Breaking News
Home / Laxminews 24x7 (page 3700)

Laxminews 24x7

ಅಲಮಟ್ಟಿ ಎತ್ತರ ಹೆಚ್ಚಿಸಲು ನಾಳೆ ಜಲಸಂಪನ್ಮೂಲ ಸಚಿವರ ದೆಹಲಿ ಚಲೋ….!!!

ಬೆಳಗಾವಿ- ಕಳಸಾ ಬಂಡೂರಿ ನಾಲಾ ಯೋಜನೆಯ ಕಾನೂನು ತೊಡಕುಕುಗಳು ನಿವಾರಣೆಯಾದ ಬಳಿಕ ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಈಗ ಅಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ   ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹಣಾ ಮಟ್ಟವನ್ನು ಏರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಾಳೆ ದಿ. 17.03.2020 ಮಂಗಳವಾರ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ ರಮೇಶ್ ಜಾರಕಿಹೊಳಿಯವರು ಕೇಂದ್ರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು …

Read More »

ರೋನಾ ಸೊಂಕು ಹರಡದಂತೆ ಪಾಲಿಕೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಬೆಳಗಾವಿಯ ,ಬಿಗ್ ಬಝಾರ್,ರಿಲಾಯಿನ್ಸ್ ಡಿ ಮಾರ್ಟ್ ಸೇರಿದಂತೆ ಇನ್ನಿತರ ಬೃಹತ್ತ್ ಮಳಿಗೆಗಳನ್ನು ಮುಚ್ಚಲು ಪಾಲಿಕೆ ಆದೇಶಿಸಿದ್ದು ಮದ್ಯಾಹ್ನ ಕಾರ್ಯಾಚರಣೆ ಆರಂಭವಾಗಲಿದೆ

ಬೆಳಗಾವಿ- ಕರೋನಾ ಸೊಂಕು ಹರಡದಂತೆ ಪಾಲಿಕೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು ಬೆಳಗಾವಿಯ ,ಬಿಗ್ ಬಝಾರ್,ರಿಲಾಯಿನ್ಸ್ ಡಿ ಮಾರ್ಟ್ ಸೇರಿದಂತೆ ಇನ್ನಿತರ ಬೃಹತ್ತ್ ಮಳಿಗೆಗಳನ್ನು ಮುಚ್ಚಲು ಪಾಲಿಕೆ ಆದೇಶಿಸಿದ್ದು ಮದ್ಯಾಹ್ನ ಕಾರ್ಯಾಚರಣೆ ಆರಂಭವಾಗಲಿದೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು (SI) ತಂಡ ರಚಿಸಲಾಗಿದ್ದು ಈ ತಂಡ ಮದ್ಯಾಹ್ನ ದಿಂದ ಬೆಳಗಾವಿಯ ,ಡಿ ಮಾರ್ಟ್ ಮಳಿಗಳನ್ನು ,ರಿಲಾಯಿನ್ಸ ಮಳಿಗೆ,ಬಿಗ್ ಬಝಾರ್ ,ಸೇರಿದಂತೆ ಜನ ಹೆಚ್ವಿನ ಸಂಖ್ಯೆಯಲ್ಲಿ ಸೇರುವ ನಗರದ ದೊಡ್ಡ ದೊಡ್ಡ …

Read More »

ಕೊರೊನಾ ಹೆಸ್ರಲ್ಲಿ ಹುಟ್ಟಿಕೊಂಡಿದ್ದಾರೆ ನಕಲಿ ಅಧಿಕಾರಿಗಳು:ಐಡಿ ಇಲ್ಲದೆ ಮನೆಗೆ ಬಂದ್ರೆ ಮಾಹಿತಿ ಕೊಡಬೇಡಿ

ಉಡುಪಿ: ಕಿಲ್ಲರ್ ಕೊರೊನಾ ವೈರಸ್ ಇಡೀ ವಿಶ್ವವನ್ನು ನಲುಗಿಸಿಬಿಟ್ಟಿದೆ. ಮದ್ದೇ ಇಲ್ಲದ ಕೊರೊನಾ ವೈರಸ್ಸಿಗೆ ದೇಶದ ಜನ ಹೈರಾಣಾಗಿ ಹೋಗಿದ್ದಾರೆ. ರಾಜ್ಯದ ಜನಕ್ಕೆ ಕೊರೊನಾ ವೈರಸ್ ಒಂದು ಕಡೆಯಿಂದ ಕಿರುಕುಳ ಕೊಡುತ್ತಿದ್ದರೆ, ಉಡುಪಿ ಜಿಲ್ಲೆಯಲ್ಲಿ ಫೇಕ್ ಆಫೀಸರ್ಸ್ ಹುಟ್ಟಿಕೊಂಡಿದ್ದಾರೆ. ನಾವು ಕೊರೊನಾ ವೈರಸ್ ಪತ್ತೆ ಮಾಡುವವರು ಮತ್ತು ಅಂಕಿ ಅಂಶವನ್ನು ಸಂಗ್ರಹ ಮಾಡುವವರು ಎಂದು ಉಡುಪಿ ನಗರದ ಕೆಲ ವಾರ್ಡ್ ಗಳ ಮನೆಗಳಿಗೆ ನಕಲಿ ಆಫೀಸರ್ ಗಳು ಹೋಗುತ್ತಿದ್ದಾರೆ. ಮನೆಗಳಿಗೆ …

Read More »

ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ, ಸುಳ್ಳು ಸುದ್ದಿ ಹರಡಿಸಬೇಡಿ: ವೈದ್ಯರ ಮನವಿ

ಬೆಳಗಾವಿ/ಚಿಕ್ಕೋಡಿ: ವೈದ್ಯ ಓರ್ವರಿಗೆ ಕೊರೊನಾ ರೋಗ ಬಂದಿದೆ ಎಂಬ ಗಾಳಿ ಸುದ್ದಿ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಎಲ್ಲ ವೈದ್ಯರು ಪತ್ರಿಕಾಗೋಷ್ಠಿ ನಡೆಸಿ ನಮ್ಮಲ್ಲಿ ಯಾರಿಗೂ ಕೊರೊನಾ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಐಎಂಎ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೈದ್ಯರು, ಚಿಕ್ಕೋಡಿಯ ಯಾವುದೇ ವೈದ್ಯರಿಗೆ ಕೊರೊನಾ ಬಂದಿಲ್ಲ. ಈ ಬಗ್ಗೆ ಯಾರು ಸುಳ್ಳು ಸುದ್ದಿ ಹರಡದಂತೆ …

Read More »

ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು: ಇಂದೋರ್ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕಿಂತಲೂ ಉತ್ತಮ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಬೆಂಗಳೂರಿನ ಸ್ವಚ್ಛತೆ ಕಾಪಾಡಿಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಮಾದರಿ ಯೋಜನಡೆಯಡಿ ಪ್ರಾಯೋಗಿಕವಾಗಿ ಮತ್ತಿಕೆರೆ ವಾರ್ಡಿನಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಡಾ. ಅಶ್ವತ್ಥನಾರಾಯಣ ಮಾತನಾಡಿದರು. ಸ್ವಚ್ಛತೆಯ ದೃಷ್ಟಿಯಿಂದ ಪ್ರಮುಖ ಕಾರ್ಯಕ್ರಮವಾದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದು ಸಾರ್ವಜನಿಕರು ಸೇರುವ ಕಾರ್ಯಕ್ರಮವಲ್ಲ ಎಂದು ಮೊದಲೇ ಸೂಚನೆ …

Read More »

ಕೊರೊನಾ ವೈರಸ್ ಭೀತಿಯಿಂದ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಗಳು ಬೀದಿಗೆ ಬರುವಂತಾಗಿದೆ.

ರಾಯಚೂರು: ಕೊರೊನಾ ವೈರಸ್ ಭೀತಿಯಿಂದ ರಾಯಚೂರಿನಲ್ಲಿ ಸರ್ಕಾರಿ ಅಧಿಕಾರಿಗಳು ಬೀದಿಗೆ ಬರುವಂತಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಸಾರ್ವಜನಿಕ ಸಂಪರ್ಕ ಇರುವ ಜಿಲ್ಲಾಧಿಕಾರಿ ಕಚೇರಿಯ ಆವಾಕ, ಜಾವಕ ವಿಭಾಗಗಳನ್ನ ಕಚೇರಿಯಿಂದ ಹೊರಕ್ಕೆ ಇಡಲಾಗಿದೆ. ವಾಹನ ಪಾರ್ಕಿಂಗ್ ಬಳಿ ಟೇಬಲ್ ಹಾಕಿಕೊಂಡು ಸಿಬ್ಬಂದಿ ಕುಳಿತಿದ್ದಾರೆ. ರಸ್ತೆಯಲ್ಲೆ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿರುವ ಸಿಬ್ಬಂದಿ ಮರದ ಕೆಳಗೆ ಫೈಲ್ ಗಳನ್ನ ಹಿಡಿದು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಆದೇಶದ ಮೇರೆಗೆ ಎರಡು ವಿಭಾಗ ಕಚೇರಿಯಿಂದ ಹೊರಗೆ …

Read More »

ವೈರಮುಡಿ ಮಹೋತ್ಸವಕ್ಕೂ ತಟ್ಟುತ್ತಾ ಕೊರೊನಾ ಬಿಸಿ – ಭಕ್ತರಲ್ಲಿ ಆತಂಕ

ಮಂಡ್ಯ: ಮೇಲುಕೋಟೆಯ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವಕ್ಕೂ ಕೊರೊನಾ ವೈರಸ್ ಭೀತಿ ತಟ್ಟುತ್ತಾ ಎಂಬ ಆತಂಕ ಭಕ್ತರಲ್ಲಿ ಕಾಡುತ್ತಿದೆ. ಏಪ್ರಿಲ್ 2ರಂದು ಮೇಲುಕೋಟೆಯ ವಿಶ್ವ ಪ್ರಸಿದ್ಧ ಚಲುವನಾರಾಯಣಸ್ವಾಮಿಯ ವೈರಮುಡಿ ಮಹೋತ್ಸವ ನಡೆಸಲು ಈಗಾಗಲೇ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಇತ್ತ ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ವೈರಸ್‍ನ ಭೀತಿ ಎದುರಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಸರ್ಕಾರ 1 ವಾರಗಳ ಕಾಲ ಸೀಮಿತ ವಲಯಗಳಿಗೆ ಬಂದ್‍ನ್ನು ಸಹ ಘೋಷಣೆ …

Read More »

ಕರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚಾಮೃತ ವಿತರಣೆ ನಿಷೇಧಿಸಲಾಗಿದೆ.

ರಾಯಚೂರು: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯ ಮಠದಲ್ಲಿ ಪಂಚಾಮೃತ ವಿತರಣೆ ನಿಷೇಧಿಸಲಾಗಿದೆ. ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಭಕ್ತರಿಗೆ ವಿತರಿಸುವ ಪಂಚಾಮೃತ ನಿಲ್ಲಿಸಲಾಗಿದೆ. ಎಲ್ಲ ವೃಂದಾವನಗಳಿಗೂ ಎಂದಿನಂತೆ ಪಂಚಾಮೃತಾಭೀಷೆಕ ನಡೆಯುತ್ತದೆ. ಆದರೆ ಶನಿವಾರದಿಂದ ಭಕ್ತರಿಗೆ ವಿತರಿಸುವುದನ್ನು ಮಾತ್ರ ನಿಲ್ಲಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಪ್ರಸಾದ ಹಾಗೂ ದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ. ಜನತೆ ಮಠಕ್ಕೆ ಬರಬಾರದು ಎನ್ನುವ ವದಂತಿಗಳು ಹಬ್ಬುತ್ತಿವೆ. ಇದಾವುದಕ್ಕೂ ಕಿವಿಗೊಡದೆ, ಭಕ್ತರು ರಾಯರ ದರ್ಶನಕ್ಕೆ …

Read More »

ಮಹಾಮಾರಿ ಕರೋನಾಕ್ಕೆ ಹೆದರಿ ಕಲಬುರಗಿ ಕಡೆಗೆ ಸಚಿವರು ಬರುತ್ತಿಲ್ಲ. ಇವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಲಬುರಗಿ,ಮಾ.16- ಡೆಡ್ಲಿ ಕೊರೋನಾ ವೈರಸ್‍ನಿಂದ ಕಲಬುರಗಿಯ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಜನತೆಯ ಆತಂಕ ದೂರ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತ್ರ ಜಿಲ್ಲೆಯ ಕಡೆ ತಲೆ ಹಾಕಿಲ್ಲ. ಮಹಾಮಾರಿ ಕರೋನಾಕ್ಕೆ ಹೆದರಿ ಕಲಬುರಗಿ ಕಡೆಗೆ ಸಚಿವರು ಬರುತ್ತಿಲ್ಲ. ಇವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲೇ ಕೊರೋನಾಕ್ಕೆ ಮೊದಲ ಬಲಿ ಕಲಬುರಗಿಯಲ್ಲಿ ಆಗಿದ್ದು, ಕಲಬುರಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೊರೋನಾ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. …

Read More »

31ಸಾವಿರ ಮನೆಗಳಿಗೆ 183 ಕೋಟಿ ರೂ.ಗಳು ಬಿಡುಗಡೆ:ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು, ಮಾ.16- ರಾಜ್ಯದಲ್ಲಿ 31ಸಾವಿರ ಮನೆಗಳಿಗೆ 183 ಕೋಟಿ ರೂ.ಗಳು ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಅವರ ಪರವಾಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರ್ಹ ಫಲಾನುಭವಿಗಳ ಖಾತೆಗೆ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ವಸತಿ ಯೋಜನೆಯಡಿ ಮನೆ ನಿರ್ಮಾಣದ ಪ್ರಗತಿಯ ಮಾಹಿತಿ ಪಡೆಯುವ ಸಂಬಂಧ ಶಾಸಕರಿಗೆ ಪತ್ರ ಬರೆದು ವಿಧಾನಸಭಾ …

Read More »