ಬೆಂಗಳೂರು: ಕಾನೂನು ಪಾಲನೆ ಮಾಡಿ ಅನ್ನೋದೆ ತಪ್ಪಾಗಿ ಹೋಗಿದೆ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸ್ತಿದ್ದ ಯುವಕನನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಪೇದೆಗೆ ಹಲ್ಲು ಮುರಿಯುವಂತೆ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.ಹೆಲ್ಮೆಟ್ ಧರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೇದೆ ಮೇಲೆ ಹಲ್ಲೆ ಮಾಡಿದ್ದ ವಿಜಯ್ ತರುಣ್ (21) ಬಂಧನ ಮಾಡಲಾಗಿದೆ. ಮಂಗಳವಾರ ಸಂಜೆ 5:30 ರ ಸುಮಾರಿಗೆ ತನ್ನ ಗೆಳೆಯನೊಂದಿಗೆ ಬರುತ್ತಿದ್ದ ಆರೋಪಿ ವಿಜಯ್ ತರುಣ್ ನನ್ನ ಪೊಲೀಸರು ತಡೆದಿದ್ದರು.ಈ ವೇಳೆ ಹೆಲ್ಮೆಟ್ ಧರಿಸದೇ ಇರುವುದನ್ನು ಪ್ರಶ್ನಿಸಿದ್ದಕ್ಕೆ ಅಶ್ಲೀಲವಾಗಿ ಕೈ ತೋರಿಸಿ ಹಲ್ಲೆ ಮಾಡಿದ್ದ. ಹೈಗ್ರೌಂಡ್ಸ್ ಸಂಚಾರಿ ಠಾಣೆ ಪೇದೆ ರಮೇಶ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಹಲ್ಲೆಯಿಂದಾಗಿ ಪೊಲೀಸ್ ಪೇದೆಯ ಹಲ್ಲಿನ ಚಿಪ್ಪು ಮುರಿದಿತ್ತು. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ರಮೇಶ್ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Check Also
ಮುಂದಿನ ಪೀಳಿಗೆಗಾಗಿ ವನ್ಯ ಸಂಪತ್ತನ್ನು ಸಂರಕ್ಷಿಸಿ ಇಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ
Spread the love ಖಾನಾಪುರ: ‘ಮುಂದಿನ ಪೀಳಿಗೆಗಾಗಿ ವನ್ಯ ಸಂಪತ್ತನ್ನು ಸಂರಕ್ಷಿಸಿ ಇಡುವ ಗುರುತರ ಜವಾಬ್ದಾರಿ ನಮ್ಮೆಲ್ಲ ಮೇಲಿದೆ. ಪ್ರಪಂಚ …