ಹುಬ್ಬಳ್ಳಿ: ಈ ಮಕ್ಕಳಿಗೆ ಬಡತನವಿದೆ. ಆದ್ರೆ ಇವರು ಪಡೆದ ವಿದ್ಯೆಗೆ ಮಾತ್ರ ಬಡತನವಿಲ್ಲ. ಇಬ್ಬರು ಮಕ್ಕಳು ಹೊಂದಿರುವ ಪ್ರಪಂಚ ಜ್ಞಾನವು ಅವರನ್ನು ವಿಶ್ವದಾಖಲೆಯ ಪುಟಗಳಲ್ಲಿ ಸೇರುವಂತೆ ಮಾಡಿದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಬಹುದೊಡ್ಡ ಸಾಧನೆ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗಲ್ ಪಟ್ಟಣದ ಅಪ್ಪು ವಿದ್ಯಾಧಾಮದ ಬಾಲಕ ಶಿವರಾಜ ಹಾಗೂ ಬಾಲಕಿ ಸಂಜನಾ ಎಂಬ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಮಟ್ಟದ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. …
Read More »ಕಾವೇರಿ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಕಾವೇರಿ ಜಲ ವಿವಾದದ ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದಾರೆ ನಾವು ಕೇಂದ್ರದಿಂದ ಎಲ್ಲ ಸಹಕಾರ ಕೊಡ್ತೀದಿವಿ.ಮುಂದೆಯೂ ಕೊಡ್ತೀವಿ.ವಿಚಾರ ಕೋರ್ಟ್ ನಲ್ಲಿರೋ ಕಾರಣ ನಾನು ಬಹಳ ಮಾತಾಡಲ್ಲ. ಮೊನ್ನೆ ಡಿಕೆ ಶಿವಕುಮಾರ್ ನಮ್ಮ ಮನೆಗೆ ಬಂದಾಗ ವಿವರವಾಗಿ ಮಾತಾಡಿದ್ದೇನೆ ಎಂದರು.CWMA ನಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ಮಾಡೋಕೆ ಬರಲ್ಲ ಇದು ಸೌಹಾರ್ದಯುತವಾಗಿ ಬಗೆಹರಿಸಬೇಕು. ಡಿಎಂಕೆ ನಾಯಕರಿಗೆ ನೀವು ಮೊದಲು ಶಾಲು …
Read More »ಸೋಮವಾರ ದಾವಣಗೆರೆ ಬಂದ್ಗೆ ಕರೆ ನೀಡಿದ ಭಾರತೀಯ ರೈತ ಒಕ್ಕೂಟ..
ದಾವಣಗೆರೆ: ಮಂಡ್ಯದಲ್ಲಿ ಕಾವೇರಿ ಕಾವು ಜೋರಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಇಂದು ರೈತರು ಬಂದ್ ಮಾಡಿದರು. ಇತ್ತ ದಾವಣಗೆರೆಯಲ್ಲೂ ಕೂಡ ಭದ್ರಾ ಕಿಚ್ಚು ಕಾವೇರಿದ್ದು, ನೀರು ಹರಿಸುವಂತೆ ಭತ್ತ ನಾಟಿ ಮಾಡಿರುವ ರೈತರು ಕಳೆದ ಒಂದು ವಾರದಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಭದ್ರಾ ನೀರಿಗಾಗಿ ಬೀದಿಗಿಳಿದ ರೈತರು ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಭದ್ರಾ ನೀರು ಹರಿಸದೇ ಇರುವುದರ ಹಿನ್ನೆಲೆ ಭಾರತೀಯ ರೈತ ಒಕ್ಕೂಟದಿಂದ ಸೋಮವಾರ ದಾವಣಗೆರೆ ಜಿಲ್ಲೆ ಬಂದ್ಗೆ ಕರೆ ನೀಡಲಾಗಿದೆ. …
Read More »ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎನ್ ಎಂ ಸುರೇಶ್ ಆಯ್ಕೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಎನ್ ಎಂ ಸುರೇಶ್ ಜಯ ಗಳಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ಮಾಪಕ ಎನ್ ಎಂ ಸುರೇಶ್ ಗೆಲುವು ಸಾಧಿಸಿದ್ದಾರೆ. ಈ ಬಾರಿ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವು ವಿತರಕರ ವಲಯಕ್ಕೆ ಮೀಸಲಾಗಿದ್ದು, ಇದೇ ಮೊದಲ ಬಾರಿಗೆ ನಾಲ್ವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಎನ್ ಎಂ ಸುರೇಶ್, ಮಾರ್ಸ್ ಸುರೇಶ್, ಎ. …
Read More »ಮಹಿಳಾ ಮೀಸಲಾತಿ ಬಿಲ್ ಅನುಷ್ಠಾನ ಆಗುವುದೇ ಅನುಮಾನ: ಸಿದ್ದರಾಮಯ್ಯ
ಬೆಂಗಳೂರು: ಕ್ಷೇತ್ರ ಪುನರ್ ವಿಂಗಡಣೆ, ಜನಗಣತಿಯೆಂಬ ಕೊಕ್ಕೆಯನ್ನಿಟ್ಟು ಪ್ರಕಟಿಸಿರುವ ಮಹಿಳಾ ಮೀಸಲು ಸಂಪೂರ್ಣ ಅನುಷ್ಠಾನ ಸಂಶಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಮೀಸಲಾತಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕ್ಷೇತ್ರ ಪುನರ್ ವಿಂಗಡಣೆ, …
Read More »ಗುಜರಾತ್: ಗೌತಮ್ ಅದಾನಿ ಸಮ್ಮುಖದಲ್ಲಿ ಲ್ಯಾಕ್ಟೋಫೆರಿನ್ ಘಟಕ ಉದ್ಘಾಟಿಸಿದ ಶರದ್ ಪವಾರ್
ವಾಸ್ನಾ (ಗುಜರಾತ್): ಗುಜರಾತ್ನಲ್ಲಿ ದೇಶದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್ಮ್ಪವರ್ಅನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಕೈಗಾರಿಕೋದ್ಯಮಿ ಮತ್ತು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಸಮ್ಮುಖದಲ್ಲಿ ಉದ್ಘಾಟಿಸಿದರು. 82 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಈ ಕುರಿತು ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಟ್ವಿಟರ್)ನಲ್ಲಿ ಕಾರ್ಯಕ್ರಮದ ಫೋಟೋಗಳ ಸಮೇತ ಪೋಸ್ಟ್ ಮಾಡಿದ್ದಾರೆ. “ಗುಜರಾತ್‌ನ ವಾಸ್ನಾಯ ಚಚಾರ್ವಾಡಿಯಲ್ಲಿ ಭಾರತದ …
Read More »ಬೆಳಗಾವಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವ ಗಣೇಶ
ಬೆಳಗಾವಿ: ಅದೆಷ್ಟೋ ಮಕ್ಕಳು ಮನೆಯಲ್ಲಿ ಬಡತನ ಸೇರಿದಂತೆ ಮತ್ತಿತರ ಕಾರಣಗಳಿಂದ ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಮಕ್ಕಳು ಅಡ್ಡದಾರಿ ಹಿಡಿದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಬಾರದು ಎಂದು ಬೆಳಗಾವಿಯಲ್ಲಿ ಗಣೇಶ ಮೂರ್ತಿಯ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಇಡೀ ರಾಜ್ಯದಲ್ಲೇ ವಿಶೇಷವಾಗಿ ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತದೆ. ಇಲ್ಲಿನ ಗಣೇಶ ಮಂಡಳಿಗಳು ಸಾಮಾಜಿಕ, ಆಧ್ಯಾತ್ಮಿಕ, ಆರೋಗ್ಯ ಸೇವೆ ಸಲ್ಲಿಸುವ ಜೊತೆಗೆ ಶಿಕ್ಷಣದ ಮಹತ್ವವನ್ನು ಸಾರುತ್ತಿವೆ. ಕುಲಕರ್ಣಿ …
Read More »ಬೆಳಗಾವಿ ಜಿಲ್ಲಾ ಮಟ್ಟದ ಸೈಕಲಿಂಗ್ ಸ್ಪರ್ಧೆ
ಬೆಳಗಾವಿ ಜಿಲ್ಲಾ ಪದವಿಪೂರ್ವ ಇಲಾಖೆ ಹಾಗೂ ಎಕ್ಸ್ಪರ್ಟ್ ಪಿ ಯು ಸಿ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ PUC ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸೈಕಲಿಂಗ್ ( cycling) ಮತ್ತು Cross Country ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತಾನಾಡಿದ ಶ್ರೀ ಸುರೇಶ ಪೌoಡೆಶನ್ ಅಧ್ಯಕ್ಷರಾದ ಶ್ರೀ ಸುರೇಶ ಯಾದವ ಅವರು ಈಗಿನ ವಿದ್ಯಾರ್ಥಿಗಳಲ್ಲಿ ಸ್ಪೋರ್ಟ್ಸ್ ದ ಬಗ್ಗೆ ಕಾಳಜಿ ಕಡಿಮೆಯಾಗಿ ಕೇವಲ ಮೊಬೈಲ್ ಉಪಯೋಗ ಹೆಚ್ಚಾಗಿದೆ. ಇಂತ ಸಮಯದಲ್ಲಿ ಇಲಾಖೆ ಮತ್ತು ಕಾಲೇಜದವರು …
Read More »ಭಾರತೀಯ ಕರಾಟೆ ಸಂಸ್ಥೆಯ ವತಿಯಿಂದ ಇಂದು ಲೇಡಿಸ್ ಕ್ಲಬ್ ನಲ್ಲಿ ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆ
ಬೆಳಗಾವಿಯ ಖ್ಯಾತ ಕರಾಟೆ ಪಟು ಮಧು ಪಾಟೀಲ ಆಯೋಜಿಸಿದ್ದ ಭಾರತೀಯ ಕರಾಟೆ ಸಂಸ್ಥೆಯ ವತಿಯಿಂದ ಇಂದು ಲೇಡಿಸ್ ಕ್ಲಬ್ ನಲ್ಲಿ ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆ ನಡೆಯಿತು. ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆಯಲ್ಲಿ 40 ಕರಾಟೆ ಪಟುಗಳು ಭಾಗವಹಿಸಿದ್ದರು. ಅವರಲ್ಲಿ 10 ವಿದ್ಯಾರ್ಥಿಗಳು ಕಿತ್ತಳೆ ಬೆಲ್ಟ್ ಪಡೆದರು. ರಿಯಾ ಅಶ್ವ ಶಾ, ಶ್ರೀಧರ್, ಇಂದ್ರಜ ಕಾಳೆ, ನೇಹಾ ಪೋಟೆ, ಬ್ಲೂ ಬೆಲ್ಟ್ ಪಡೆದರು. ವಂದನಾ ಕುರುಪ್, ರಿಯಾ ವರ್ನೇಕರ್, ಸಾಯಿರಾಜ್ …
Read More »ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಕಂಡಕ್ಟರ್ ಸೇರಿ 15ಕ್ಕೂ ಹೆಚ್ಚು ಜನರಿಗೆ ಗಾಯ
ರಾಯಚೂರು: ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಂಡಕ್ಟರ್ ಸೇರಿದಂತೆ 15ಕ್ಕೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ. ಬಸ್ ಸಿಂಧನೂರಿನಿಂದ ಅಂಕಲಿಮಠಕ್ಕೆ ಕಡೆಗೆ ಹೋಗುವಾಗ ಮಾರ್ಗದ ಮಧ್ಯದಲ್ಲಿ ಈ ದುರ್ಘಟನೆ ನಡೆದಿದೆ. ಲಾರಿಯೊಂದು ಪಂಚರ್ ಆಗಿ ರಸ್ತೆ ಪಕ್ಕದಲ್ಲಿ ನಿಂತಿತ್ತು. ಆದರೆ, ರಾತ್ರಿ ವೇಳೆಯಲ್ಲಿ ಲಾರಿ ನಿಲುಗಡೆ ಮಾಡಿರುವುದನ್ನು ಸೂಚಿಸಲು ಇಂಡಿಕೇಟರ್ …
Read More »