Breaking News
Home / Laxminews 24x7 (page 3668)

Laxminews 24x7

ಕೊರೊನಾ ಎಫೆಕ್ಟ್ – ಸಿಇಟಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ದೇಶದಲ್ಲಿ ಕೊರೊನಾ ಎಫೆಕ್ಟ್ ಜಾಸ್ತಿಯಾದ ಕಾರಣ ಮುಂದಿನ ತಿಂಗಳು ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಏಪ್ರಿಲ್ 22 ರಿಂದ 24ವರೆಗೆ ಸಿಇಟಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಕೊರೊನಾ ವೈರಸ್ ದೇಶದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದಿನೇ ದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಇಂದು ಕರ್ನಾಟಕ ಪರೀಕ್ಷಾ …

Read More »

100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು

ಧಾರವಾಡ: ಕೊರೊನಾ ಭೀತಿಯಿಂದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಕರ್ತವ್ಯದ ಮಧ್ಯೆಯೂ ಅನೇಕ ಪೊಲೀಸರು ಊಟ ಹಾಕಿ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗದಿಂದ ರಾಜಸ್ಥಾನಕ್ಕೆ ನಡೆದುಕೊಂಡೇ ಹೊರಟಿದ್ದ ಅನೇಕ ಕಾರ್ಮಿಕರು ಹಾಗೂ ಕಾರಿನಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಕುಟುಂಬಗಳಿಗೆ ತೆಗೂರ ಬಳಿ ಖುದ್ದು ಎಸ್‍ಪಿಯೇ ಊಟ ಬಡಿಸಿ ಎಲ್ಲರ ಉಪಚಾರ ಮಾಡಿದರು. ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಟೋಲ್ ಗೇಟ್‍ನಲ್ಲಿ ಕೂಲಿ …

Read More »

ಕುರಿ ಮೇಯಿಸಲು ಅವಕಾಶ ಕಲ್ಪಿಸಬೇಕು: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರಿ ಮೇಯಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಬಳಿ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಕುರಿ ಮೇಯಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. “ಕುರಿಗಳಿಂದ ಕೊರೊನಾ ಸೋಂಕು ತಗಲಲಿದೆ ಎಂಬ ತಪ್ಪು ಕಲ್ಪನೆಯಿಂದ ಸಿರಾ, ಚಿಕ್ಕನಾಯ್ಕನಹಳ್ಳಿ, ಹಿರಿಯೂರು, ಮಧುಗಿರಿ, ಹೊಸದುರ್ಗ ಕಡೆ ಜನ ಕುರಿಗಳನ್ನು …

Read More »

ಜನರ ಓಡಾಟಕ್ಕೆ ಬ್ರೇಕ್ ಹಾಕಲು ಡ್ರೋಣ್ ಬಳಕೆ- ರಾಯಚೂರು ಪೊಲೀಸರ ಹೊಸ ಪ್ರಯತ್ನ

ರಾಯಚೂರು: ಎಷ್ಟು ಹೇಳಿದರೂ ಜನ ಹೊರಗಡೆ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಜನರ ಓಡಾಟ ತಡೆಯಲು ರಾಯಚೂರಿನಲ್ಲಿ ಡ್ರೋಣ್ ಬಳಕೆ ಮಾಡಲಾಗುತ್ತಿದೆ. ರಾಯಚೂರು ಪೊಲೀಸರಿಂದ ವಿನೂತನ ಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಬಡಾವಣೆ, ಓಣಿಗಳಲ್ಲಿ ಜನ ಗುಂಪುಗುಂಪಾಗಿ ಸೇರುವುದನ್ನ ತಡೆಯಲು ಡ್ರೋಣ್ ಬಳಕೆ ಮಾಡಲಾಗುತ್ತಿದೆ. ಡ್ರೋಣ್ ಶಬ್ದಕ್ಕೆ ಹೆದರಿ ಜನ ಚದುರಿ ಹೋಗುತ್ತಿದ್ದಾರೆ. ಹೋಗದಿರುವವರನ್ನ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ. ಜಿಲ್ಲೆಯಲ್ಲಿ 50 ಚೆಕ್ ಪೋಸ್ಟ್ ಮಾಡಿದ್ದರೂ ಜನ ಸಂದಣಿ ನಿಯಂತ್ರಣವಾಗುತ್ತಿರಲಿಲ್ಲ. ಕೊರೊನಾ …

Read More »

ಕಿಮ್ಸ್ ಸಿಬ್ಬಂದಿಯಿಂದ್ಲೇ ಮಾಸ್ಕ್ ಕಳ್ಳತನ

ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಬ್ಬಂದಿಯೇ ಮಾಸ್ಕ್ ಬಾಕ್ಸ್ ಅನಧಿಕೃತವಾಗಿ ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಿಮ್ಸ್ ಸಿಬ್ಬಂದಿ ಫಾತಿಮಾ ಸೈಯದ್ ಎಂಬವರೇ ಕಿಮ್ಸ್ ಆಸ್ಪತ್ರೆಯಿಂದ ಮಾಸ್ಕ್ ಬಾಕ್ಸ್ ಕಳ್ಳತನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ ನೋಟಿಸ್ ನೀಡಿದೆ. ಮೇಲಾಧಿಕಾರಿ ಅನುಮತಿಯಿಲ್ಲದೇ ಮುಖ್ಯ ಔಷಾಧಾಲಯದಿಂದ 100 ಮಾಸ್ಕ್ ಇದ್ದ ಬಾಕ್ಸ್ ತೆಗೆದುಕೊಂಡು ಹೊಗಿದ್ದ ಫಾತಿಮಾ. ಕಿಮ್ಸ್ ಅಧಿಕಾರಿಗಳು ಕೇಳಿದ್ರೆ …

Read More »

ಲಾಕ್‍ಡೌನ್ ನಿರ್ಧಾರದಿಂದ ಕೊರೊನಾ ನಿಯಂತ್ರಣವಾಗುತ್ತಾ? ಗ್ರಾಫ್ ಏನು ಹೇಳುತ್ತೆ?

ಬೆಂಗಳೂರು: 21 ದಿನಗಳ ಲಾಕ್‍ಡೌನ್ ನಿಂದ ಕೊರೊನಾ ನಿಯಂತ್ರಿಸಬಹುದೇ? ಕೊರೊನಾ ನಿಯಂತ್ರಣವಾಗದೇ ಇದ್ದರೆ ಮತ್ತೆ ಲಾಕ್‍ಡೌನ್ ಇರುತ್ತಾ ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಣ್ಣ ಶುಭ ಸುದ್ದಿ ಸಿಕ್ಕಿದೆ. ಎರಡು ದಿನಗಳಿಂದ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ. ಸಾಧಾರಣವಾಗಿ ಕೊರೊನಾ ಕಂಡು ಬಂದ ಮೊದಲ ಎರಡು ವಾರದಲ್ಲಿ ಹರಡುವ ತೀವ್ರತೆ ಕಡಿಮೆ ಇರುತ್ತದೆ. ಮೂರು, ನಾಲ್ಕು ವಾರದಲ್ಲಿ ಸಂಖ್ಯೆ ದುಪ್ಪಟ್ಟು ಆಗುತ್ತದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಹೋಗುತ್ತದೆ. ಶುಭ …

Read More »

ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ

ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ ನೊವೆಲ್ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಿಂದ ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಾಗೂ ಈ ಹಿಂದೆ ಇದ್ದ ಕಳ್ಳಭಟ್ಟಿ ಕೇಂದ್ರಗಳ ಅಡ್ಡಾಗಳಾದ ದೇಶನೂರ, ಹೊಗರ್ತಿ,ಕೊಳದೂರ, ಮೊಹರೆ,ಸುತಗಟ್ಟಿ ವಟಬಾಳ ಹಳ್ಳಿಗಳ ಮೇಲೆ ಮೇಲಿಂದ ಮೇಲೆ ದಾಳಿ ಮಾಡಲಾಗುತ್ತಿದೆ. ಎಂದು ಬೈಲಹೊಂಗಲ ಅಬಕಾರಿ ನೀರಿಕ್ಷಕರಾದ ರವಿ.ಎಂ ಮುರಗೋಡ ಇವರು ತಿಳಿಸಿದರು. ದಾಳಿಯ ವಿವರಣೆ:- ಮಾರ್ಚ್ ೨೪ ರಂದು ಹೊಗರ್ತಿ ಕ್ರಾಸ್ ಬಳಿ …

Read More »

ಓರ್ವನಿಂದ 9 ಮಂದಿಗೆ ಕೊರೊನಾ – ನಂಜನಗೂಡು ಸ್ತಬ್ಧ, ಮನೆಗಳಿಗೆ ಆಹಾರ ವಿತರಣೆ

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 12ಕ್ಕೆ ಏರಿದ್ದು, ಒಂದೇ ದಿನದಲ್ಲಿ 5 ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ನಂಜನಗೂಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಎರಡನೇ ದಿನವೂ ನಾಕಾಬಂದಿ ಮುಂದುವರೆದಿದೆ. ನಂಜನಗೂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮೈಸೂರು-ಊಟಿ, ಕೇರಳ ಮತ್ತು ತಮಿಳುನಾಡು ಸಂಪರ್ಕ ಕಲ್ಪಿಸುವ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ನಾಲ್ಕು ಕಡೆಯಿಂದ ಸಂಪರ್ಕಿಸೋ ಎಲ್ಲಾ ಮುಖ್ಯ ರಸ್ತೆಗಳನ್ನು ಸಹ ಬಂದ್ ಮಾಡಲಾಗಿದೆ. ಪಾಸ್ ಹೊಂದಿರುವ …

Read More »

ಸಾತಪುತೆ ಔಷಧಿ ಅಂಗಡಿಯಲ್ಲಿ ಕೊರೋನಾ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೇರಿಸುವ ಕೆಲಸ

ಸಾತಪುತೆ ಔಷಧಿ ಅಂಗಡಿಯಲ್ಲಿ ಕೊರೋನಾ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೇರಿಸುವ ಕೆಲಸ

Read More »

ಪ್ರಧಾನಿ ಹೆಸರಲ್ಲಿ ನಕಲಿ ಖಾತೆ – ಕೊರೊನಾ ಸೋಂಕಿತರ ನೆರವಿಗೆ ಸ್ವೀಕರಿಸುತ್ತಿರೋ ದೇಣಿಗೆ ಲಪಟಾಯಿಸಲು ಯತ್ನ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಾದರಿಯಲ್ಲೇ ನಕಲಿ ಖಾತೆ ಸೃಷ್ಟಿಸಿ ಹಣ ಕೊಳ್ಳೆ ಹೊಡೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಕೊರೊನಾ ಸೋಂಕು ಪೀಡಿತರ ನೆರವುಗಾಗಿ ಸಾರ್ವಜನಿಕರು ದೇಣಿಗೆ ನೀಡುವಂತೆ …

Read More »