Breaking News
Home / ಜಿಲ್ಲೆ / ಕೊರೊನಾ ಭೀತಿ- ಕೋಳಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ನಷ್ಟ

ಕೊರೊನಾ ಭೀತಿ- ಕೋಳಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ನಷ್ಟ

Spread the love

ಕೊರೊನಾ ಭೀತಿ- ಕೋಳಿ ಉದ್ಯಮದಲ್ಲಿ 1 ಸಾವಿರ ಕೋಟಿ ರೂ. ನಷ್ಟ

ಬೆಂಗಳೂರು: ವಿಶ್ವದೆಲ್ಲೆಡೆ ಹಬ್ಬಿರುವ ಕೊರೊನಾ ಭೀತಿಗೆ ರಾಜ್ಯದ ಕೋಳಿ ಸಾಕಾಣಿಕಾ ರೈತರು, ಉದ್ಯಮಿಗಳು ತೀವ್ರ ನಷ್ಟಕ್ಕೆ ಸಿಲುಕಿದ್ದಾರೆ. ಫೆಬ್ರವರಿ ತಿಂಗಳಿಂದ ಇಂದಿನವರೆಗೆ ಒಂದು ಸಾವಿರ ಕೋಟಿ ರೂಪಾಯಿ ಕೋಳಿ ಉದ್ಯಮದಲ್ಲಿ ನಷ್ಟವಾಗಿದೆ ಎಂದು ಕರ್ನಾಟಕ ಸಹಕಾರಿ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಟ್ಟು 15 ಸಾವಿರ ರೈತರು ಕೋಳಿ ಸಾಕಾಣಿಕೆ ಮಾಡುತ್ತಿದ್ದು, 15 ಲಕ್ಷ ಕುಟುಂಬಗಳು ಇದರ ಮೇಲೆ ಅವಲಂಬಿತವಾಗಿದೆ. ರೈತರು ಕೋಳಿ ಸಾಕಾಣಿಕೆ ಮಾಡಿ, ಮಾರಾಟವಾಗದೆ, ಸಾಲ ಮರುಪಾವತಿಯೂ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ.80 ರೂಪಾಯಿ ಒಂದು ಕೋಳಿಯ ಬೆಲೆಯಾದ್ರೆ 10 ರೂಪಾಯಿ, 15 ರೂಪಾಯಿಗೆ ಮಾರಾಟವಾಗ್ತಿದೆ. ಬೆಂಗಳೂರು ಒಂದರಲ್ಲೇ ದಿನವೊಂದಕ್ಕೆ 4 ಲಕ್ಷ ಕೆ.ಜಿ ಕೋಳಿ ಮಾರಾಟವಾಗ್ತಿತ್ತು. ರಾಜ್ಯದಲ್ಲಿ ಒಟ್ಟು 10 ಲಕ್ಷ ಕೆ.ಜಿ ದಿನಕ್ಕೆ ಮಾರಾಟವಾಗ್ತಿತ್ತು. ಆದರೆ ಕೋಳಿ ಮಾಂಸ ಕೊಳ್ಳುವವರ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿದೆ. ಕುಕ್ಕುಟೋದ್ಯಮ ಚೇತರಿಸಿಕೊಳ್ಳಲು ಬಹಳ ಸಮಯ ಬೇಕು. ಜನರು ತಪ್ಪು ಮಾಹಿತಿಯಿಂದ ಕೋಳಿ ಖರೀದಿಸುತ್ತಿಲ್ಲ ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.

ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೋಳಿಯಿಂದ ಕರೊನಾ ಎಂದು ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ