಯ (ಅಪ್ಪು ) ಆಪಯ್ಯಾ. ಬಸಯ್ಯ. ಹಿರೇಮಠ ( 30 ) ಬಂಧಿತ ಆರೋಪಿಯಾಗಿದ್ದು , ಇತನು ಹಾಸ್ಟೆಲ್ ವಾರ್ಡನ , ಲೋಕಾಯುಕ್ತ ಇಲಾಖೆ ಯಲ್ಲಿ ನೌಕರಿ ಮಾಡುತ್ತಿದಾಗಿ ಹೇಳಿಕೊಳುತಿದ್ದ ಈ ಬಗ್ಗೆ ಈ ಮೊದಲಿನಿಂದ ಅನುಮಾನಗೊಂಡ ಪೋಲಿಸರು ಇತನ ಮೇಲೆ ನಿಗಾ ಇಟ್ಟಿದರು . ಸರಕಾರಿ ನೌಕರರನ್ನು ಹೆದರಿಸಿ ಹಣ ಸುಲಿಗೆ ಮಾಡಿ ಅವರ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ . ಐಬಿಗೆ ಬೇಟಿ ನೀಡಿ ನನ್ನನ್ನು ಲೋಕಾಯುಕ್ತರು ಕಳಸಿದ್ದು ರೂಮ್ ಕೊಡಲು ತಿಳಿಸಿದ್ದಾರೆ ಎಂದು ಎರು ಧ್ವನಿಯಲ್ಲಿ ಮಾತಾನಾಡುತ್ತಾ . ಇತನ ವರ್ತನೆ ಬಗ್ಗೆ ಅನುಮಾನ ಗೊಂಡು ಸ್ಥಳಿಯ ಪೋಲಿಸ ಠಾಣೆಗೆ ಮಾಹಿತಿ ನೀಡುತ್ತಿದಂತೆ ಕಾರ್ಯಪ್ರವೃತ್ತರಾದ psi ಗೋವಿಂದಗೌಡ ಪಾಟೀಲ ಸಿಬ್ಬಂದಿಗಳಾದ ಮಲ್ಲು ಕೋಲಾರ , ಶೇಗುಣಸಿ , ಶಿವಾನಂದ ರಾಠೋಡ ಇತರರಿದ್ದ ಸಿಬ್ಬಂದಿ ತಂಡ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಶಿವಮೊಗ್ಗ ಜಿಲ್ಲೆ ಹಾಗು ಹುಕ್ಕೇರಿ , ಹಿಡಕಲ್ ಡ್ಯಾಂಗಳಲ್ಲಿ ಸೇರಿದಂತೆ ವಿವಿಧ ನಗರಗಳಲ್ಲಿ ವಂಚಿಸಿರುವ ಬಗ್ಗೆ ಮಾಹಿತಿ ಇದ್ದು ತನಿಖೆ ಕೈ ಕೊಂಡಿದ್ದು ವಂಚಿಸಿರುವ ಬಗ್ಗೆ . ಇನ್ನಷ್ಟು ಮಾಹಿತಿ ತಿಳಿದುಬರಲಿದೆ .ಎಂದು ಜಮಖಂಡಿ ಶಹರ ಠಾಣೆಯ Psi ಗೋವಿಂದಗೌಡ ಪಾಟೀಲ್ ತಿಳಿಸಿದ್ದಾರೆ
