ದೊಡ್ಡ ಸ್ಟಾರ್ ನಟನೊಂದಿಗೆ ತೆರೆ ಮೇಲೆ ಸೊಂಟ ಬಳುಕಿಸಲು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಬಹುಭಾಷಾ ನಟಿ ತಮನ್ನಾ ಭಾಟಿಯಾರನ್ನು ತೆಲುಗಿನ ದೊಡ್ಡ ನಟ ಬಾಲಕೃಷ್ಣ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ನಟಿಯನ್ನು ಈ ಬಗ್ಗೆ ಸಂಪರ್ಕಿಸಿದಾಗ ಭಾರಿ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಇದು ನಿರ್ಮಾಪಕರ ಹುಬ್ಬೇರುವಂತೆ ಮಾಡಿದೆ. ಭಾರಿ ಮೊತ್ತವನ್ನೇ ಕೇಳಿದ್ದಾರೆ.ಹಿರಿಯ ನಟ ಬಾಲಕೃಷ್ಣ ಗೆ ನಾಯಕಿಯಾಗಿ ನಟಿಸಲು ತಮನ್ನಾ ಭಾಟಿಯಾ ಮೂರು ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರಂತೆ. ಅಷ್ಟು ಹಣ ಕೊಟ್ಟರಷ್ಟೆ ಬಾಲಕೃಷ್ಣ ಗೆ ನಾಯಕಿಯಾಗಿ ನಟಿಸ್ತೀನಿ ಎಂದು ಷರತ್ತು ಹಾಕಿದ್ದಾರೆ ತಮನ್ನಾ
Pic Credits to one india
.ಆದರೆ ಇದರ ಒಳಕತೆ ಬೇರೆಯೇ ಇದೆ. ಸರಿ ಸುಮಾರು 60 ವರ್ಷ ವಯಸ್ಸಿನ ಬಾಲಕೃಷ್ಣ ಜೊತೆ ನಾಯಕಿಯಾಗಿ ನಟಿಸಲು ಯುವ ನಟಿಯರು ಒಪ್ಪಲಿಲ್ಲವಂತೆ. ಹಾಗಾಗಿ ತಮನ್ನಾ ರನ್ನು ಸಂಪರ್ಕಿಸಿದಾಗ ಆಕೆಯೂ ಮೊದಲಿಗೆ ನಟಿಸುವುದಿಲ್ಲವೆಂದು ಹೇಳಿದ್ದಾರೆ.
ಆದರೆ ನಿರ್ಮಾಪಕರು ಬಲವಂತ ಮಾಡಿದಾಗ, ದೊಡ್ಡ ಮೊತ್ತದ ಬೇಡಿಕೆಯನ್ನು ಇಟ್ಟಿದ್ದಾರೆ. ಹಣ ಹೆಚ್ಚಾಯ್ತೆಂದಾದರೂ ತನ್ನನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳುವುದು ಬೇಡ ಎಂಬ ತಂತ್ರ ತಮನ್ನಾದು.
ತಮನ್ನಾ ಭಾಟಿಯಾ ಸಾಮಾನ್ಯವಾಗಿ ಸಿನಿಮಾ ಒಂದಕ್ಕೆ 1.50-2 ಕೋಟಿ ಸಂಭಾವನೆ ಕೇಳುತ್ತಾರೆ, ಆದರೆ ಬಾಲಕೃಷ್ಣ ಅವರ ಸಿನಿಮಾದಲ್ಲಿ ನಟಿಸಲು ಮೂರು ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
