Breaking News
Home / Laxminews 24x7 (page 3669)

Laxminews 24x7

‘ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೆವೆ

ಬೆಂಗಳೂರು,ಮಾ.13- ಬೆಂಗಳೂರು ನಗರ ಸೇರಿದಂತೆ ಯಾವುದೇ ಪ್ರದೇಶಕ್ಕೂ ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.  ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಜಲಸಂಪನ್ಮೂಲ ಇಲಾಖೆಯ ಸಿವಿಲ್ ಇಂಜಿನಿಯರಿಂಗ್ ಸಂಘದ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ತಮ ಮಳೆಯಾಗಿದೆ. ಎಲ್ಲ ಜಲಾಶಯಗಳಲ್ಲೂ ಸಾಕಷ್ಟು ನೀರಿದೆ. ಆ ನೀರನ್ನು ಕಾಪಾಡಿಕೊಂಡು ಸರಿಯಾಗಿ ನಿರ್ವಹಣೆ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ …

Read More »

ಕೊರೊನಾ ಭೀತಿ- ಕೋಳಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ನಷ್ಟ

ಕೊರೊನಾ ಭೀತಿ- ಕೋಳಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ನಷ್ಟ ಬೆಂಗಳೂರು: ವಿಶ್ವದೆಲ್ಲೆಡೆ ಹಬ್ಬಿರುವ ಕೊರೊನಾ ಭೀತಿಗೆ ರಾಜ್ಯದ ಕೋಳಿ ಸಾಕಾಣಿಕಾ ರೈತರು, ಉದ್ಯಮಿಗಳು ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಫೆಬ್ರವರಿ ತಿಂಗಳಿಂದ ಇಂದಿನವರೆಗೆ ಒಂದು ಸಾವಿರ ಕೋಟಿ ರೂಪಾಯಿ ಕೋಳಿ ಉದ್ಯಮದಲ್ಲಿ ನಷ್ಟವಾಗಿದೆ ಎಂದು ಕರ್ನಾಟಕ ಸಹಕಾರಿ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಒಟ್ಟು 15 ಸಾವಿರ ರೈತರು ಕೋಳಿ ಸಾಕಾಣಿಕೆ ಮಾಡುತ್ತಿದ್ದು, 15 …

Read More »

ಕೊರೊನಾ ಸೋಂಕಿನಿಂದ ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಶ್ರೀ ಶರಣಬವೇಶ್ವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

ಕಲಬುರಗಿ: ಕೊರೊನಾ ಸೋಂಕಿನಿಂದ 76 ವರ್ಷದ ವೃದ್ಧ ಮೃತಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ಕಲ್ಯಾಣ ಕರ್ನಾಟಕದ ಸುಪ್ರಸಿದ್ಧ ಶ್ರೀ ಶರಣಬವೇಶ್ವರ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಕೆಮ್ಮು, ಜ್ವರ ಇದ್ದರೆ ಶ್ರೀ ಶರಣಬಸವೇಶ್ವರ ಜಾತ್ರೆಗೆ ಬರಬೇಡಿ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ಈ ಮೊದಲು ಹೇಳಿದ್ದರು. ಆದರೆ ವೃದ್ಧ ಮೃತಪಟ್ಟಿದ್ದು ಕೊರೊನಾ ವೈರಸ್‍ನಿಂದಲೇ ಎಂದು ಲ್ಯಾಬ್ ರಿಪೋರ್ಟ್ ಬರುತ್ತಿದ್ದಂತೆ ಜಿಲ್ಲೆಯಲ್ಲಿ ಹೈಲರ್ಟ್ ಗೆ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಜಾತ್ರೆಯ ಆಯೋಜಕರು ಕೂಡ …

Read More »

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸ್ತಿದ್ದ ಯುವಕನನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಪೇದೆಗೆ ಹಲ್ಲು ಮುರಿಯುವಂತೆ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು: ಕಾನೂನು ಪಾಲನೆ ಮಾಡಿ ಅನ್ನೋದೆ ತಪ್ಪಾಗಿ ಹೋಗಿದೆ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸ್ತಿದ್ದ ಯುವಕನನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಪೇದೆಗೆ ಹಲ್ಲು ಮುರಿಯುವಂತೆ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.ಹೆಲ್ಮೆಟ್ ಧರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೇದೆ ಮೇಲೆ ಹಲ್ಲೆ ಮಾಡಿದ್ದ ವಿಜಯ್ ತರುಣ್ (21) ಬಂಧನ ಮಾಡಲಾಗಿದೆ. ಮಂಗಳವಾರ ಸಂಜೆ 5:30 ರ ಸುಮಾರಿಗೆ ತನ್ನ ಗೆಳೆಯನೊಂದಿಗೆ ಬರುತ್ತಿದ್ದ ಆರೋಪಿ ವಿಜಯ್ ತರುಣ್ ನನ್ನ ಪೊಲೀಸರು ತಡೆದಿದ್ದರು.ಈ ವೇಳೆ ಹೆಲ್ಮೆಟ್ …

Read More »

ವೀಸಾ ನಿರ್ಬಂಧ : ಏ.15ರ ವರೆಗೆ ವಿದೇಶಿ ಆಟಗಾರರು ಅಲಭ್ಯ, ಐಪಿಎಲ್ ಮೇಲೆ ಅನಿಶ್ಚಿತತೆ ಕಾರ್ಮೋಡ

ವೀಸಾ ನಿರ್ಬಂಧ : ಏ.15ರ ವರೆಗೆ ವಿದೇಶಿ ಆಟಗಾರರು ಅಲಭ್ಯ, ಐಪಿಎಲ್ ಮೇಲೆ ಅನಿಶ್ಚಿತತೆ ಕಾರ್ಮೋಡ ಮುಂಬೈ/ನವದೆಹಲಿ – ಕೊರೋನಾ ವೈರಸ್ ಕಾಟದಿಂದಾಗಿ ಕೇಂದ್ರ ಸರ್ಕಾರವು ಏ.15ರ ವರೆಗೆ ವೀಸಾ ನಿರಾಕರಿಸಿರುವ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಕ್ರಿಕೆಟ್ ಪಂದ್ಯಾವಳಿ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಏ.15ರ ವರೆಗೆ ವಿವಿಧ ದೇಶಗಳ ಕ್ರಿಕೆಟ್ ಪಟುಗಳು ಐಪಿಎಲ್‍ಗೆ ಅಲಭ್ಯವಾಗಿರುವುದರಿಂದ ಈ ಪಂದ್ಯಾವಳಿ ನಡೆಯುವುದು …

Read More »

2 ತಿಂಗಳೊಳಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ

ಬೆಂಗಳೂರು : ರಾಜ್ಯದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯರ ಕೊರತೆಯನ್ನು ಎರಡು ತಿಂಗಳೊಳಗಾಗಿ ನಿವಾರಣೆ ಮಾಡುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.  ವಿಧಾನಸಭೆಯಲ್ಲಿ ಶಾಸಕರಾದ ಎ.ಟಿ.ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಶ್ರೀರಾಮುಲು, ಈ ಮೊದಲು ಲೋಕಸೇವಾ ಆಯೋಗದ ಮೂಲಕ ವೈದ್ಯg ನೇಮಕಾತಿಯಾಗುತ್ತಿತ್ತು. ಸಚಿವರು, ಶಾಸಕರ ಒತ್ತಾಯದ ಮೆರೆಗೆ ನೇರ ನೇಮಕಾತಿಗೆ ಮುಖ್ಯಮಂತ್ರಿ ಅವರು ಅವಕಾಶ ಮಾಡಿಕೊಟ್ಟಿದ್ದಾರೆ ಅಲ್ಲದೆ ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲು ಜಿಲ್ಲಾ …

Read More »

ತಮಿಳುನಾಡು ಸಿಎಂ ಆಗುತ್ತಾರಾ ರಜನಿಕಾಂತ್? ಅವರೇ ಕೊಟ್ಟ ಉತ್ತರ

ತಮಿಳುನಾಡು ಸಿಎಂ ಆಗುತ್ತಾರಾ ರಜನಿಕಾಂತ್? ಅವರೇ ಕೊಟ್ಟ ಉತ್ತರ ತಮ್ಮ ರಾಜಕೀಯ ಭವಿಷ್ಯ ಸಂಬಂಧಿಸಿದಂತೆ ಮಾತನಾಡಿದ ರಜನಿಕಾಂತ್ ಸಿಹಿ ಸುದ್ದಿಯನ್ನು ನೀಡಿದರಾದರೂ ತಾವು ”ತಮಿಳುನಾಡಿನ ಸಿಎಂ ಆಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ತಲೈವಾ ರಜನೀಕಾಂತ್ ಏನೋ ಹೇಳುತ್ತಾರೆ ಎಂದು ಕಾದಿದ್ದ ಅಭಿಮಾನಿಗಳಿಗೆ ಮಿಶ್ರ ಭಾವವನ್ನು ರಜನಿಕಾಂತ್ ನೀಡಿದ್ದಾರೆ. ಹೌದು, ತಮ್ಮ ರಾಜಕೀಯ ಭವಿಷ್ಯದ ಸುದ್ದಿಯನ್ನು ಖಚಿತಪಡಿಸಿದ ತಲೈವಾ, ತಾವು ತಮಿಳುನಾಡಿನ ಮುಂದಿನ ಸಿಎಂ ಆಗುವ ಆಸೆ ಹೊಂದಿಲ್ಲ ಎಂದರು. ಆದರೆ …

Read More »

ದೊಡ್ಡ ಸ್ಟಾರ್ ನಟನೊಂದಿಗೆ ತೆರೆ ಮೇಲೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾರಿ ಮೊತ್ತವನ್ನೇ ಕೇಳಿದ್ದಾರೆ.

ದೊಡ್ಡ ಸ್ಟಾರ್ ನಟನೊಂದಿಗೆ ತೆರೆ ಮೇಲೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ತೆಲುಗಿನ ದೊಡ್ಡ ನಟ ಬಾಲಕೃಷ್ಣ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ನಟಿಯನ್ನು ಈ ಬಗ್ಗೆ ಸಂಪರ್ಕಿಸಿದಾಗ ಭಾರಿ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಇದು ನಿರ್ಮಾಪಕರ ಹುಬ್ಬೇರುವಂತೆ ಮಾಡಿದೆ. ಭಾರಿ ಮೊತ್ತವನ್ನೇ ಕೇಳಿದ್ದಾರೆ.ಹಿರಿಯ ನಟ ಬಾಲಕೃಷ್ಣ ಗೆ ನಾಯಕಿಯಾಗಿ ನಟಿಸಲು ತಮನ್ನಾ ಭಾಟಿಯಾ ಮೂರು ಕೋಟಿ ರೂಪಾಯಿ ಸಂಭಾವನೆ …

Read More »

ಜನರು ಒಂದೆಡೆ ಗುಂಪು ಸೇರುವಂತಿಲ್ಲ: ಬಿಬಿಎಂಪಿ ಆದೇಶ

ಬೆಂಗಳೂರು, ಮಾ.12: ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಯಾವುದೇ ಕಾರಣಕ್ಕೂ ಜನ ಒಂದೆಡೆ ಗುಂಪು ಸೇರುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳು, ಬಾರ್ ಆಯಂಡ್ ರೆಸ್ಟೊರೆಂಟ್, ಹೊಟೇಲ್, ಕಲ್ಯಾಣ ಮಂಟಪ, ಚಿತ್ರಮಂದಿರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನ ಒಟ್ಟಾಗಿ ಗುಂಪು ಸೇರಬಾರದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದಾರೆ. ಹಾಗೆಯೇ ಪೊಲೀಸರ ಅನುಮತಿ ಇಲ್ಲದೆ, ಎನ್‌ಒಸಿ ಪ್ರತಿ ಪಡೆಯದೆ …

Read More »

ನಿಖಿಲ್ ಮದುವೆಗೂ ಕೊರೊನಾ ಎಫೆಕ್ಟ್, ಮದುವೆ ಶಿಫ್ಟ್?

ಕೊರೊನಾ ಎಫೆಕ್ಟ್ ಹಿನ್ನೆಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಆಯೋಜಿಸಿದ್ದ ನಿಖಿಲ್ ಮದುವೆಯನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಹೆಚ್ಡಿಕೆ ಕುಟುಂಬ ತೀರ್ಮಾನಿಸಿದೆ ಎನ್ನಲಾಗಿದೆ. ರಾಮನಗರದ ಸುಮಾರು 60 ಎಕರೆ ಜಮೀನಿನಲ್ಲಿ ಈಗಾಗಲೇ ಸಿದ್ಧತೆ ನಡೆದಿತ್ತು. ಜಾನಪದ ಲೋಕದ ಜಮೀನಿನಲ್ಲಿ ಈಗಾಗಲೇ 6 ಕೊಳವೆಬಾವಿ ಕೊರೆಸಲಾಗಿತ್ತು ಆದರೆ ಕೊರೊನಾ ಭೀತಿಯಿಂದ ಸ್ಥಳ ಬದಲಾವಣೆ ಮಾಡುವ ಸಂಭವ ಇದೆ. ದೇವೆಗೌಡ ಅವರೊಂದಿಗೆ ಕುಮಾರಸ್ವಾಮಿ ಅವರು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರಂತೆ. ಈ ಬಗ್ಗೆ …

Read More »